ಮುಂಬೈ (ಪಿಟಿಐ): ₹2 ಸಾವಿರ ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಅಥವಾ ಠೇವಣಿ ಇಡಲು ನೀಡಿದ್ದ ಗಡುವನ್ನು ಅಕ್ಟೋಬರ್ 7ರವರೆಗೆ ವಿಸ್ತರಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಹಿಂದಿನ ಆದೇಶದಲ್ಲಿ ಸೆಪ್ಟೆಂಬರ್ 30 (ಶನಿವಾರ) ಕಡೆಯ ದಿನ ಎಂದು ಹೇಳಿತ್ತು.

ಮೇ 19ರಿಂದ ಈವರೆಗೆ ₹2 ಸಾವಿರ ಮುಖಬೆಲೆಯ ಒಟ್ಟು ₹3.42 ಲಕ್ಷ ಕೋಟಿ ಮೌಲ್ಯದ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ಟೋಬರ್ 7ರ ನಂತರವು ಈ ನೋಟುಗಳ ಕಾನೂನು ಮಾನ್ಯತೆಯು ಮುಂದುವರಿಯಲಿದೆ. ಆದರೆ, ಬ್ಯಾಂಕ್ ಶಾಖೆಗಳಲ್ಲಿ ಬೇರೆ ಮುಖಬೆಲೆಯ ನೋಟುಗಳೊಂದಿಗೆ ಬದಲಿಸಿಕೊಳ್ಳಲು ಅಥವಾ ಠೇವಣಿ ಇಡಲು ಆಗುವುದಿಲ್ಲ. ಆರ್‌ಬಿಐ ಕಚೇರಿಗಳಲ್ಲಿ ಮಾತ್ರವೇ ಬದಲಾಯಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.