ನವದೆಹಲಿ: ಸಗಟು ದರ ಆಧಾರಿತ ಹಣದುಬ್ಬರವು ಮಾರ್ಚ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠವಾದ ಶೇಕಡ 14.55ಕ್ಕೆ ತಲುಪಿದೆ. ಕಚ್ಚಾ ತೈಲ ಹಾಗೂ ಆಹಾರೇತರ ವಸ್ತುಗಳ ದರದಲ್ಲಿನ ಏರಿಕೆಯಿಂದ ಹಣದುಬ್ಬರ ಹೆಚ್ಚಳ ಕಂಡಿದೆ.

2021ರ ಏಪ್ರಿಲ್‌ನಿಂದ ಸತತ 12 ತಿಂಗಳು ಸಗಟು ಹಣದುಬ್ಬರವು ಎರಡಂಕಿ ಮಟ್ಟದಲ್ಲಿಯೇ ಇರುವುದು ಕೇಂದ್ರ ಸರ್ಕಾರದ ಮಾಹಿತಿಯಿಂದ ತಿಳಿದು ಬಂದಿದೆ.

2021ರ ನವೆಂಬರ್‌ನಲ್ಲಿ ಸಗಟು ಹಣದುಬ್ಬರವು ಶೇಕಡ 14 ದಾಟಿ, ಶೇಕಡ 14.87ರಷ್ಟು ಮುಟ್ಟಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ಸಗಟು ಹಣದುಬ್ಬರವು ಶೇಕಡ 7.89ರಷ್ಟಿತ್ತು ಹಾಗೂ ಫೆಬ್ರುವರಿಯಲ್ಲಿ ಶೇಕಡ 13.11ರಷ್ಟು ದಾಖಲಾಗಿತ್ತು.

ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಫೆಬ್ರುವರಿಯಲ್ಲಿ ಶೇಕಡ 8.19ರಷ್ಟು ಇದ್ದಿದ್ದು, ಮಾರ್ಚ್‌ನಲ್ಲಿ ಶೇಕಡ 8.06ಕ್ಕೆ ಇಳಿದಿದೆ. ತರಕಾರಿ ಹಣದುಬ್ಬರವು ಶೇಕಡ 26.93ರಿಂದ ಶೇಕಡ 19.88ಕ್ಕೆ ಇಳಿಕೆಯಾಗಿದೆ.

ಇದನ್ನೂ ಓದಿ–ವಹಿವಾಟು ಆರಂಭದಲ್ಲೇ 1,000 ಅಂಶ ಕುಸಿದ ಸೆನ್ಸೆಕ್ಸ್; ಐಟಿ ಷೇರುಗಳಲ್ಲಿ ತಲ್ಲಣ

ರಷ್ಯಾ ಮತ್ತು ಉಕ್ರೇನ್ ಸಂಘರ್ಷದಿಂದಾಗಿ ಜಾಗತಿಕವಾಗಿ ಪೂರೈಕೆ ಜಾಲದಲ್ಲಿ ವ್ಯತ್ಯಯ ಉಂಟಾಗಿದ್ದು, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ, ಖನಿಜ ತೈಲ ಸೇರಿದಂತೆ ಹಲವು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಆ ಕಾರಣಗಳಿಂದಾಗಿ 2022ರ ಮಾರ್ಚ್‌ನಲ್ಲಿ ಹಣದುಬ್ಬರ ಹೆಚ್ಚಳವಾಗಿರುವುದಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ತಯಾರಿಕಾ ವಸ್ತುಗಳ ಹಣದುಬ್ಬರವು ಶೇಕಡ 9.84ರಿಂದ ಶೇಕಡ 10.71ಕ್ಕೆ ಹೆಚ್ಚಳವಾಗಿದೆ. ಇಂಧನ ಮತ್ತು ವಿದ್ಯುತ್ ಬೆಲೆ ಏರಿಕೆಯು ಶೇಕಡ 34.52ರಷ್ಟಿದೆ. ಕಚ್ಚಾ ತೈಲ ದರ ಏರಿಕೆಯಿಂದಾಗಿ ಕಚ್ಚಾ ಪೆಟ್ರೋಲಿಯಂ ಹಣದುಬ್ಬರವು ಶೇಕಡ 55.17ರಿಂದ ಶೇಕಡ 83.56ಕ್ಕೆ ತಲುಪಿದೆ.

ಗ್ರಾಹಕ ಬೆಲೆ ಸೂಚ್ಯಂಕವು ಆರ್‌ಬಿಐನ ವಿಧಿಸಿದ್ದ ಶೇಕಡ 6ರ ಮಿತಿಯನ್ನು ದಾಟಿದ್ದು, ಚಿಲ್ಲರೆ ಹಣದುಬ್ಬರವು ಮಾರ್ಚ್‌ನಲ್ಲಿ ಶೇಕಡ 6.95ರಷ್ಟಾಗಿದೆ. ಆರ್‌ಬಿಐ ರೆಪೋ ದರವನ್ನು ಸತತ 11ನೇ ಬಾರಿಗೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಶೇಕಡ 4ರಷ್ಟು ಮುಂದುವರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.