ನವದೆಹಲಿ: ಗ್ರಾಹಕರೊಬ್ಬರಿಗೆ ಸಸ್ಯಾಹಾರಕ್ಕೆ ಬದಲಿಗೆ ಮಾಂಸಾಹಾರ ನೀಡಿದ್ದಕ್ಕಾಗಿ ಜೋಧ್‌ಪುರದ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಯು ಜೊಮಾಟೊ ಮತ್ತು ಮೆಕ್‌ಡೊನಾಲ್ಡ್ ಕಂಪನಿಗಳಿಗೆ ಒಟ್ಟು ₹1 ಲಕ್ಷ ದಂಡ ವಿಧಿಸಿದೆ ಎಂದು ಜೊಮಾಟೊ ಶುಕ್ರವಾರ ಹೇಳಿದೆ. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಕಂಪನಿಯು ಷೇರುಪೇಟೆಗೆ ತಿಳಿಸಿದೆ.

ಗ್ರಾಹಕ ಹಿತರಕ್ಷಣಾ ಕಾಯ್ದೆ 2019ರ ಉಲ್ಲಂಘನೆ ಮಾಡಿರುವ ಸಂಬಂಧ ಈ ದಂಡ ವಿಧಿಸಲಾಗಿದೆ. ದಾವೆಯ ವೆಚ್ಚವಾದ ₹5 ಸಾವಿರವನ್ನೂ ಕಟ್ಟುವಂತೆ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಎರಡೂ ಕಂಪನಿಗಳು ಜಂಟಿಯಾಗಿ ದಂಡ ಮತ್ತು ವ್ಯಾಜ್ಯದ ವೆಚ್ಚವನ್ನು ಪಾವತಿಸಬೇಕಿದೆ.

ಗ್ರಾಹಕರು ಆರ್ಡರ್ ಮಾಡಿರುವ ಆಹಾರಕ್ಕೆ ಬದಲಾಗಿ ಬೇರೆ ಆಹಾರವನ್ನು ತಪ್ಪಾಗಿ ನೀಡಲಾಗಿದೆ ಎನ್ನುವುದು ಆರೋಪ. ಆದರೆ, ಜೊಮಾಟೊ ಕಂಪನಿಯು ರೆಸ್ಟೋರೆಂಟ್ ನೀಡುವ ಆಹಾರವನ್ನು ಸಂಬಂಧಪಟ್ಟ ಗ್ರಾಹಕರಿಗೆ ತಲುಪಿಸುವ ಕೆಲಸವನ್ನಷ್ಟೇ ಮಾಡುತ್ತದೆ. ಹೀಗಾಗಿ, ಸೇವೆಯಲ್ಲಿ ಯಾವುದೇ ರೀತಿಯ ಕೊರತೆ ಕಂಡುಬಂದರೆ, ಆರ್ಡರ್‌ನಲ್ಲಿ ಬದಲಾವಣೆ ಆದರೆ, ಆರ್ಡರ್ ನೀಡಿದ್ದಕ್ಕೆ ಬದಲಾಗಿ ಬೇರೆಯದನ್ನು ನೀಡಿದರೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಆಹಾರವನ್ನು ನೀಡುವ ರೆಸ್ಟೋರೆಂಟ್ ಹೊಣೆಗಾರ ಆಗಲಿದೆ ಎಂದು ಜೊಮಾಟೊ ಕಂಪನಿಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.