ಶ್ರೀಪೆರಂಬೂರು: ಐಫೋನ್ ತಯಾರಿಕಾ ಕಂಪನಿ ಫಾಕ್ಸ್ಕಾನ್ ತಮಿಳುನಾಡಿನಲ್ಲಿರುವ ತನ್ನ ಘಟಕದಲ್ಲಿ ವಿವಾಹಿತೆಯರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ನಿರಾಕರಿಸುತ್ತಿದೆ. ಈ ಕುರಿತು ನಡೆಸಿದ ತನಿಖೆಯಲ್ಲಿ ಸತ್ಯಾಂಶ ಬಯಲಾಗಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ತಿಳಿಸಿದೆ.

ಪಾರ್ವತಿ ಮತ್ತು ಜಾನಕಿ ಎಂಬ ಸಹೋದರಿಯರು ಕಳೆದ ವರ್ಷದ ಮಾರ್ಚ್ನಲ್ಲಿ ವಾಟ್ಸ್ಆ್ಯಪ್ನಲ್ಲಿ ಉದ್ಯೋಗ ಭರ್ತಿ ಕುರಿತು ಬಂದ ಸಂದೇಶದ ಮೇರೆಗೆ ಫಾಕ್ಸ್ಕಾನ್ ಘಟಕಕ್ಕೆ ಸಂದರ್ಶನಕ್ಕೆ ತೆರಳಿದ್ದರು. ಘಟಕದ ಮುಖ್ಯದ್ವಾರದಲ್ಲಿದ್ದ ಭದ್ರತಾ ಅಧಿಕಾರಿ, ‘ನಿಮಗೆ ಮದುವೆಯಾಗಿದೆಯೇ?’ ಎಂದು ಪ್ರಶ್ನಿಸಿದ್ದರು. ಈ ಇಬ್ಬರು ‘ಹೌದು’ ಎಂದು ಉತ್ತರಿಸಿದ ಬಳಿಕ ಅವರನ್ನು ವಾಪಸ್ ಕಳುಹಿಸಿದ್ದಾರೆ ಎಂದು ಹೇಳಿದೆ.

‘ನಮ್ಮಿಬ್ಬರಿಗೂ ವಿವಾಹವಾಗಿದೆ. ಹಾಗಾಗಿ, ಉದ್ಯೋಗ ನೀಡಲಿಲ್ಲ’ ಎಂದು ಪಾರ್ವತಿ ಅವರ ಹೇಳಿಕೆಯನ್ನು ಉಲ್ಲೇಖಿಸಿದೆ.

‘ಸಾಂಸ್ಕೃತಿಕ ಹಾಗೂ ಸಾಮಾಜಿಕ ವಿಷಯಕ್ಕೆ ಸಂಬಂಧಿಸಿದ ಕೆಲವು ಕಾರಣಗಳಿಂದಾಗಿ ವಿವಾಹಿತೆಯರಿಗೆ ಫಾಕ್ಸ್ಕಾನ್ ಘಟಕದಲ್ಲಿ ಉದ್ಯೋಗ ನೀಡದೆ ತಿರಸ್ಕರಿಸಲಾಗುತ್ತಿದೆ’ ಎಂದು ಕಂಪನಿ ತೊರೆದಿರುವ ಫಾಕ್ಸ್ಕಾನ್ ಇಂಡಿಯಾದ ಮಾನವ ಸಂಪನ್ಮೂಲ ವಿಭಾಗದ ಕಾರ್ಯ ನಿರ್ವಾಹಕ ಅಧಿಕಾರಿ ಎಸ್. ಪಾಲ್ ಹೇಳಿದ್ದಾರೆ.

‘ವಿವಾಹಿತೆಯರಿಗೆ ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಿರುತ್ತವೆ. ಮದುವೆ ಬಳಿಕ ಮಗುವಿಗೆ ಜನ್ಮ ನೀಡುತ್ತಾರೆ. ಆಗ ಅವರಿಗೆ ರಜೆ ಸೇರಿ ಇತರೆ ಸವಲತ್ತು ಕಲ್ಪಿಸಬೇಕಾಗುತ್ತದೆ. ಇದರಿಂದ ಕೆಲಸಕ್ಕೆ ಹೆಚ್ಚು ಗೈರುಹಾಜರಾಗುತ್ತಾರೆ’ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮೂಲಗಳು ತಿಳಿಸಿರುವುದಾಗಿ ಹೇಳಿದೆ.

‘ಹಿಂದೂ ಮಹಿಳೆಯರು ಮಾಂಗಲ್ಯ ಸೇರಿ ಚಿನ್ನದ ಆಭರಣಗಳನ್ನು ಧರಿಸುತ್ತಾರೆ. ಇದರಿಂದ ಐಫೋನ್ ತಯಾರಿಕಾ ಕೆಲಸಕ್ಕೆ ತೊಂದರೆಯಾಗುತ್ತಿದೆ. ಹಾಗಾಗಿ, ವಿವಾಹಿತೆಯರಿಗೆ ನೇಮಕಕ್ಕೆ ಅವಕಾಶ ನೀಡಲು ಹಿಂದೇಟು ಹಾಕಲಾಗುತ್ತಿದೆ’ ಎಂದು ಈ ಮೂಲಗಳು ತಿಳಿಸಿವೆ ಎಂದು ಹೇಳಿದೆ.

ಆ್ಯಪಲ್ ಹೇಳಿದ್ದೇನು?:

‘2022ರಲ್ಲಿ ವಿವಾಹಿತೆಯರಿಗೆ ಕೆಲಸ ನೀಡುತ್ತಿಲ್ಲ ಎಂಬ ಅಪಸ್ವರ ಕೇಳಿಬಂದಿತ್ತು. ವಿವಾಹಿತೆಯರಿಗೆ ಕೆಲಸ ನೀಡುವ ಬಗ್ಗೆ ಮಾನದಂಡ ಪಾಲಿಸಲು ಸೂಚಿಸಲಾಗಿತ್ತು. ಭಾರತದಲ್ಲಿ ಫಾಕ್ಸ್ಕಾನ್ ಸೇರಿ ನಮಗೆ ಐಫೋನ್ ಪೂರೈಸುವ ಎಲ್ಲಾ ಕಂಪನಿಗಳ ಘಟಕಗಳಲ್ಲಿ ವಿವಾಹಿತೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ’ ಎಂದು ಆ್ಯಪಲ್ ಕಂಪನಿ ಪ್ರತಿಕ್ರಿಯಿಸಿದೆ.

‘ಉದ್ಯೋಗ ಆಧಾರದ ಮೇಲೆ ವಿವಾಹಿತೆಯರಿಗೆ ತಾರತಮ್ಯ ಮಾಡುತ್ತಿಲ್ಲ. ಲಿಂಗ, ಧರ್ಮ ಹಾಗೂ ಇತರೆ ವಿಷಯದಲ್ಲಿ ತಾರತಮ್ಯ ಎಸಗುತ್ತಿಲ್ಲ’ ಎಂದು ಫಾಕ್ಸ್ಕಾನ್ ಸ್ಪಷ್ಟನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.