ನವದೆಹಲಿ (ಪಿಟಿಐ): `3ಜಿ~ ಸೇವೆ ಒಳಗೊಂಡಿರುವ `ಆಪಲ್ ಐಫೋನ್-4~ ದೇಶೀ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ದೇಶದ ಮುಂಚೂಣಿ ಮೊಬೈಲ್ ದೂರವಾಣಿ ಸೇವಾ ಪೂರೈಕೆ ಕಂಪೆನಿ `ಏರ್‌ಟೆಲ್~ `ಐಫೊನ್-4~ ಅನ್ನು ದೇಶದ 34 ನಗರಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಿವೆ.

ಮುಂದಿನ ತಲೆಮಾರಿನ ಸ್ಮಾರ್ಟ್‌ಫೋನ್ ಎಂದೇ ಕರೆಯಲಾಗುವ `ಆಪಲ್ ಐಫೋನ್ 4~ ಕಳೆದ 11 ತಿಂಗಳ ಹಿಂದೆಯೇ ಅಮೆರಿಕ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿತ್ತು. `ಐಫೋನ್-4~ ಮಧ್ಯಮ ಸ್ತರದ ಸ್ಮಾರ್ಟ್ ಫೋನ್ ಬಳಕೆದಾರರ ಅಗತ್ಯಗಳನ್ನು ಪೂರೈಸಲಿದೆ. `3ಜಿ~ ಸೇರಿದಂತೆ ಸುಧಾರಿತ ತಂತ್ರಾಂಶಗಳನ್ನು ಹೊಂದಿದ್ದು, ಆಕರ್ಷಕ ದರದಲ್ಲಿ ಲಭ್ಯವಿದೆ ಎಂದು `ಏರ್‌ಟೆಲ್~ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಡಿ ಶರ್ಮಾ ತಿಳಿಸಿದ್ದಾರೆ. ಸದ್ಯ 16 ಜಿಬಿ ಸಾಮರ್ಥ್ಯದ ಐಫೋನ್‌ಗೆ ರೂ. 34,500 ಹಾಗೂ 32 ಜಿಬಿ ಸಾಮರ್ಥ್ಯಕ್ಕೆ ರೂ. 40,900 ದರ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.