ಮುಂಬೈ: 90ರ ದಶಕದ ಮಕ್ಕಳ ನೆಚ್ಚಿನ ತಾಣ ಹಾಗೂ ಮುಂಬೈನ ಜನಪ್ರಿಯ ಅಮ್ಯೂಸ್ಮೆಂಟ್ ಪಾರ್ಕ್ ಎಸ್ಸೆಲ್ ವರ್ಲ್ಡ್ (ESSEL World) ಶೀಘ್ರದಲ್ಲೇ ಮುಚ್ಚಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಅಮ್ಯೂಸ್ಮೆಂಟ್ ಪಾರ್ಕ್ ಪ್ರಸ್ತುತ ವಾರ ಮುಂದಿನ ಸೂಚನೆ ಬರುವವರೆಗೂ ಸಂಪೂರ್ಣ ಮುಚ್ಚಿರಲಿದೆ ಎಂದು ಎಸ್ಸೆಲ್ ವರ್ಲ್ಡ್ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ. ಈ ನಿರ್ಧಾರಕ್ಕೆ ಸಂಸ್ಥೆ ಕಾರಣ ಬಹಿರಂಗಪಡಿಸಿಲ್ಲ.

ಈ ಬಗ್ಗೆ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಚರ್ಚೆ ಮಾಡಿದ್ದು, ತಮ್ಮ ನೆಚ್ಚಿನ ಎಸ್ಸೆಲ್ ವರ್ಲ್ಡ್ ಮುಚ್ಚಲಿದೆ ಎಂಬ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಮನಿಕಂಟ್ರೊಲ್ ವೆಬ್ಸೈಟ್ ವರದಿ ಮಾಡಿದೆ.

1989 ರಲ್ಲಿ ಮುಂಬೈ ಹೊರವಲಯದ ಗೋರಾಯಿ ಪ್ರದೇಶದಲ್ಲಿ 22 ಎಕರೆ ಪ್ರದೇಶದಲ್ಲಿ ಆರಂಭವಾಗಿದ್ದ ಎಸ್ಸೆಲ್ ವರ್ಲ್ಡ್ ಮಕ್ಕಳ ಅಚ್ಚುಮೆಚ್ಚಿನ ಮನರಂಜನಾ ತಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.