ನವದೆಹಲಿ: ಮೊಬೈಲ್ ಗ್ರಾಹಕರ ಗಮನಕ್ಕೆ ತರದೇ ಖಾತೆ ತೆರೆದು ಅವರ ಅಡುಗೆ ಅನಿಲ (ಎಲ್ಪಿಜಿ) ಸಬ್ಸಿಡಿ ಹಣ ವರ್ಗಾಯಿಸಿಕೊಂಡಿದ್ದ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್, ಗ್ರಾಹಕರ ಮೂಲ ಖಾತೆಗೆ ಈ ಹಣವನ್ನು ಬಡ್ಡಿ ಸಹಿತ ವಾಪಸ್ ಮಾಡುವುದಾಗಿ ತಿಳಿಸಿದೆ.

ಬಡ್ಡಿ ಒಳಗೊಂಡಂತೆ ₹ 190 ಕೋಟಿ ಹಣವನ್ನು ಗ್ರಾಹಕರ ಮೂಲ ಬ್ಯಾಂಕ್ ಖಾತೆಗೆ ವರ್ಗಾಯಿಸುವುದಾಗಿ ಏರ್ಟೆಲ್, ಭಾರತದ ರಾಷ್ಟ್ರೀಯ ಪಾವತಿ ನಿಗಮಕ್ಕೆ (ಎನ್ಪಿಸಿಐ) ಮಾಹಿತಿ ನೀಡಿದೆ.

ಏರ್ಟೆಲ್ ಸಂಸ್ಥೆಯು ತನ್ನ 31 ಲಕ್ಷ ಗ್ರಾಹಕರಿಗೆ ತಿಳಿಸದೇ ಅವರ ಎಲ್ಪಿಜಿ ಸಬ್ಸಿಡಿಯನ್ನು ಏರ್ಟೆಲ್ ಪೇಮೆಂಟ್ಸ್ ಖಾತೆಗೆ ಪಾವತಿ ಆಗುವಂತೆ ಮಾಡಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು. ಆಧಾರ್ ಕಾಯ್ದೆ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಭಾರ್ತಿ ಏರ್ಟೆಲ್ ಮತ್ತು ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ನ ಇ–ಕೆವೈಸಿ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಿದೆ.

ಆಧಾರ್ ಆಧಾರಿತ ಮೊಬೈಲ್ ಸಿಮ್ ದೃಢೀಕರಣ ಮಾಡುವಾಗ ನಿಮ್ಮ ಗ್ರಾಹಕರನ್ನು ತಿಳಿಯಿರಿ (ಇ–ಕೆವೈಸಿ) ಪ್ರಕ್ರಿಯೆ ಸಂದರ್ಭದಲ್ಲಿ ಗ್ರಾಹಕರಿಗೆ ಗೊತ್ತಿಲ್ಲದಂತೆ 37.21 ಲಕ್ಷ ಪೇಮೆಂಟ್ಸ್ ಬ್ಯಾಂಕ್ ಖಾತೆಯನ್ನು ತೆರೆಯಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.