ನವದೆಹಲಿ: ಯೆಸ್ ಬ್ಯಾಂಕ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ₹ 343 ಕೋಟಿ ಆಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಇದ್ದ ಲಾಭಕ್ಕೆ ಹೋಲಿಸಿದರೆ (₹311) ಶೇ 10ರಷ್ಟು ಏರಿಕೆ ಕಂಡುಬಂದಿದೆ.

ಸುಸ್ತಿ ಸಾಲದ ಪ್ರಮಾಣ ಇಳಿಕೆ ಆಗಿರುವುದರಿಂದ ಲಾಭ ಗಳಿಕೆ ಸಾಧ್ಯವಾಗಿದೆ. ಒಟ್ಟು ವರಮಾನವು ₹ 5,876 ಕೋಟಿಯಿಂದ ₹7,584 ಕೋಟಿಗೆ ಏರಿಕೆ ಆಗಿದೆ ಎಂದು ಷೇರುಪೇಟೆಗೆ ಬ್ಯಾಂಕ್ ಮಾಹಿತಿ ನೀಡಿದೆ.

ಬಡ್ಡಿ ವರಮಾನ ಶೇ 8.1ರಷ್ಟು ಹೆಚ್ಚಾಗಿ ₹2 ಸಾವಿರ ಕೋಟಿಗೆ ತಲುಪಿದೆ. ಮುಂಗಡ ಶೇ 10ರಷ್ಟು ಬೆಳವಣಿಗೆ ಕಂಡಿದೆ. ಬಂಢವಾಳ ಲಭ್ಯತೆ ಪ್ರಮಾಣವು ಶೇ 17.5ರಿಂದ ಶೇ 18.2ಕ್ಕೆ ಏರಿಕೆ ಆಗಿದೆ.

ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಜಿಎನ್‌ಪಿಎ) ಶೇ 13.4 ರಿಂದ ಶೇ 2ಕ್ಕೆ ಇಳಿಕೆ ಕಂಡಿದೆ. ನಿವ್ವಳ ಎನ್‌ಪಿಎ ಶೇ 4.2ರಿಂದ ಶೇ 1ಕ್ಕೆ ಇಳಿಕೆಯಾಗಿದೆ ಎಂದು ಬ್ಯಾಂಕ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.