ನವದೆಹಲಿ (ಪಿಟಿಐ): ಹೊಸ ಐ.ಟಿ. ಪೋರ್ಟಲ್ ಬಳಕೆಗೆ ಬಂದು ಎರಡು ತಿಂಗಳು ಕಳೆದರೂ ತಾಂತ್ರಿಕ ದೋಷಗಳು ಮುಂದುವರಿದಿರುವ ಕುರಿತು ಖುದ್ದಾಗಿ ವಿವರಣೆ ನೀಡುವಂತೆ ಕೇಂದ್ರ ಹಣಕಾಸು ಸಚಿವಾಲಯವು ಇನ್ಫೊಸಿಸ್ ಸಿಇಒ ಸಲೀಲ್ ಪಾರೇಖ್ ಅವರಿಗೆ ಸೂಚಿಸಿದೆ.

ಸತತ ಎರಡು ದಿನಗಳಿಂದ ಪೋರ್ಟಲ್ ಬಳಕೆಗೆ ಲಭ್ಯವಾಗದ ಬೆನ್ನಲ್ಲೇ ಸಚಿವಾಲಯವು ಈ ಕ್ರಮ ಕೈಗೊಂಡಿದೆ. ಸಮಸ್ಯೆಗಳ ಕುರಿತಾಗಿ ಪಾರೇಖ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸೋಮವಾರ ವಿವರಣೆ ನೀಡಬೇಕಿದೆ.

‘ಆದಾಯ ತೆರಿಗೆ ಇಲಾಖೆಯ ಜಾಲತಾಣವು ತುರ್ತು ನಿರ್ವಹಣೆಯಲ್ಲಿದೆ. ಅದು ಬಳಕೆಗೆ ಲಭ್ಯವಾದ ಬಳಿಕ ಆ ಬಗ್ಗೆ ತೆರಿಗೆ ಪಾವತಿದಾರರಿಗೆ ಮಾಹಿತಿ ನೀಡಲಾಗುವುದು. ಅಡಚಣೆಗಾಗಿ ವಿಷಾದಿಸುತ್ತೇವೆ’ ಎಂದು ಇನ್ಫೊಸಿಸ್ ಭಾನುವಾರ ಟ್ವೀಟ್ ಮಾಡಿದೆ.

ಐ.ಟಿ. ವಿವರ ಸಲ್ಲಿಸಲು ಇನ್ಫೊಸಿಸ್ ಅಭಿವೃದ್ಧಿಪಡಿಸಿರುವ www.incometax.gov.in ಪೋರ್ಟಲ್ ಅನ್ನು ಜೂನ್7ರಂದು ಬಿಡುಗಡೆ ಮಾಡಲಾಗಿತ್ತು. ಆ ದಿನದಿಂದಲೂ ಒಂದಲ್ಲ ಒಂದು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಲೇ ಇವೆ. ಈ ಕಾರಣದಿಂದಾಗಿ ಆದಾಯ ತೆರಿಗೆ ಇಲಾಖೆಯು ಮ್ಯಾನುಯಲ್ ಫೈಲಿಂಗ್ಗೆ ಅವಕಾಶ ನೀಡ
ಬೇಕಾಯಿತು.

ಎನ್ಎಂಪಿ: ನಿರ್ಮಲಾ ಅವರಿಂದ ಸೋಮವಾರ ಚಾಲನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.