ನವದೆಹಲಿ: ದೇಶದ ಆರ್ಥಿಕತೆಯನ್ನು ಹಳಿಗೆ ಮರಳುವಂತೆ ಮಾಡಲು ಆದ್ಯತೆಯ ಮೇರೆಗೆ ವೆಚ್ಚ ಮಾಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಮಾಜಿ ಗವರ್ನರ್ ರಘುರಾಂ ರಾಜನ್ ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಷೇರುಪೇಟೆಗಳು ದಾಖಲೆ ಮಟ್ಟದಲ್ಲಿ ಇರುವುದರ ಪ್ರಯೋಜನ ಪಡೆದುಕೊಂಡು ಕೇಂದ್ರೋದ್ಯಮಗಳ (ಪಿಎಸ್‌ಯು) ಷೇರುಗಳನ್ನು ಮಾರಾಟ ಮಾಡುವಂತೆಯೂ ಅವರು ಸಲಹೆ ನೀಡಿದ್ದಾರೆ.

‘ಏಪ್ರಿಲ್ 1ರಿಂದ ಆರಂಭವಾಗಲಿರುವ ಹಣಕಾಸು ವರ್ಷದಲ್ಲಿ ಬಡ ಕಟುಂಬಗಳು ಹಾಗೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ನೆಮ್ಮದಿ ನೀಡುವ ಕಡೆಗೆ ಮುಂಬರುವ ಬಜೆಟ್ ಮೊದಲು ಗಮನ ನೀಡಬೇಕು’ ಎಂದಿದ್ದಾರೆ.

‘ಆರ್ಥಿಕತೆಯನ್ನು ಹಳಿಗೆ ತರಲು ಮೂಲಸೌಕರ್ಯ ಯೋಜನೆಗಳ ಮೇಲಿನ ವೆಚ್ಚ ಹೆಚ್ಚಿಸುವುದು ಉತ್ತಮ ಮಾರ್ಗವಾಗಿದೆ. ಈ ಕುರಿತು ಸರ್ಕಾರ ಗಮನ ಹರಿಸಲೇಬೇಕು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.