ಹಣಕಾಸು ನಿರ್ವಹಣೆಯಲ್ಲಿ ಪ್ರಮುಖವಾದದ್ದು ಆರ್ಥಿಕ ಭದ್ರತೆ. ಆರ್ಥಿಕ ಭದ್ರತೆಗೆ ಬುನಾದಿಯೇ ಇನ್ಶುರೆನ್ಸ್. ಬಹುತೇಕರು ಸರಿಯಾದ ತಿಳಿವಳಿಕೆ ಇಲ್ಲದೆ ವಿಮೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳುತ್ತಾರೆ. ಇನ್ನು ಕೆಲವರು ದುಬಾರಿ ಪ್ರೀಮಿಯಂ ಕಟ್ಟಲು ಸಾಧ್ಯವಿಲ್ಲದ ಕಾರಣಕ್ಕೆ ವಿಮೆಯಿಂದ ದೂರ ಉಳಿಯುತ್ತಾರೆ. ವಿಮೆ ದುಬಾರಿ ಎನ್ನುವವರಿಗಾಗಿ ಇದೀಗ ಅಂಚೆ ಇಲಾಖೆ ಹೊಸ ಗುಂಪು ಅಪಘಾತ ವಿಮೆ ಯೋಜನೆಯನ್ನು ಜಾರಿಗೆ ತಂದಿದೆ. ಕೇವಲ ₹ 299 ಅಥವಾ ₹ 399 ವಾರ್ಷಿಕ ಪ್ರೀಮಿಯಂ ಕಟ್ಟಿದರೆ ಸಾಕು ₹ 10 ಲಕ್ಷ ಮೊತ್ತದ ಆ್ಯಕ್ಸಿಡಂಟ್ ಕವರೇಜ್ ಲಭಿಸುತ್ತದೆ. ಬನ್ನಿ ಅಂಚೆ ಇಲಾಖೆಯ ಈ ಹೊಸ ಗುಂಪು ವಿಮೆ ಯೋಜನೆ ಬಗ್ಗೆ ಇನ್ನಷ್ಟು ತಿಳಿಯೋಣ.

ಅನಿಶ್ಚಿತ ಸಂದರ್ಭಗಳನ್ನು ಎದುರಿಸಲು ಬೇಕು ವಿಮೆ: ಜೀವನ ಅನಿಶ್ಚಿತತೆಗಳ ಗೂಡು. ಅಪಘಾತದಂತಹ ತುರ್ತು ಸಂದರ್ಭಗಳು ಯಾರಿಗೆ ಬೇಕಾದರೂ ಎದುರಾಗಬಹುದು. ಅದನ್ನು ನಿಯಂತ್ರಿಸಲು ಯಾರಿದಲೂ ಸಾಧ್ಯವಿಲ್ಲ. ಆದರೆ ಖಂಡಿತವಾಗಿಯೂ ಅಪಘಾತದಂತಹ ಸಂದರ್ಭಗಳನ್ನು ಎದುರಿಸಲು ಆರ್ಥಿಕ ಸುರಕ್ಷತೆಗಾಗಿ ಪ್ರತಿಯೊಬ್ಬರೂ ವಿಮೆ ಮಾಡಿಸಿಕೊಂಡು ಒಂದಿಷ್ಟು ತಯಾರಿ ಮಾಡಿಕೊಳ್ಳಬಹುದು.

ಏನಿದು ಅಂಚೆ ಇಲಾಖೆಯ ₹ 10 ಲಕ್ಷದ ವಿಮೆ: ಅಂಚೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಇದೀಗ ತನ್ನ ಗ್ರಾಹಕರಿಗಾಗಿ ₹ 10 ಲಕ್ಷದ ಕವರೇಜ್ ಇರುವ ವೈಯಕ್ತಿಕ ಗುಂಪು ಅಪಘಾತ ವಿಮೆ ಯೋಜನೆ ಜಾರಿಗೊಳಿಸಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ನ ಎಲ್ಲ ಗ್ರಾಹಕರಿಗೆ ಇದು ಅನ್ವಯವಾಗಲಿದೆ. 18 ರಿಂದ 65 ವಯಸ್ಸಿನ ಎಲ್ಲ ಗ್ರಾಹಕರು ವಾರ್ಷಿಕ ಪ್ರೀಮಿಯಂ ಕಟ್ಟುವ ಮೂಲಕ ಈ ವಿಮೆ ಪಡೆದುಕೊಳ್ಳಬಹುದಾಗಿದೆ. ಉನ್ನತ ದರ್ಜೆಯ ಪ್ಲಾನ್ನ ಪ್ರೀಮಿಯಂ ₹ 399 ಆಗಿದ್ದು ಬೇಸಿಕ್ ಪ್ಲಾನ್ನ ಪ್ರೀಮಿಯಂ ₹ 299 ಇದೆ. ಪ್ರತಿ ವರ್ಷ ನಿಗದಿತ ಪ್ರೀಮಿಯಂ ಕಟ್ಟಿ ಪಾಲಿಸಿ ನವೀಕರಣ ಮಾಡಿಕೊಳ್ಳಬಹುದಾಗಿದೆ. ಅಂಚೆ ಕಚೇರಿಗಳಲ್ಲಿ ಈ ಯೋಜನೆ ಜಾರಿಯಲ್ಲಿದ್ದು ಕೈವೈಸಿ ದಾಖಲೆ ನೀಡಿ ಅರ್ಹರು ವಿಮೆ ಪಡೆದುಕೊಳ್ಳಬಹುದಾಗಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಖಾತೆ ಹೊಂದುವ ಯಾರುಬೇಕಾದರೂ ಈ ವಿಮೆ ಪಡೆದುಕೊಳ್ಳಬಹುದಾಗಿದೆ.

ವಿಮೆ ಪರಿಹಾರದ ವಿವರ: ಅಪಘಾತದಿಂದ ಸಾವು, ಭಾಗಶಃ ಅಂಗವೈಕಲ್ಯತೆ,ಶಾಶ್ವತ ಅಂಗವೈಕಲ್ಯತೆಗೆ ಇದರಲ್ಲಿ ₹ 10 ಲಕ್ಷ ಕವರೇಜ್ ಲಭಿಸಲಿದೆ. ಇದಲ್ಲದೆ ಅಪಘಾತದ ಚಿಕಿತ್ಸೆಗೆಗಾಗಿ ₹ 30 ಸಾವಿರದಿಂದ ₹ 60 ಸಾವಿರದವರೆಗೆ ಕ್ಲೇಮ್ ಮಾಡಿಕೊಳ್ಳಬಹುದಾಗಿದೆ.

ಸತತ 4ನೇ ವಾರ ಜಿಗಿದ ಸೂಚ್ಯಂಕ: ಸತತ ನಾಲ್ಕನೇ ವಾರ ಷೇರುಪೇಟೆಗಳ ಸೂಚ್ಯಂಕಗಳು ಜಿಗಿತ ಕಂಡಿವೆ. ನವೆಂಬರ್ 11ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಉತ್ತಮ ಗಳಿಕೆ ದಾಖಲಿಸಿವೆ. ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.38 ರಷ್ಟು ಜಿಗಿದಿದೆ. ನಿಫ್ಟಿ ಶೇ 1.28 ರಷ್ಟು ಹೆಚ್ಚಳ ಕಂಡಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಉತ್ಸಾಹ, ಅಮೆರಿಕದಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆ ಹಣದುಬ್ಬರ, ವಿದೇಶಿ ಹೂಡಿಕೆದಾರರಿಂದ ಖರೀದಿ ಭರಾಟೆ, ರೂಪಾಯಿ ಮೌಲ್ಯದಲ್ಲಿ ಚೇತರಿಕೆ, ಕಂಪನಿಗಳಿಂದ ನಿರೀಕ್ಷಿತ ಲಾಭಾಂಶ ಸೇರಿದಂತೆ ಹಲವು ಅಂಶಗಳು ಷೇರುಪೇಟೆ ಸೂಚ್ಯಂಕಗಳು ಮೇಲೆಳಲು ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 6.5, ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 3, ಮತ್ತು ನಿಫ್ಟಿ ಲೋಹ ಮತ್ತು ಬ್ಯಾಂಕ್ ಸೂಚ್ಯಂಕಗಳ ತಲಾ ಶೇ 2 ರಷ್ಟು ಜಿಗಿದಿವೆ. ಮತ್ತೊಂದೆಡೆ ನಿಫ್ಟಿ ಫಾರ್ಮಾ ಶೇ 3 ಮತ್ತು ನಿಫ್ಟಿ ವಾಹನ ಸೂಚ್ಯಂಕ ಶೇ 1.7 ರಷ್ಟು ಕುಸಿದಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಖರೀದಿ ಭರಾಟೆ ಮುಂದುವರಿಸಿದ್ದಾರೆ. ಈ ವಾರ ₹ 6,329.63 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 2,255.91 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಬಿಎಸ್ಇ ಲಾರ್ಜ್ ಕ್ಯಾಪ್ನಲ್ಲಿ ಜೊಮಾಟೊ, ನೈಕಾ, ಬ್ಯಾಂಕ್ ಆಫ್ ಬರೋಡ, ಬ್ರಿಟಾನಿಯಾ ಇಂಡಸ್ಟ್ರೀಸ್, ಎಚ್ಡಿಎಪ್ಸಿ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೆಚ್ಚಳ ದಾಖಲಿಸಿವೆ. ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ ಶೇ 0.7 ರಷ್ಟು ಕುಸಿದಿದೆ. ರಾಮ್ಕೊ ಸಿಮೆಂಟ್ಸ್, ಅರಬಿಂದೊ ಫಾರ್ಮಾ, ಟ್ಯೂಬ್ ಇನ್ವೆಸ್ಟ್ಮೆಂಟ್ ಆಫ್ ಇಂಡಿಯಾ, ದೀಪಕ್ ನೈಟ್ರೇಟ್ ಮತ್ತು ಜೂಬ್ಲಿಯಂಟ್ ಫುಡ್ ವರ್ಕ್ಸ್ ಕುಸಿತ ದಾಖಲಿಸಿವೆ.ಯುನಿಯನ್ ಬ್ಯಾಂಕ್ ಆಫ್ ಇಂಡಿಯ, ಸಂವರ್ಧನಾ ಮದರ್ ಸನ್ ಇಂಟರ್ನ್ಯಾಷನಲ್, ಸುಪ್ರೀಂ ಇಂಡಸ್ಟ್ರೀಸ್, ಮತ್ತು ಎಂಡೂರೆನ್ಸ್ ಟೆಕ್ನಾಲಜೀಸ್ ಶೇ 7 ರಿಂದ ಶೇ 21 ರಷ್ಟು ಜಿಗಿದಿವೆ.

ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 0.4 ರಷ್ಟು ಕುಸಿದಿದೆ. ಟಿಸಿಪಿಎಲ್ ಪ್ಯಾಕಿಂಗ್, ಹೋಂಡಾ ಇಂಡಿಯಾ ಪವರ್ ಪ್ರಾಡಕ್ಟ್ಸ್, ಕಾಮಧೇನು ಎಚ್ ಎಲ್ ವಿ, ಫ್ಯೂಚರ್ ರಿಟೇಲ್, ಸಾಂಗ್ವಿ ಮೂವರ್ಸ್, ನ್ಯೂಲ್ಯಾಂಡ್ ಲ್ಯಾಬೊರೇಟರೀಸ್, ಎಸ್ ಎಂ ಎಸ್ ಫಾರ್ಮಾಸ್ಯೂಟಿಕಲ್ಸ್, ಎಪ್ ಐಇಎಂ ಇಂಡಸ್ಟ್ರೀಸ್, ಲುಮ್ಯಾಕ್ಸ್ ಇಂಡಸ್ಟ್ರೀಸ್, ಎಂಪಿಸಿ, ಇಂದ್ರಪ್ರಸ್ಥ ಮೆಡಿಕಲ್ ಕಾರ್ಪೊರೇಷನ್, ಹಿಂದುಸ್ತಾನ್ ಫುಡ್ಸ್, ಟೈಮೆಕ್ಸ್ ಗ್ರೂಪ್ ಇಂಡಿಯಾ, ಕೆಪಿಐ ಗ್ರೀನ್ ಎನರ್ಜಿ, ಸ್ವಾನ್ ಎನರ್ಜಿ, ಧುನ್ಸೇರಿ ವೆಂಚರ್ಸ್ ಶೇ 15 ರಿಂದ ಶೇ 23 ರಷ್ಟು ಜಿಗಿದಿವೆ. ಕ್ರೆಸಾಂಡಾ ಸಲ್ಯೂಷನ್, ಟೀಮ್ ಲೀಸ್ ಸರ್ವೀಸಸ್, ಎನ್. ಆರ್ ಅಗರ್ವಾಲ್ ಇಂಡಸ್ಟ್ರೀಸ್, ಡಿಎಂಸಿಸಿ ಸ್ಪೆಷಾಲಿಟಿ ಕೆಮಿಕಲ್ಸ್, ಕ್ಯಾಂಪಸ್ ಆಕ್ಟೀವ್ ವೇರ್, ಎವರೆಸ್ಟ್ ಇಂಡಸ್ಟ್ರೀಸ್ ಎನ್. ಆರ್. ಬಿ. ಬೇರಿಂಗ್ಸ್ ಶೇ 15ರಿಂದ ಶೇ 18 ರಷ್ಟು ಕುಸಿದಿವೆ.

ಮುನ್ನೋಟ: ಈ ವಾರ ಬಿಪಿಎಲ್, ಅಬೋಟ್ ಇಂಡಿಯಾ, ಅಂಜನಿ ಫುಡ್ಸ್, ಭಾರತ್ ಅಗ್ರಿ, ಬಯೋಕಾನ್, ಬಿರ್ಲಾ ಟೈಯರ್ಸ್, ಬಿನ್ನಿ ಮಿಲ್ಸ್, ಬ್ರೂಕ್ಸ್, ಕೆಮ್ ಟೆಕ್, ಕಾಂಕ್ರೀಟ್, ಕನ್ಕರೋಡ್, ಡಿಶ್ ಟಿವಿ, ಯುರೆಕಾ ಫೋರ್ಬ್ಸ್, ಗಾರ್ನೆಟ್, ಜೆನೆಸಿಸ್, ಗ್ಲಾನ್ಸ್, ಗೋದ್ರೇಜ್ ಇಂಡಸ್ಟ್ರೀಸ್ ಲಿ., ಗೋಕುಲ್, ಗುಡ್ ಇಯರ್, ಗ್ರಾಸಿಮ್, ಹೆಲ್ದಿ ಲೈಫ್, ಹೈಟೆಕ್, ಜೆ.ಎಂ. ಫೈನಾನ್ಶಿಯಲ್, ಜ್ಯೋತಿ ಲ್ಯಾಬ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಜಾಗತಿಕ ವಿದ್ಯಮಾನಗಳು ಮತ್ತು ದೇಶಿಯ ಬೆಳವಣಿಗೆಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.