ನವದೆಹಲಿ: ಸಗಟು ಹಣದುಬ್ಬರವು 2021ರ ನವೆಂಬರ್‌ಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಶೇ 13.56ಕ್ಕೆ ಇಳಿಕೆ ಆಗಿದೆ. ನವೆಂಬರ್‌ನಲ್ಲಿ ಶೇ 14.23ರಷ್ಟು ಗರಿಷ್ಠ ಮಟ್ಟದಲ್ಲಿ ಇತ್ತು.

ಆಹಾರ ವಸ್ತುಗಳ ದರ ಹೆಚ್ಚಾಗಿದ್ದರು ಸಹ ಇಂಧನ, ವಿದ್ಯುತ್ ಮತ್ತು ತಯಾರಿಕಾ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಆಗಿರುವುದರಿಂದ ಸಗಟು ಹಣದುಬ್ಬರದಲ್ಲಿ ತುಸು ಇಳಿಕೆ ಕಂಡುಬಂದಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಶುಕ್ರವಾರ ಹೇಳಿದೆ.

ಸಗಟು ಹಣದುಬ್ಬರವು ಸತತ ಒಂಭತ್ತನೇ ತಿಂಗಳಿನಲ್ಲಿಯೂ ಎರಡಂಕಿ ಮಟ್ಟದಲ್ಲಿಯೇ ಮುಂದುವರಿದಿದೆ. ಲೋಹ, ಕಚ್ಚಾ ಪೆಟ್ರೋಲಿಯಂ ಉತ್ಪನ್ನಗಳು, ನೈಸರ್ಗಿಕ ಅನಿಲ, ರಾಸಾಯನಿಕ ಮತ್ತು ರಾಸಾಯನಿಕ ಉತ್ಪನ್ನಗಳು, ಆಹಾರ ವಸ್ತುಗಳು, ಜವಳಿ, ಪೇಪರ್ ಮತ್ತು ಅದರ ಉತ್ಪನ್ನಗಳ ಬೆಲೆ ಏರಿಕೆ ಆಗಿರುವುದರಿಂದ ಡಿಸೆಂಬರ್‌ನಲ್ಲಿಯೂ ಸಗಟು ಹಣದುಬ್ಬರವು ಗರಿಷ್ಠ ಮಟ್ಟದಲ್ಲಿಯೇ ಇದೆ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ತಯಾರಿಕಾ ವಸ್ತುಗಳ ಹಣದುಬ್ಬರವು ನವೆಂಬರ್‌ನಲ್ಲಿ ಶೇ 11.92 ರಷ್ಟು ಇದ್ದಿದ್ದು ಡಿಸೆಂಬರ್‌ನಲ್ಲಿ ಶೇ 10.62ಕ್ಕೆ ಇಳಿಕೆ ಆಗಿದೆ. ಇಂಧನ ಮತ್ತು ವಿದ್ಯುತ್ ದರವು ಶೇ 39.81 ರಿಂದ ಶೇ 32.30ಕ್ಕೆ ಇಳಿಕೆ ಆಗಿದೆ. ಆದರೆ, ಹಾರ ವಸ್ತುಗಳ ಹಣದುಬ್ಬರವು ಶೇ 4.88ರಿಂದ ಶೇ 9.56ಕ್ಕೆ ಏರಿಕೆ ಆಗಿದೆ.

ಸಗಟು ಹಣದುಬ್ಬರದ ವಿವರ (%)

ಜೂನ್;12.07

ಜುಲೈ;11.57

ಆಗಸ್ಟ್;11.64

ಸೆಪ್ಟೆಂಬರ್;11.8

ಅಕ್ಟೋಬರ್;12.54

ನವೆಂಬರ್;14.23

ಡಿಸೆಂಬರ್;13.56

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.