ನವದೆಹಲಿ: ಅದಾನಿ ಸಮೂಹದ 10 ಕಂಪನಿಗಳ ಪೈಕಿ ಆರು ಕಂಪನಿಗಳ ಷೇರಿನ ಮೌಲ್ಯವು ಶುಕ್ರವಾರ ಚೇತರಿಕೆ ಕಂಡಿದೆ.

ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ ಮತ್ತು ಸೆಕ್ಯುರಿಟೀಸ್ ಎಕ್ಸ್ಚೇಂಜ್ ಕಮಿಷನ್ (ಎಸ್ಇಸಿ) ಲಂಚದ ಆರೋಪ ಮಾಡಿದ್ದರಿಂದ ಗುರುವಾರದ ವಹಿವಾಟಿನಲ್ಲಿ ಕುಸಿತ ಕಂಡಿದ್ದವು.

ಅಂಬುಜಾ ಸಿಮೆಂಟ್ಸ್ ಶೇ 3.50, ಎಸಿಸಿ ಶೇ 3.17, ಅದಾನಿ ಎಂಟರ್ಪ್ರೈಸಸ್ ಶೇ 2.16, ಅದಾನಿ ಪೋರ್ಟ್ಸ್ ಶೇ 2.05, ಅದಾನಿ ಟೋಟಲ್ ಗ್ಯಾಸ್ ಶೇ 1.18 ಹಾಗೂ ಎನ್ಡಿಟಿವಿ ಷೇರಿನ ಮೌಲ್ಯದಲ್ಲಿ ಶೇ 0.65ರಷ್ಟು ಏರಿಕೆಯಾಗಿದೆ.

ಅದಾನಿ ಗ್ರೀನ್ ಎನರ್ಜಿ ಶೇ 8.20, ಅದಾನಿ ಎನರ್ಜಿ ಸಲ್ಯೂಷನ್ಸ್ ಶೇ 6.92, ಅದಾನಿ ಪವರ್ ಶೇ 3.23 ಹಾಗೂ ಅದಾನಿ ವಿಲ್ಮರ್ ಷೇರಿನ ಮೌಲ್ಯದಲ್ಲಿ ಶೇ 0.73ರಷ್ಟು ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.