ಬೆಂಗಳೂರು: ಹಬ್ಬದ ಋತುವಿನ ಅಂಗವಾಗಿ ನವೆಂಬರ್ 3ರ ವರೆಗೂ ಐಕಿಯ ಕಂಪನಿಯು ಗ್ರಾಹಕರಿಗೆ ರಿಯಾಯಿತಿ ಸೌಲಭ್ಯ ಕಲ್ಪಿಸಿದೆ.

ಐಕಿಯದಲ್ಲಿ ವಸ್ತುಗಳನ್ನು ಖರೀದಿಸುವವರಿಗೆ ಈ ಅವಧಿವರೆಗೂ ಸೌಲಭ್ಯ ದೊರೆಯಲಿದೆ. ಆಯ್ದ ಗೃಹೋಪಯೋಗಿ ವಸ್ತುಗಳ ಮೇಲೆ ಶೇ 70ರಷ್ಟು ರಿಯಾಯಿತಿ ದೊರೆಯಲಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಉಳಿತಾಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ಮನೆಯ ಬೆಡ್ ರೂಂ ಅಥವಾ ಡೈನಿಂಗ್ ಪ್ರದೇಶದಲ್ಲಿ ಬಳಸುವ ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿಯಿದೆ. ₹10 ಸಾವಿರ ಹಾಗೂ ಅದಕ್ಕೂ ಮೇಲ್ಪಟ್ಟ ಬೆಲೆಯ ವಸ್ತುಗಳನ್ನು ಖರೀದಿಸಿದವರಿಗೆ ₹1,500 ಮೌಲ್ಯದ ವೋಚರ್ ಸಿಗಲಿದೆ. ಹಬ್ಬದ ಋತು ಮುಗಿದ ಬಳಿಕವೂ ಈ ವೋಚರ್ ಮೂಲಕ ಖರೀದಿಯ ಪ್ರಯೋಜನ ಪಡೆಯಬಹುದಾಗಿದೆ ಎಂದು ತಿಳಿಸಿದೆ.

ಗ್ರಾಹಕರು ಖರೀದಿಸುವ ವಸ್ತುಗಳ ಜೋಡಣೆ ಮತ್ತು ಅಳವಡಿಕೆ ಮೇಲೆ ವಿಧಿಸುವ ಶುಲ್ಕದ ಮೇಲೆ ಶೇ 50ರಷ್ಟು ರಿಯಾಯಿತಿ ದೊರೆಯಲಿದೆ. ಗ್ರಾಹಕರ ಮನೆ ಬಾಗಿಲಿಗೆ ಒದಗಿಸುವ ಸೇವೆ ಮೇಲೆಯೂ ಶೇ 50ರಷ್ಟು ರಿಯಾಯಿತಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.

ಸ್ವದೇಶಿ ಫುಡ್ ಮಾರ್ಕೆಟ್‌ನಲ್ಲಿ ಪ್ರತಿ ಶುಕ್ರವಾರ ಆಯ್ದ ಪದಾರ್ಥಗಳ ಮೇಲೆ ಶೇ 50ರಷ್ಟು ರಿಯಾಯಿತಿ ಸೌಲಭ್ಯ ಸಿಗಲಿದೆ. ₹5 ಸಾವಿರಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಖರೀದಿಸಿದರೆ ಶೇ 10ರಷ್ಟು ರಿಯಾಯಿತಿ ದೊರೆಯಲಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.