ಮುಂಬೈ: ನಿಷೇಧಿತ ₹ 2 ಸಾವಿರ ಮುಖಬೆಲೆಯ ಶೇ 97.87ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸೋಮವಾರ ಹೇಳಿದೆ. ₹7,581 ಕೋಟಿಯಷ್ಟು ಹಣ ಇನ್ನೂ ಜನರ ಬಳಿಯೇ ಇದೆ ಎಂದು ಅದು ಮಾಹಿತಿ ನೀಡಿದೆ.

2023ರ ಮೇ 19ರಂದು ಆರ್ಬಿಐ ₹2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿತ್ತು.
.₹2 ಸಾವಿರ ಮುಖಬೆಲೆಯ ಶೇ 97.82ರಷ್ಟು ನೋಟು ವಾಪಸ್: RBI.
ಮೇ 19ರಂದು ವಹಿವಾಟು ಅಂತ್ಯಗೊಂಡಾಗ ₹2 ಸಾವಿರ ಮುಖಬೆಲೆಯ ₹3.56 ಲಕ್ಷ ಕೋಟಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು. 2024ರ ಜೂನ್ 28ರಂದು ಅದರ ಮೌಲ್ಯ ₹7,581 ಕೋಟಿ ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

2023ರ ಅಕ್ಟೋಬರ್ 7ರವರೆಗೂ ಬ್ಯಾಂಕ್ಗಳಲ್ಲಿ ₹2 ಸಾವಿರ ಮೌಲ್ಯದ ನೋಟುಗಳನ್ನು ಠೇವಣಿ ಇಡಲು ಹಾಗೂ ಬದಲಾಯಿಸಿಕೊಳ್ಳಲು ಅವಕಾಶ ನೀಡಿತ್ತು. ಆ ಬಳಿಕ ಆರ್ಬಿಐನ ವಿತರಣಾ ಕಚೇರಿಗಳು ನೋಟುಗಳನ್ನು ಸ್ವೀಕರಿಸುತ್ತಿವೆ.
.ಏಪ್ರಿಲ್ 1ರಂದು ₹2 ಸಾವಿರ ನೋಟು ವಿನಿಮಯವಿಲ್ಲ: ಆರ್ಬಿಐ.
ಬೆಂಗಳೂರು, ಬೆಲಾಪುರ, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತ, ಅಹಮದಾಬಾದ್, ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ಪಟ್ನಾ ಹಾಗೂ ತಿರುವನಂತಪುರದಲ್ಲಿರುವ ಆರ್ಬಿಐ ಕಚೇರಿಗಳಲ್ಲಿ ಹಣ ಬದಲಾಯಿಸಿಕೊಳ್ಳಲು ಅವಕಾಶ ಇದೆ.

2016ರ ನವೆಂಬರ್ನಲ್ಲಿ ₹1 ಸಾವಿರ ಹಾಗೂ ₹ 500 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ₹ 2 ಸಾವಿರ ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಗಿತ್ತು.
.2024–25ನೇ ಆರ್ಥಿಕ ವರ್ಷದ ಜಿಡಿಪಿ ಶೇ 7.2ರಷ್ಟು ಪ್ರಗತಿ: ಆರ್ಬಿಐ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.