ನವದೆಹಲಿ: ರಿಟೇಲ್ ಮಾರುಕಟ್ಟೆ ದೈತ್ಯ ‘ವಾಲ್ಮಾರ್ಟ್’ ಕಂಪನಿ ಕಳೆದ 2 ದಶಕಗಳಲ್ಲಿ ಭಾರತದಿಂದ ಸುಮಾರು 30 ಬಿಲಿಯನ್ ಅಮೆರಿಕನ್ ಡಾಲರ್ (2.48 ಲಕ್ಷ ಕೋಟಿ) ಮೌಲ್ಯದ ಸರಕುಗಳನ್ನು ತನ್ನ ಜಾಗತಿಕ ವಹಿವಾಟಿಗೆ ಖರೀದಿಸಿದೆ ಎಂದು ವರದಿಯಾಗಿದೆ.

ನವದೆಹಲಿಯಲ್ಲಿ ಮಂಗಳವಾರ ನಡೆದ ವಾಲ್ಮಾರ್ಟ್ ಅಭಿವೃದ್ಧಿ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷೆ ಆಂಡ್ರಿಯಾ ಅಲ್ಬರ್ಟ್ ಈ ವಿಷಯವನ್ನು ಹಂಚಿಕೊಂಡರು.

'ವಾಲ್ಮಾರ್ಟ್ ಭಾರತದ ಸಣ್ಣ, ಮಧ್ಯಮ ಕೈಗಾರಿಕೆಯ (MSMEs) ಉತ್ಪನ್ನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಬೆಳವಣಿಗೆ ಸಾಧಿಸಿದೆ. ಈ ಕ್ಷೇತ್ರದಲ್ಲಿ ಭಾರತದ ಅರ್ಥ ವ್ಯವಸ್ಥೆಗೆ ಅದ್ಭುತವಾದ ಕೊಡುಗೆ ನೀಡಲು ಅವಕಾಶ ಕಂಡು ಬರುತ್ತಿದೆ‘ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

‘ಜಾಗತಿಕ ಮಾರುಕಟ್ಟೆಗೆ ಭಾರತದಿಂದ ಖರೀದಿಸುವ ಸರಕುಗಳ ಪ್ರಮಾಣವನ್ನು 2027ರೊಳಗೆ 3 ಪಟ್ಟು ಹೆಚ್ಚು ಮಾಡಲಾಗುವುದು’ ಎಂದು ಆಂಡ್ರಿಯಾ ಹೇಳಿದರು.

‘ಜನಸಾಮಾನ್ಯರ ಒಳಗೊಳ್ಳುವಿಕೆಯಿಂದ ಸುಸ್ಥಿರ ಅಭಿವೃದ್ಧಿಯ ವಹಿವಾಟನ್ನು ನಮ್ಮ ಕಂಪನಿ ಮುಂದುವರಿಸುತ್ತದೆ. ತ್ವರಿತ ಬೆಳವಣಿಗೆಗೆ ಅವಕಾಶ ಇರುವ ಭಾರತದಂತಹ ಮಾರುಕಟ್ಟೆಯಲ್ಲಿ ನಾವು ಇನ್ನೂ ಹೆಚ್ಚಿನ ಹೂಡಿಕೆಯನ್ನು ಎದುರು ನೋಡುತ್ತಿದ್ದೇವೆ’ ಎಂದು ಆಂಡ್ರಿಯಾ ಹೂಡಿಕೆ ಕುರಿತು ಹೇಳಿದರು.

‘ಭಾರತದ ಎಂಎಸ್ಎಂಇ ವಲಯವನ್ನು ಗಟ್ಟಿಗೊಳಿಸಲು ನಾವು ‘ವಾಲ್ಮಾರ್ಟ್ ವೃದ್ಧಿ ಯೋಜನೆ’ಯಡಿ 50 ಸಾವಿರ ಜನರಿಗೆ ತರಬೇತಿ ನೀಡಿದ್ದೇವೆ’ ಎಂದು ಅವರು ಹೇಳಿದರು.

ಆನ್ಲೈನ್ ಮೂಲಕ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ವಾಲ್ಮಾರ್ಟ್ ಸಿಇಒ ಡಗ್ ಮ್ಯಾಕ್ ಮಿಲಾನ್ ಮತ್ತು ಅಧ್ಯಕ್ಷೆ ಕ್ಯಾಥರಿನ್ ಮ್ಯಾಕ್ ಲೇ ಅವರು, ‘ಭಾರತ ಅದ್ಭುತ ಅವಕಾಶಗಳ ತಾಣವಾಗಿ ಬದಲಾಗುತ್ತಿದೆ’ ಎಂದು ಬಣ್ಣಿಸಿದರು.

ಈ ಶೃಂಗಸಭೆಯೂ ಭಾರತದ ಮಾರಾಟಗಾರರಿಗೆ ಜಾಗತಿಕ ಅವಕಾಶವನ್ನು ತೆರೆದಿಡುವ ನಿಟ್ಟಿನಲ್ಲಿ ಆಯೋಜನೆಗೊಂಡಿತ್ತು.

ವಾಲ್ಮಾರ್ಟ್ ಅಮೆರಿಕ ಮೂಲದ ಒಂದು ಬಹುರಾಷ್ಟ್ರೀಯ ಹೈಪರ್ ಮಾರ್ಕೆಟ್ ಕಂಪನಿಯಾಗಿದೆ. ಈ ಕಂಪನಿ ಕಳೆದ 25 ವರ್ಷದಿಂದ ಭಾರತದಲ್ಲಿ ವ್ಯಾಪಾರ–ವಹಿವಾಟು ನಡೆಸುತ್ತಿದೆ.
.ರಾಜ್ಯಸಭೆಗೆ ಟಿಕೆಟ್: ಇಬ್ಬಗೆ ನೀತಿಯಿಂದ ಟ್ರೋಲ್ ಆದ ಪತ್ರಕರ್ತೆ ಸಾಗರಿಕಾ ಘೋಷ್.ಭಾರತೀಯ ಜಾಹೀರಾತು ಜಗತ್ತಿಗೆ ಕಾಲಿಟ್ಟ ಜಾನಿ ಸಿನ್ಸ್! ರಣವೀರ್ ಸಿಂಗ್ ಜೊತೆ ನಟನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.