ಮುಂಬೈ: ಸಾರ್ವಜನಿಕ ವಲಯದ ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ ಆಯ್ದ ಅವಧಿಯ ನಿಶ್ಚಿತ ಠೇವಣಿಗಳ(ಎಫ್‌ಡಿ) ಮೇಲಿನ ಬಡ್ಡಿ ದರದಲ್ಲಿ 50 ಮೂಲಾಂಶಗಳವರೆಗೆ ಹೆಚ್ಚಳ ಮಾಡಿದೆ.

ಪರಿಷ್ಕೃತ ಬಡ್ಡಿ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 180-210 ದಿನಗಳ ನಡುವಿನ ಠೇವಣಿಯ ಮೇಲಿನ ವಾರ್ಷಿಕ ಬಡ್ಡಿ ದರ ಸದ್ಯ ಶೇ 5.25ರಷ್ಟಿದ್ದು, ಅದನ್ನು ಶೇ. 5.75ಕ್ಕೆ ಹೆಚ್ಚಿಸಲಾಗಿದೆ.

ಅದೇ ರೀತಿ, 7-45 ದಿನಗಳವರೆಗಿನ ಠೇವಣಿಯ ಮೇಲಿನ ಬಡ್ಡಿ ದರವನ್ನು ಈ ಹಿಂದಿನ ಶೇ 3ರಿಂದ ಶೇ 3.50ಕ್ಕೆ ಹೆಚ್ಚಿಸಲಾಗಿದೆ.

46-179 ದಿನಗಳ ಠೇವಣಿ(ಶೇ 4.75 ರ ಪರಿಷ್ಕೃತ ದರ), 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ (ಶೇ 6 ಪರಿಷ್ಕೃತ ದರ) ಮತ್ತು ಮೂರು ವರ್ಷಗಳಿಂದ ಐದು ವರ್ಷಗಳಿಗಿಂತ ಕಡಿಮೆ ಇರುವ ಠೇವಣಿಯ ( ಪರಿಷ್ಕೃತ ದರ ಶೇ 6.75) ಬಡ್ಡಿ ದರ ಹೆಚ್ಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.