ಲಕ್ಷ್ಮಣ್ ರಾವ್, ಜೆ.ಪಿ.ನಗರ 2ನೇ ಹಂತ, ಬೆಂಗಳೂರು

*ಪ್ರಶ್ನೆ: ನೀವು ಓದುಗರಿಗೆ ಮುಖ್ಯವಾಗಿ ಆರ್.ಡಿ. ಹಾಗೂ ನಗದು ಸರ್ಟಿಫಿಕೇಟ್ ಠೇವಣಿಗಳನ್ನು ಮಾಡಲು ಸಲಹೆ ನೀಡುತ್ತಿದ್ದೀರಿ. ಈ ಎರಡೂ ಠೇವಣಿಗಳು ಉತ್ತಮವಾದರೂ ಇವುಗಳ ಅವಧಿ ಮುಗಿಯುತ್ತಲೇಬಡ್ಡಿ ದೊರೆಯುವುದರಿಂದ ಠೇವಣಿದಾರರು ಬಡ್ಡಿ ಆದಾಯದ ಮೇಲೆ ಹೆಚ್ಚಿನ ತೆರಿಗೆಯನ್ನು ಕೊಡಬೇಕಾಗಬಹುದು ಎನ್ನುವುದು ನನ್ನ ಅಭಿಪ್ರಾಯ. ಗೊಂದಲ ನಿವಾರಿಸಬೇಕಾಗಿ ವಿನಂತಿ.

ಉತ್ತರ: ಮೇಲ್ನೋಟಕ್ಕೆ ನಿಮ್ಮ ಅಭಿಪ್ರಾಯ ಸರಿ ಎಂದು ಕಂಡರೂ ಠೇವಣಿದಾರರು ಠೇವಣಿ ಮುಗಿಯುವ ವೇಳೆಗೆ ಬಡ್ಡಿ ಪಡೆದರೂ ಅಂತಹ ದೊಡ್ಡ ಮೊತ್ತಕ್ಕೆ ಆದಾಯ ತೆರಿಗೆ ಕೊಡುವ ಅವಶ್ಯಕತೆ ಇಲ್ಲ. ಇಂತಹ ಠೇವಣಿಗಳಿಗೆ ವಾರ್ಷಿಕವಾಗಿ ಬರುವ ಬಡ್ಡಿಗೆ ಆದಾಯ ತೆರಿಗೆ ರಿಟರ್ನ್ಸ್ ತುಂಬಲು ಅರ್ಜಿ ಸಂಖ್ಯೆ 16(ಎ) ಬ್ಯಾಂಕ್ಗಳಲ್ಲಿ ಕೊಡುತ್ತಾರೆ. ಗ್ರಾಹಕರು ಪ್ರತಿ ವರ್ಷ ಈ ಆದಾಯವನ್ನು ರಿಟರ್ನ್ಸ್ನಲ್ಲಿ ತೋರಿಸಬಹುದು. ಆರ್.ಡಿ. ಹಾಗೂ ನಗದು ಸರ್ಟಿಫಿಕೇಟ್ಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ಅಸಲಿಗೆ ಸೇರಿಸುವುದರಿಂದ ಠೇವಣಿಯು ಚಕ್ರಬಡ್ಡಿಯಲ್ಲಿ ಬೆಳೆಯುತ್ತದೆ. ತೆರಿಗೆ ಭಯದಿಂದ ಆರ್.ಡಿ. ಅಥವಾ ನಗದು ಸರ್ಟಿಫಿಕೇಟ್ ಮಾಡುವುದನ್ನು ಓದುಗರು ಎಂದಿಗೂ ನಿಲ್ಲಿಸಬೇಡಿ.

ನಾಗಲಕ್ಷ್ಮಿ, ಹೊನ್ನಾವರ

*ಪ್ರಶ್ನೆ: ನಾನು ಗೃಹಿಣಿ. ನನ್ನ ಜೀವನಕ್ಕೆ ಆಧಾರ ಕೃಷಿ. ನಮಗೆ ಕೃಷಿಯಿಂದ ದೊಡ್ಡ ಆದಾಯ ಇಲ್ಲ. ಬಿಡುವಿನ ವೇಳೆಯಲ್ಲಿ ಟೈಲರಿಂಗ್ ಮಾಡುತ್ತೇನೆ. ನಾನು ಪ್ಯಾನ್ ಹಾಗೂ ಆಧಾರ್ ಕಾರ್ಡ್ ಮಾಡಿಸಿದ್ದೇನೆ. ನಮ್ಮ ಹಳ್ಳಿಯಲ್ಲಿ ನನ್ನ ಗೆಳೆಯರೊಬ್ಬರು ಪ್ಯಾನ್ ಹಾಗೂ ಆಧಾರ್ ಕಾರ್ಡ್ ಹೊಂದಿದ್ದರೆ ಆದಾಯ ತೆರಿಗೆ ರಿಟರ್ನ್ಸ್ ತುಂಬಬೇಕು ಹಾಗೂ ತುಂಬದಿರುವಲ್ಲಿ ಐ.ಟಿ. ಇಲಾಖೆಯಿಂದ ನೋಟಿಸ್ ಬರುತ್ತದೆ ಎಂದು ಹೇಳಿದರು. ಜನಸಾಮಾನ್ಯರಲ್ಲಿ ಹಾಗೂ ಮುಖ್ಯವಾಗಿ ಮಹಿಳೆಯರಲ್ಲಿ ಈ ಬಗ್ಗೆ ಗೊಂದಲ ಇದೆ. ಸ್ಪಷ್ಟನೆ ನೀಡಿ.

ಉತ್ತರ: ಪ್ರಸ್ತುತ ಇರುವ ಆದಾಯ ತೆರಿಗೆ ಕಾನೂನಿನ ಪ್ರಕಾರ, ಮಹಿಳೆಯರು ಮಕ್ಕಳು ಸೇರಿ ಯಾವ ವ್ಯಕ್ತಿಯೂ ಆತನ ವಾರ್ಷಿಕ ಒಟ್ಟು ಆದಾಯ ₹ 5 ಲಕ್ಷ ದಾಟುವ ತನಕ ಆದಾಯ ತೆರಿಗೆ ಕೊಡುವ ಅವಶ್ಯಕತೆ ಇಲ್ಲ. ಇದೇ ವೇಳೆ, ಕೃಷಿಯಿಂದ ಬರುವ ಆದಾಯಕ್ಕೆ ಯಾವುದೇ ಮಿತಿ ಇಲ್ಲದೇ ಸೆಕ್ಷನ್ 10 (I) ಆಧಾರದ ಮೇಲೆ ಸಂಪೂರ್ಣ ವಿನಾಯಿತಿ ಇದೆ. ನಿಮ್ಮ ಊರಿನಲ್ಲಿ ನೀವು ಬಿಡುವಿನ ವೇಳೆಯಲ್ಲಿ ಮಾಡುವ ಟೈಲರಿಂಗ್ನಿಂದ ಬರುವ ಆದಾಯ ವಾರ್ಷಿಕ ₹ 5 ಲಕ್ಷ ದಾಟಲು ಸಾಧ್ಯವೇ ಇಲ್ಲ. ಇನ್ನು ಐ.ಟಿ. ರಿಟರ್ನ್ಸ್ ತುಂಬುವ ವಿಚಾರ. ಓರ್ವ ವ್ಯಕ್ತಿಯ ವಾರ್ಷಿಕ ಆದಾಯ ₹ 2.50 ಲಕ್ಷ ದಾಟಿದಲ್ಲಿ (ಹಿರಿಯ ನಾಗರಿಕರಾದಲ್ಲಿ ₹ 3 ಲಕ್ಷ, 80 ವರ್ಷ ದಾಟಿದ ಅತಿ ಹಿರಿಯ ನಾಗರಿಕರಿಗೆ ₹ 5 ಲಕ್ಷ) ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ. ನಿಮ್ಮ ಗೆಳೆಯರು ತಿಳಿಸಿದಂತೆ ಪ್ಯಾನ್ ಹಾಗೂ ಆಧಾರ್ ಹೊಂದಿದವರೆಲ್ಲಾ ಐ.ಟಿ. ರಿಟರ್ನ್ಸ್ ತುಂಬಬೇಕು ಎನ್ನುವ ಮಾತು ಸತ್ಯಕ್ಕೆ ದೂರವಾದುದು. ನೀವು ತೆರಿಗೆ ಸಲ್ಲಿಸುವ ಅಥವಾ ಐ.ಟಿ. ರಿಟರ್ನ್ಸ್ ತುಂಬುವ ಅವಶ್ಯಕತೆ ಇಲ್ಲ.

ಕೃಷ್ಣಕುಮಾರ್, ವೈಟ್ಫೀಲ್ಡ್

*ಪ್ರಶ್ನೆ: ನನ್ನ ವಯಸ್ಸು 27 ವರ್ಷ. ಐ.ಟಿ. ಕಂಪನಿಯಲ್ಲಿ ಕೆಲಸ. ವಾರ್ಷಿಕ ಪ್ಯಾಕೇಜ್ ₹ 15 ಲಕ್ಷ. ಅವಿವಾಹಿತ. ಕೆಲಸಕ್ಕೆ ಸೇರಿ 4 ವರ್ಷ ಆಗಿದೆ. ನಿಮ್ಮ ಅಂಕಣದಿಂದ ಸ್ಫೂರ್ತಿ ಪಡೆದು ಹಣ ಉಳಿಸುತ್ತಾ ಬಂದಿದ್ದೇನೆ. ನನ್ನ ಉಳಿತಾಯ ಖಾತೆಯಲ್ಲಿ ₹ 13 ಲಕ್ಷ ಇದೆ. ಸ್ವಂತ ಮನೆ ಮಾಡಿಕೊಳ್ಳಬೇಕು. ಜೀವನದ ಸಂಜೆಗೆ ಉತ್ತಮ ಹೂಡಿಕೆ ಬೇಕು. ದಯಮಾಡಿ ಮಾರ್ಗದರ್ಶನ ಮಾಡಿ.

ಉತ್ತರ: ₹ 13 ಲಕ್ಷ ಉಳಿತಾಯ ಖಾತೆಯಲ್ಲಿ ಇರುವುದನ್ನು ಬಿಟ್ಟು ಬೇರಾವ ಉಳಿತಾಯದ ಬಗ್ಗೆ ನೀವು ತಿಳಿಸಿಲ್ಲ. ಜೀವನದ ಭದ್ರತೆಗೆ ಸಂಬಳದ ಕನಿಷ್ಠ ಶೇಕಡ 10ರಷ್ಟು ಜೀವ ವಿಮೆಗೆ ತೆಗೆದಿಡಿ. ಸೆಕ್ಷನ್ 80ಸಿ ಆಧಾರದ ಮೇಲೆ ಪಿಪಿಎಫ್ ಹಾಗೂ ಜೀವ ವಿಮೆಯಲ್ಲಿ ವಾರ್ಷಿಕ ಕನಿಷ್ಠ ₹ 1.50 ಲಕ್ಷ ಹಣ ಹೂಡಿಕೆ ಮಾಡಿ, ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಿರಿ. ಇದೇ ವೇಳೆ ಸೆಕ್ಷನ್ 80ಸಿಸಿಡಿ (1ಬಿ) ಆಧಾರದ ಮೇಲೆ ಕನಿಷ್ಠ ₹ 50 ಸಾವಿರ ವಾರ್ಷಿಕವಾಗಿ ಹಣ ಎನ್.ಪಿ.ಎಸ್.ನಲ್ಲಿ ಹೂಡಿಕೆ ಮಾಡಿ. ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಿರಿ. ಮದುವೆ ತನಕ ಪ್ರತಿ ವರ್ಷ ಕನಿಷ್ಠ 20 ಗ್ರಾಂ ಬಂಗಾರದ ನಾಣ್ಯ ಕೊಳ್ಳಿರಿ. ನಿಮ್ಮ ಖರ್ಚು, ತೆರಿಗೆ, ಸಂಬಳದಲ್ಲಿ ಕಡಿತ ಇವೆಲ್ಲಾ ಪರಿಗಣಿಸಿ ₹ 30 ಸಾವಿರದ ಆರ್.ಡಿ.ಯನ್ನು 2 ವರ್ಷಗಳ ಅವಧಿಗೆ ಮಾಡಿ. ನೀವು ಗೃಹ ಸಾಲ ಪಡೆದಲ್ಲಿ ಅಸಲು ಬಡ್ಡಿಯಲ್ಲಿ ತೆರಿಗೆ ವಿನಾಯಿತಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.