ನವದೆಹಲಿ: ಫೋಕ್ಸ್ವ್ಯಾಗನ್ ಕಂಪನಿಯು ಭಾರತದ ಮಾರುಕಟ್ಟೆಗೆ ಮಧ್ಯಮ ಗಾತ್ರದ ಸೆಡಾನ್ ‘ವರ್ಟೂಸ್’ ಬಿಡುಗಡೆ ಮಾಡಿದೆ. ಇದರ ಎಕ್ಸ್ ಷೋರೂಂ ಬೆಲೆ ₹ 11.21 ಲಕ್ಷ.

ಪುಣೆಯ ಚಾಕನ್ ಘಟಕದಲ್ಲಿ ಹೊಸ ಸೆಡಾನ್ ತಯಾರಾಗಿದೆ. ಶೇಕಡ 95ರಷ್ಟು ಸ್ಥಳೀಯವಾಗಿ ತಯಾರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಕಂಪನಿಯ ‘ಭಾರತ 2.0 ಪ್ರಾಜೆಕ್ಟ್’ ಅಡಿ ಬರುತ್ತಿರುವ ಎರಡನೇ ಉತ್ಪನ್ನ ಇದಾಗಿದೆ. 1 ಲೀಟರ್ ಸಾಮರ್ಥ್ಯದ ಎಂಜಿನ್ ಇರುವ ಕಾರಿನ ಬೆಲೆ ₹ 11.21 ಲಕ್ಷದಿಂದ ₹ 15.71 ಲಕ್ಷದವರೆಗೆ ಇದೆ. 1.5 ಲೀಟರ್ ಸಾಮರ್ಥ್ಯದ ಎಂಜಿನ್ ಇರುವ ಕಾರಿನ ಬೆಲೆ ₹ 17.91 ಲಕ್ಷ.

ದೇಶದ ಮಧ್ಯಮ ಗಾತ್ರದ ಸೆಡಾನ್ ವಿಭಾಗದಲ್ಲಿ ಶೇ 15ರಿಂದ ಶೇ 20ರವರೆಗೆ ಮಾರುಕಟ್ಟೆ ಪಾಲು ಹೊಂದುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಫೋಕ್ಸ್ವ್ಯಾಗನ್ ಕಂಪನಿಯ ಪ್ರಯಾಣಿಕ ವಾಹನ ವಿಭಾಗದ ನಿರ್ದೇಶಕ ಆಶಿಶ್ ಗುಪ್ತಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.