ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರುಗಳ ಖರೀದಿ ಮತ್ತು ವಿದೇಶಿ ಬಂಡವಾಳ ಒಳಹರಿವಿನ ಹೆಚ್ಚಳದಿಂದ ಷೇರು ಸೂಚ್ಯಂಕಗಳು ಸೋಮವಾರ ಏರಿಕೆಯಾಗಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್ 145 ಅಂಶ ಏರಿಕೆಯಾಗಿ, 80,664ಕ್ಕೆ ಅಂತ್ಯಗೊಂಡಿತು. ದಿನದ ವಹಿವಾಟಿನಲ್ಲಿ ಒಂದು ಹಂತದಲ್ಲಿ 343 ಅಂಶದ ವರೆಗೆ ಹೆಚ್ಚಳವಾಗಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 84 ಅಂಶ ಹೆಚ್ಚಳವಾಗಿ 24,586ಕ್ಕೆ ಸ್ಥಿರಗೊಂಡಿತು.

ಷೇರು ಸೂಚ್ಯಂಕಗಳ ಏರಿಕೆಯಿಂದ ಬಿಎಸ್‌ಇ ನೊಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯ ₹455 ಲಕ್ಷ ಕೋಟಿಗೆ ತಲುಪಿದ್ದರೆ, ಎರಡು ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹3.85 ಲಕ್ಷ ಕೋಟಿ ವೃದ್ಧಿಯಾಗಿದೆ.

ಎಸ್‌ಬಿಐ, ಎನ್‌ಟಿಪಿಸಿ, ಅಲ್ಟ್ರಾಟೆಕ್ ಸಿಮೆಂಟ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಬಜಾಜ್ ಫೈನಾನ್ಸ್, ಟಾಟಾ ಮೋಟರ್ಸ್, ಮಾರುತಿ ಮತ್ತು ಐಟಿಸಿ ಷೇರಿನ ಮೌಲ್ಯದಲ್ಲಿ ಗಳಿಕೆ ಕಂಡಿವೆ.

ಏಷ್ಯನ್ ಪೇಂಟ್ಸ್, ಟಾಟಾ ಸ್ಟೀಲ್, ಎಕ್ಸಿಸ್ ಬ್ಯಾಂಕ್, ಜೆಎಸ್‌ಡಬ್ಲ್ಯು ಸ್ಟೀಲ್, ಟೆಕ್ ಮಹೀಂದ್ರಾ ಮತ್ತು ಟಿಸಿಎಸ್ ಷೇರಿನ ಮೌಲ್ಯ ಇಳಿದಿದೆ.

ರೂಪಾಯಿ ಮೌಲ್ಯ ಇಳಿಕೆ:

ಅಮೆರಿಕದ ಡಾಲರ್ ಎದುರು ಸೋಮವಾರ ರೂಪಾಯಿ ಮೌಲ್ಯವು 11 ಪೈಸೆಯಷ್ಟು ಕುಸಿದಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ವಹಿವಾಟಿನ ಅಂತ್ಯಕ್ಕೆ ₹83.62ಕ್ಕೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.