ಮುಂಬೈ: ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್‌ಸಂಗ್ ಕಂಪನಿ ಇದೇ ಮೊದಲ ಬಾರಿಗೆ ತನ್ನ ತವರಾದ ದಕ್ಷಿಣ ಕೊರಿಯಾದಿಂದ ಹೊರಗಡೆ ಸ್ವಂತ ಅತ್ಯಾಧುನಿಕ ಸ್ಟೋರ್ ಅನ್ನು (SAMSUNG BKC) ಮುಂಬೈನಲ್ಲಿ ತೆರೆದಿದೆ.

ಕಳೆದ ಮಂಗಳವಾರ ಇದು ಲೋಕಾರ್ಪಣೆಗೊಂಡಿದೆ.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ಪ್ರದೇಶದ ಜಿಯೊ ವರ್ಲ್ಡ್ ಮಾಲ್‌ನಲ್ಲಿ ಸುಮಾರು 8 ಸಾವಿರ ಚದರ ಅಡಿ ಪ್ರದೇಶದಲ್ಲಿ ಸ್ಯಾಮ್‌ಸಂಗ್‌ನ ಈ ಸ್ಟೋರ್ ತಲೆ ಎತ್ತಿದೆ.

ವಿಶೇಷವೆಂದರೆ ಬಿಕೆಸಿಯಲ್ಲಿ ಇತ್ತೀಚೆಗೆ ತೆರೆದಿರುವ ಆ್ಯಪಲ್ ಸ್ಟೋರ್ ಸನಿಹವೇ ಸ್ಯಾಮ್‌ಸಂಗ್ ಸ್ಟೋರ್ ತೆರೆದಿದೆ.

ಸ್ಯಾಮ್‌ಸಂಗ್ ಉತ್ಪನ್ನಗಳ ಪರಿಚಯ, ಖರೀದಿ ಸೇರಿದಂತೆ O2O ಸೌಲಭ್ಯ (Online, offline) ಇದರಲ್ಲಿ ಇದ್ದು, ಬಹುತೇಕ ಸ್ಯಾಮ್‌ಸಂಗ್‌ನ ಕೃತಕ ಬುದ್ಧಿಮತ್ತೆ ಆಧರಿಸಿ ಇದು ಕಾರ್ಯನಿರ್ವಹಿಸಲಿದೆ. ಗ್ರಾಹಕರಿಗೆ ಅತ್ಯಾಧುನಿಕ, ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಸ್ಟೋರ್‌ನ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.

‘ಭಾರತೀಯ ಗ್ರಾಹಕರಿಗೆ ಬಿಕೆಸಿಯ ನಮ್ಮ ಹೊಸ ಸ್ಟೋರ್ ಜಾಗತಿಕ ಗುಣಮಟ್ಟದ ಹೊಸ ಅನುಭವವನ್ನು ನೀಡಲಿದೆ’ ಎಂದು ತಿಳಿಸಿದ್ದಾರೆ.

‘ಈ ಸ್ಟೋರ್‌ನಲ್ಲಿ ಹೊಸದಾಗಿ kinetic video wall ಹಾಕಲಾಗಿದ್ದು ಇದು ಇಡೀ ಭಾರತದಲ್ಲೇ ಅತಿ ದೊಡ್ಡ ವಿಡಿಯೊ ವಾಲ್‘ ಎಂದು ಹೇಳಿದ್ದಾರೆ.
.ನಿಗಮ–ಮಂಡಳಿ ನೇಮಕ ಪಟ್ಟಿ ಸೋರಿಕೆ: ಸಿಡಿದೆದ್ದ ಸಚಿವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.