ನವದೆಹಲಿ: ಉದ್ಯಮಿ ಕಲಾನಿಧಿ ಮಾರನ್ ಹಾಗೂ ಅವರ ಒಡೆತನಕ್ಕೆ ಸೇರಿದ ಕೆಎಲ್‌ಎ ಏರ್‌ವೇಸ್‌ಗೆ ಬಡ್ಡಿಸಹಿತ ₹587 ಕೋಟಿ ಪಾವತಿಸುವಂತೆ ಮಧ್ಯಸ್ಥಿಕೆ ನ್ಯಾಯಾಲಯವು ನೀಡಿದ್ದ ತೀರ್ಪನ್ನು ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ರದ್ದುಪಡಿಸಿದೆ.

ಸ್ಪೈಸ್‌ಜೆಟ್ ವಿಮಾನಯಾನ ಕಂಪನಿ ಹಾಗೂ ಅದರ ಪ್ರವರ್ತಕ ಅಜಯ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠವು, ಈ ಆದೇಶ ನೀಡಿದೆ.

ಷೇರು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ನ್ಯಾಯಾಲಯವು ಸ್ಪೈಸ್‌ಜೆಟ್‌ನ ಮಾಜಿ ಪ್ರವರ್ತಕ ಮಾರನ್ ಹಾಗೂ ಅವರ ಕಂಪನಿಗೆ ಹಣ ಪಾವತಿಸುವಂತೆ ಆದೇಶಿಸಿತ್ತು. 2023ರ ಜುಲೈ 31ರಂದು ಹೈಕೋರ್ಟ್‌ನ ಏಕಸದಸ್ಯ ಪೀಠ ಕೂಡ ಈ ಆದೇಶವನ್ನು ಎತ್ತಿಹಿಡಿದಿತ್ತು. ಸದ್ಯ ತೀರ್ಪು ರದ್ದುಪಡಿಸಿರುವುದರಿಂದ ಮಾರನ್ ಅವರು, ಸ್ಪೇಸ್‌ಜೆಟ್‌ಗೆ ₹450 ಕೋಟಿ ಮೊತ್ತವನ್ನು ಮರುಪಾವತಿಸಬೇಕಿದೆ.

ಸ್ಪೈಸ್‌ಜೆಟ್ ವಿವರಣೆ ಏನು?

₹580 ಕೋಟಿ ಮೂಲ ಧನ ಹಾಗೂ ₹150 ಕೋಟಿ ಬಡ್ಡಿ ಸೇರಿದಂತೆ ಮಾರನ್ ಹಾಗೂ ಕೆಎಎಲ್ ಏರ್‌ವೇಸ್‌ಗೆ ಒಟ್ಟು ₹730 ಕೋಟಿ ಪಾವತಿಸಲಾಗಿದೆ. ವಿಭಾಗೀಯ ಪೀಠವು ಕಂಪನಿ ಪರವಾಗಿ ಆದೇಶ ನೀಡಿದೆ. ಹಾಗಾಗಿ, ಮಾರನ್ ಅವರಿಂದ ಮರುಪಾವತಿಯನ್ನು ನಿರೀಕ್ಷಿಸಲಾಗುತ್ತಿದೆ’ ಎಂದು ಕಂಪನಿಯು ತಿಳಿಸಿದೆ.

‘ಕಂಪನಿಯು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಈ ನಡುವೆಯೇ ಬಾಕಿ ಪಾವತಿ ವಿಳಂಬಕ್ಕೆ ಸಂಬಂಧಿಸಿದಂತೆ ವಿಮಾನ ಗುತ್ತಿಗೆದಾರರು, ಸಾಲಗಾರರು ಹಾಗೂ ಮಾರನ್ ನ್ಯಾಯಾಲಯದಲ್ಲಿ ಹೂಡಿರುವ ದಾವೆಗಳ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ನ್ಯಾಯಾಲಯ ನೀಡಿರುವ ತೀರ್ಪು ಕಂಪನಿಗೆ ವರದಾನವಾಗಿದೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.