ಮುಂಬೈ: ಪ್ರಯಾಣಿಕರಿಂದ ಬೇಡಿಕೆ ಕುಸಿದಿರುವ ಪರಿಣಾಮ ಹೈದರಾಬಾದ್ ಮತ್ತು ಅಯೋಧ್ಯೆ ನಡುವೆ ಆರಂಭಿಸಿದ್ದ ನೇರ ವಿಮಾನ ಸಂಚಾರ ಸೇವೆಯನ್ನು ಸ್ಪೈಸ್ಜೆಟ್ ವಿಮಾನಯಾನ ಕಂಪನಿಯು ರದ್ದುಪಡಿಸಿದೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವು ಲೋಕಾರ್ಪಣೆಗೊಂಡಿದ್ದ ವೇಳೆ ವಿಮಾನ ಸೇವೆಗೆ ಬೇಡಿಕೆ ಹೆಚ್ಚಿತ್ತು. ಟಿಕೆಟ್ ದರವೂ ದುಪ್ಪಟ್ಟಾಗಿತ್ತು. ಸದ್ಯ ಅಯೋಧ್ಯೆಗೆ ತೆರಳುವವರ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಹಾಗಾಗಿ, ಎರಡು ತಿಂಗಳ ಹಿಂದೆ ಆರಂಭಿಸಿದ್ದ ವಿಮಾನ ಸೇವೆಯನ್ನು ಕಂಪನಿಯು ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ.

ವಾರದಲ್ಲಿ ಮೂರು ಬಾರಿ ಹೈದರಾಬಾದ್ನಿಂದ ಅಯೋಧ್ಯೆಗೆ ಸ್ಪೈಸ್ಜೆಟ್ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಜೂನ್ 1ರಿಂದ ಈ ಸೇವೆ ಸ್ಥಗಿತಗೊಂಡಿದೆ ಎಂದು ಹೈದರಾಬಾದ್ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ವಾಣಿಜ್ಯ ಉದ್ದೇಶ ಹಾಗೂ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ವಿಮಾನಗಳ ಸಂಚಾರದ ವೇಳಾಪಟ್ಟಿಯನ್ನು ನಿಗದಿಪಡಿಸಲಾಗುತ್ತದೆ. ಸದ್ಯ ಚೆನ್ನೈನಿಂದ ಅಯೋಧ್ಯೆಗೆ ವಿಮಾನ ಸೇವೆ ಲಭ್ಯವಿದೆ ಎಂದು ಸ್ಪೈಸ್ಜೆಟ್ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.