ಬೆಂಗಳೂರು: ಸೂಪರ್ ಡಾಟ್ ಮನಿ ಆ್ಯಪ್ನಿಂದ ಯುಪಿಐ ಮೂಲಕ ನಿಶ್ಚಿತ ಠೇವಣಿ (ಎಫ್.ಡಿ) ಸೇವೆಯನ್ನು ಆರಂಭಿಸಲಾಗಿದೆ.

ಈ ಠೇವಣಿಯಲ್ಲಿ ಗ್ರಾಹಕರಿಗೆ ಶೇ 9.5ರ ವರೆಗೆ ಬಡ್ಡಿ ಸಿಗಲಿದೆ. ಸಣ್ಣ ಹಣಕಾಸು ಬ್ಯಾಂಕ್ಗಳ ಸಹಯೋಗದಡಿ ಈ ಸೇವೆ ಆರಂಭಿಸಲಾಗಿದ್ದು, ಗ್ರಾಹಕರು ಆ್ಯಪ್ನಲ್ಲಿ ನಿಶ್ಚಿತ ಠೇವಣಿ ಖಾತೆಯನ್ನು ಆರಂಭಿಸಬಹುದು ಎಂದು ಕಂಪನಿ ತಿಳಿಸಿದೆ.

ಇದು ಸಂಪೂರ್ಣ ಡಿಜಿಟಲ್ ಉಳಿತಾಯವಾಗಿದೆ. 2 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಠೇವಣಿ ಖಾತೆ ತೆರೆಯಬಹುದಾಗಿದೆ. ಸೂಪರ್ ಡಾಟ್ ಮನಿಯ ಬಳಕೆದಾರರು ಪ್ರಸ್ತುತ ಆರ್ಬಿಐ ಅನುಮೋದಿಸಿರುವ ಐದು ಬ್ಯಾಂಕುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದೆ.

ಸೂಪರ್ ಡಾಟ್ ಮನಿಯ ಎಲ್ಲ ಎಫ್.ಡಿಗಳಿಗೆ ಡಿಐಸಿಜಿಸಿಯಿಂದ ₹5 ಲಕ್ಷದವರೆಗೆ ವಿಮಾ ಸೌಲಭ್ಯ ಇರುತ್ತದೆ. ದೇಶದ ಯುವ ಸಮುದಾಯವನ್ನು ಉಳಿತಾಯಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉದ್ಯಮದಲ್ಲಿ ಇದೇ ಮೊದಲ ಬಾರಿಗೆ ಸೂಪರ್ ಎಫ್.ಡಿ ಸೇವೆಯನ್ನು ಪರಿಚಯಿಸಲಾಗಿದೆ. ಬಳಕೆದಾರರು ₹1 ಸಾವಿರದಿಂದ ಖಾತೆ ತೆರೆಯಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

‘ಯುಪಿಐ ಮೂಲಕ ನಿಶ್ಚಿತ ಠೇವಣಿ ಆರಂಭಿಸುತ್ತಿರುವ ಮೊಟ್ಟ ಮೊದಲು ಕಂಪನಿಯಾಗುತ್ತಿರುವುದಕ್ಕೆ ನಮಗೆ ಸಂತಸವಾಗಿದೆ. ಆಕರ್ಷಕ ಬಡ್ಡಿ ದರ, ಸರಳ ಮತ್ತು ತಡೆರಹಿತ ಬಳಕೆ ಪ್ರಕ್ರಿಯೆ ನೀಡಲಾಗುತ್ತದೆ. ಆರ್ಬಿಐ ನೀತಿಗೆ ಪೂರಕವಾಗಿ ಇದನ್ನು ವಿನ್ಯಾಸಗೊಳಿಸಿ, ಪರಿಚಯಿಸಲಾಗಿದೆ’ ಎಂದು ಸೂಪರ್ ಡಾಟ್ ಮನಿಯ ಸಂಸ್ಥಾಪಕ ಮತ್ತು ಸಿಇಒ ಪ್ರಕಾಶ್ ಸಿಕಾರಿಯಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.