ನವದೆಹಲಿ: ಟ್ರಾನ್ಶನ್ ಹೋಲ್ಡಿಂಗ್ಸ್ನಜಾಗತಿಕ ಸ್ಮಾರ್ಟ್ಪೋನ್ ಬ್ರ್ಯಾಂಡ್ ಆಗಿರುವ ಟೆಕ್ನೊ ಮೊಬೈಲ್, ಹಲವು ಹೊಸ ಸೌಲಭ್ಯಗಳನ್ನು ಒಳಗೊಂಡ, ತಂತ್ರಜ್ಞಾನ ವ್ಯಾಮೋಹಿಗಳ ಕಿಸೆಗೆ ಭಾರವಾಗದ ತನ್ನ ‘ಫ್ಯಾಂಟಮ್ 9’ ಸ್ಮಾರ್ಟ್ಫೋನ್ ಅನ್ನು ಬುಧವಾರ ಇಲ್ಲಿ ದೇಶಿ ಮಾರುಕಟ್ಟೆಗೆ ಪರಿಚಯಿಸಿತು.

₹ 15 ಸಾವಿರದ ಒಳಗಿನ ಬೆಲೆಯ ಮೊಬೈಲ್ಗಳಲ್ಲಿ ಹೆಚ್ಚು ಸುರಕ್ಷತೆ ಮತ್ತು ಕ್ಷಿಪ್ರವಾಗಿ ಕಾರ್ಯನಿರ್ವಹಿಸುವ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಒಳಗೊಂಡಿರುವುದು ಇದರ ವಿಶೇಷತೆಯಾಗಿದೆ. ಮುಂಭಾಗದ 32 ಎಂಪಿ ಕ್ಯಾಮೆರಾದಿಂದ ಕಡಿಮೆ ಬೆಳಕಿನಲ್ಲಿಯೂ ಸ್ಪಷ್ಟವಾದ ಸೆಲ್ಫಿಗೆ ನೆರವಾಗಲು ಎರಡು ಫ್ಲ್ಯಾಷ್ ಲೈಟ್ ಒಳಗೊಂಡಿದೆ.

ಹಿಂಭಾಗದಲ್ಲಿ ಮೂರು (16ಎಂಪಿ+8ಎಂಪಿ+2ಎಂಪಿ) ಕ್ಯಾಮೆರಾಗಳನ್ನು ಹೊಂದಿದೆ. ನಿರ್ದಿಷ್ಟ ದೃಶ್ಯಗಳನ್ನು ನಿಖರವಾಗಿ ಸೆರೆಹಿಡಿಯಲು ಗೂಗಲ್ ಲೆನ್ಸ್ ನೆರವಾಗಲಿವೆ. 8ಎಂಪಿ ಕ್ಯಾಮೆರಾ 120 ಅಲ್ಟ್ರಾವೈಡ್ ಲೆನ್ಸ್ ಹೊಂದಿದೆ.ಹೊರನೋಟ ಆಕರ್ಷಕವಾಗಿದ್ದು, ಕಾರ್ಯಕ್ಷಮತೆಯೂ ಉತ್ತಮವಾಗಿದೆ.

‘ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಮಾರುಕಟ್ಟೆ ವಿಸ್ತರಿಸುವ ಯೋಜನೆಯಲ್ಲಿ ಭಾರತಕ್ಕೆ ಮೊದಲ ಆದ್ಯತೆ ನೀಡಲಾಗುವುದು. ನಮ್ಮಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಿ ಎನ್ನುವುದು ಟೆಕ್ನೊ ಮೊಬೈಲ್ನ ಧ್ಯೇಯವಾಗಿದೆ’ ಎಂದು ಟ್ರಾನ್ಶನ್ ಇಂಡಿಯಾದ ಸಿಒಒ ಮಾರ್ಕೊ ಮಾ ಹೇಳಿದರು.

ಟೆಕ್ನೊ ಜಾಗತಿಕ ಪಾಲುದಾರಿಕೆ ಶೃಂಗಸಭೆಯಲ್ಲಿ ಹೊಸ ಸ್ಮಾರ್ಟ್ ಫೋನ್ ಅನಾವರಣಗೊಳಿಸಿ ಮಾತನಾಡಿದ ಅವರು,‘ಟೆಕ್ನೊ ಶ್ರೇಣಿಯ ಸ್ಮಾರ್ಟ್ಫೋನ್ಗಳನ್ನು ದೇಶದಾದ್ಯಂತ ಗ್ರಾಹಕರಿಗೆ ತಲುಪಿಸಲು ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದೇ 17ರಿಂದ ಫ್ಲಿಪ್ಕಾರ್ಟ್ನಲ್ಲಿ ಫ್ಯಾಂಟಮ್ 9 ಖರೀದಿಗೆ ಲಭ್ಯ ಇರಲಿದೆ’ ಎಂದರು.

ಫೋನ್ ವೈಶಿಷ್ಟ್ಯ
*ಪರದೆ ಗಾತ್ರ: 6.4 ಇಂಚು
*ತೂಕ: 164 ಗ್ರಾಂ
*6ಜಿಬಿ ರ್ಯಾಮ್. 128 ಜಿಬಿ ರೋಮ್. 256 ಜಿಬಿವರೆಗೆ ವಿಸ್ತರಣೆಗೆ ಅವಕಾಶ
*ಬ್ಯಾಟರಿ: ಲೀಥಿಯಂ ಪಾಲಿಮರ್ 3,500 ಎಂಎಚ್
*ಒಎಸ್: ಆಂಡ್ರಾಯ್ಡ್ 9.0
*ಬೆಲೆ:₹ 14,999
(ಸಂಸ್ಥೆಯ ಆಹ್ವಾನದ ಮೇರೆಗೆ ವರದಿಗಾರ ದೆಹಲಿಗೆ ತೆರಳಿದ್ದರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.