ಮುಂಬೈ: ದೇಶದ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ಮುಂದುವರಿದಿದೆ. ಕೇಂದ್ರ ಸರ್ಕಾರ ಆರ್ಥಿಕತೆಗೆ ಉತ್ತೇಜನ ನೀಡುವ ಭರವಸೆಯು ಹೂಡಿಕೆ ಉತ್ಸಾಹವನ್ನು ಹೆಚ್ಚಿಸಿಲ್ಲ.

ಆರು ವಾರಗಳಲ್ಲಿ ಐದು ವಾರಗಳ ವಹಿವಾಟು ಇಳಿಮುಖವಾಗಿಯೇ ಅಂತ್ಯಗೊಂಡಿವೆ.

ಬಕ್ರೀದ್ ಪ್ರಯುಕ್ತ ಸೋಮವಾರ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಗುರುವಾರ ವಹಿವಾಟು ನಡೆಯಲಿಲ್ಲ.ಹೀಗಾಗಿಮೂರು ದಿನಗಳ ವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 93,513 ಕೋಟಿಗಳಷ್ಟು ಕರಗಿದೆ.

ಜುಲೈ 5 ರಿಂದ ಆಗಸ್ಟ್ 16ರವರೆಗಿನ ವಹಿವಾಟಿನಲ್ಲಿ ಕರಗಿರುವ ಸಂಪತ್ತಿನ ಮೊತ್ತವು ₹ 10.6 ಲಕ್ಷ ಕೋಟಿಗಳಷ್ಟಾಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 140.75 ಲಕ್ಷ ಕೋಟಿಗಳಷ್ಟಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 231 ಅಂಶ ಇಳಿಕೆ ಕಂಡು, 37,350 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 61 ಅಂಶ ಇಳಿಕೆಯಾಗಿ 11,047 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.