ಬೆಂಗಳೂರು: ದೇಶದ ಪ್ರಮುಖ ಟೆಲಿಕಾಂ ಸೇವಾದಾರ ಕಂಪನಿ ರಿಲಯನ್ಸ್ ಜಿಯೊ, ಗ್ರಾಹಕರಿಗೆ ವಾಟ್ಸ್ಆ್ಯಪ್ ಮೂಲಕವೇ ರೀಚಾರ್ಜ್ ಮಾಡುವ ಆಯ್ಕೆಯನ್ನು ಶೀಘ್ರದಲ್ಲೇ ಒದಗಿಸಲಿದೆ.

ಜಿಯೊ ಪ್ಲಾಟ್ಫಾರ್ಮ್ಸ್ ನಿರ್ದೇಶಕ ಆಕಾಶ್ ಅಂಬಾನಿ ಅವರು ಈ ಕುರಿತು ಬುಧವಾರ ಮಾಹಿತಿ ನೀಡಿದ್ದಾರೆ.

ಮೆಟಾ ಫ್ಯುಯೆಲ್ ಫಾರ್ ಇಂಡಿಯಾ 2021ರಲ್ಲಿ ಈ ಬಗ್ಗೆ ವಿವರ ನೀಡಿರುವ ಅವರು, ಹೊಸ ಆಯ್ಕೆಯನ್ನು ಬಳಕೆದಾರರಿಗೆ ಪರಿಚಯಿಸುವ ಕುರಿತಂತೆ ಮೆಟಾ ಒಡೆತನದ ವಾಟ್ಸ್ಆ್ಯಪ್ ಮತ್ತು ಜಿಯೊ ಕಾರ್ಯನಿರತವಾಗಿದೆ ಎಂದಿದ್ದಾರೆ.

ಪ್ರಿಪೇಯ್ಡ್ ಗ್ರಾಹಕರು ಅಧಿಕ ಸಂಖ್ಯೆಯಲ್ಲಿದ್ದು, ಸರಳ ಮತ್ತು ಯಾವುದೇ ಹೆಚ್ಚಿನ ಪ್ರಕ್ರಿಯೆಯಿಲ್ಲದಂತೆ ರೀಚಾರ್ಜ್ ಆಯ್ಕೆಯನ್ನು ನೀಡಲು ಹೊಸ ಆಯ್ಕೆಯನ್ನು 2022ರಲ್ಲಿ ನೀಡಲು ರಿಲಯನ್ಸ್ ಮುಂದಾಗಿದೆ.

2022 | ಜನವರಿಯಿಂದ ಕಾರ್ ಬೆಲೆ ಹೆಚ್ಚಳ: ಮಾರುತಿ

ಜಿಯೊ ಪ್ಲಾಟ್ಫಾರ್ಮ್ಸ್ ನಿರ್ದೇಶಕಿ ಇಶಾ ಅಂಬಾನಿ, ಈ ವ್ಯವಸ್ಥೆ ಅತ್ಯಂತ ಸುಲಭ ಮತ್ತು ಸುರಕ್ಷಿತವಾಗಿರಲಿದೆ. ಹಿರಿಯ ನಾಗರಿಕರಿಗೆ ಪ್ರಮುಖವಾಗಿ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದಿದ್ದಾರೆ.

ವಾಟ್ಸ್ಆ್ಯಪ್ ಮೂಲಕವೂ ಉಬರ್ ಬುಕಿಂಗ್ ಸೌಲಭ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.