ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೀಡಿರುವ ಪ್ರಸ್ತಾವನೆಯು ಅಂತಿಮಗೊಂಡರೆ, 15 ವರ್ಷಕ್ಕಿಂತ ಹಳೆಯ ಸರ್ಕಾರಿ ವಾಹನಗಳ ನೋಂದಣಿ ನವೀಕರಣವುಏಪ್ರಿಲ್ 1ರ ಬಳಿಕ ಸಾಧ್ಯವಾಗುವುದಿಲ್ಲ.

ಸರ್ಕಾರದ ಎಲ್ಲಾ ವಾಹನಗಳಿಗೆ; ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರೋದ್ಯಮಗಳು, ಮಹಾನಗರ ಪಾಲಿಕೆ ಮತ್ತು ಸ್ವಾಯತ್ತ ಸಂಸ್ಥೆಗಳ ಎಲ್ಲಾ ವಾಹನಗಳಿಗೂ ಇದು ಅನ್ವಯವಾಗಲಿದೆ.

ಈ ಕುರಿತು ಸಚಿವಾಲಯವು ಶನಿವಾರ ಟ್ವೀಟ್ ಮಾಡಿದೆ.

ಕರಡು ನಿಯಮಗಳ ಕುರಿತು ಪ್ರತಿಕ್ರಿಯೆ, ಸಲಹೆ, ಆಕ್ಷೇಪ ಇದ್ದಲ್ಲಿ 30 ದಿನಗಳ ಒಳಗೆ ತಿಳಿಸುವಂತೆ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದೆ.

ಹಳೆಯ ವಾಹನಗಳನ್ನು ಸ್ವಯಂಪ್ರೇರಿತರಾಗಿ ಗುಜರಿಗೆ ಹಾಕುವ ನೀತಿ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಹೊಸ ಗುಜರಿ ನೀತಿಯಿಂದಾಗಿ ₹ 10 ಸಾವಿರ ಕೋಟಿಗಳಷ್ಟು ಹೂಡಿಕೆ ಆಗಲಿದ್ದು, 50 ಸಾವಿರ ಉದ್ಯೋಗ ಸೃಷ್ಟಿ ಆಗುವ ಅಂದಾಜು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.