ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇವಿ ಉತ್ಪಾದನ ಘಟಕ: ವಾಣಿಜ್ಯ ಸಚಿವರನ್ನು ಭೇಟಿ ಮಾಡಲಿರುವ ಟೆಸ್ಲಾ ಪ್ರತಿನಿಧಿಗಳು

Published 24 ಜುಲೈ 2023, 13:09 IST
Last Updated 24 ಜುಲೈ 2023, 13:09 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ಎಲೆಕ್ಟ್ರಿಕ್ ಕಾರು ನಿರ್ಮಾಣ ಘಟಕ ಸಂಬಂಧ ಚರ್ಚಿಸಲು ಟೆಸ್ಲಾದ ಪ್ರತಿನಿಧಿಗಳು ಇದೇ ತಿಂಗಳಿನಲ್ಲಿ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿ ಮಾಡಲಿದ್ದಾರೆ.

ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ತಯಾರು ಮಾಡುವ ಘಟಕ ಸ್ಥಾಪನೆಗೆ ಭಾರತ ಉತ್ಸಾಹ ತೋರಿದೆ. ಈ ಸಂಬಂಧ ಮಾತುಕತೆ ಇರಲಿದೆ.

20 ಲಕ್ಷ ವೆಚ್ಚದ ಕಾರುಗಳನ್ನು ನಿರ್ಮಿಸಲು ಟೆಸ್ಲಾ ಮುಂದಾಗಿದೆ.

ಈ ಘಟಕದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹಾಗೂ ರಫ್ತು ಮಾಡುವ ಸಲುವಾಗಿ ಕಾರು ಉತ್ಪಾದನೆಯಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸ ವೇಳೆ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್‌ ಅವರೊಂದಿಗೆ ಭಾರತದಲ್ಲಿ ಹೂಡಿಕೆ ಮಾಡುವ ಸಂಬಂಧ ಚರ್ಚೆ ನಡೆಸಿದ್ದರು. ಇದಾದ ಬಳಿಕದ ಮೊದಲನೇ ಮಹತ್ವದ ಸಭೆ ಇದಾಗಿರಲಿದೆ.

ಭಾರತದಲ್ಲಿ ನಿರ್ಮಾಣ ಆಗಲಿರುವ ಈ ಘಟಕದ ವೆಚ್ಚವು, ಟೆಸ್ಲಾದ ಬೇರೆ ಘಟಕಗಳ ವೆಚ್ಚಗಳಿಗಿಂದ ಶೇ 25 ರಷ್ಟು ಅಗ್ಗವಾಗಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT