ದೇಶದ ನಗರ ಪ್ರದೇಶಗಳಲ್ಲಿ ನಿಶ್ಚಿತ ವೇತನ ದೊರೆಯುವ ಉದ್ಯೋಗದಲ್ಲಿರುವ ಮಹಿಳೆಯರ ಪ್ರಮಾಣದಲ್ಲಿ ಶೇ 7.6ರಷ್ಟು ಇಳಿಕೆಯಾಗಿದೆ ಎನ್ನುತ್ತದೆ ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯ(ಎನ್‌ಎಸ್‌ಒ) ವಾರ್ಷಿಕ ವರದಿ. ಗ್ರಾಮೀಣ ಪ್ರದೇಶದಲ್ಲೂ ಇಂತಹ ಉದ್ಯೋಗದಲ್ಲಿದ್ದ ಮಹಿಳೆಯರ ಪ್ರಮಾಣ ಇಳಿಕೆಯಾಗಿದೆ. 2019–20ರಲ್ಲಿ ದೇಶದ ನಗರ ಪ್ರದೇಶದ ದುಡಿಯುವ ಮಹಿಳೆಯರಲ್ಲಿ ನಿಶ್ಚಿತ ವೇತನ ಪಡೆಯುತ್ತಿದ್ದ ಮಹಿಳೆಯರ ಪ್ರಮಾಣ ಶೇ 54.2ರಷ್ಟು ಇತ್ತು. 2020–21ರಲ್ಲಿ ಇಂತಹ ಮಹಿಳೆಯರ ಪ್ರಮಾಣಶೇ 50.1ಕ್ಕೆ ಇಳಿಕೆಯಾಗಿದೆ. ಬೇರೆಲ್ಲಾ ಸ್ವರೂಪದ ಉದ್ಯೋಗಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣದಲ್ಲಿ ಆಗಿರುವ ಇಳಿಕೆಗಿಂತ ಗರಿಷ್ಠ ಪ್ರಮಾಣದ ಇಳಿಕೆ ಇದಾಗಿದೆ.ಈ ವರದಿಗಳಲ್ಲಿನ ದತ್ತಾಂಶಗಳನ್ನು ವಿಶ್ಲೇಷಿಸಿದರೆ, ನಿಯಮಿತವಾಗಿ ವೇತನ ನೀಡುವ ಉದ್ಯೋಗ ನಷ್ಟವಾದ ನಂತರ ಮಹಿಳೆಯರು ಸ್ವಯಂ ಉದ್ಯೋಗ ಮತ್ತು ದಿನಗೂಲಿಯತ್ತ ಹೊರಳಿರುವುದು ಗೊತ್ತಾಗುತ್ತದೆ.

* ನಗರ ಪ್ರದೇಶದಲ್ಲಿ ನಿಯಮಿತವಾಗಿ ವೇತನ ಪಡೆಯುವ ಮಹಿಳೆಯರ ಪ್ರಮಾಣದಲ್ಲಿ 4.1 ಅಂಶಗಳಷ್ಟು ಇಳಿಕೆಯಾಗಿದೆ. ಶೇಕಡಾವಾರು ಪ್ರಮಾಣದಲ್ಲಿ ಇಳಿಕೆಯನ್ನು ಲೆಕ್ಕ ಹಾಕಿದರೆ ಇದು ಶೇ 7.6ರಷ್ಟು ಇಳಿಕೆಯಾಗುತ್ತದೆ

* ಇದೇ ಅವಧಿಯಲ್ಲಿ ದೇಶದ ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ನಿಯಮಿತವಾಗಿ ವೇತನ ಪಡೆಯುವ ಉದ್ಯೋಗಿಗಳ ಪ್ರಮಾಣವು ಶೇ 9.5ರಿಂದ ಶೇ 9.1ಕ್ಕೆ ಇಳಿಕೆಯಾಗಿದೆ. ಇಳಿಕೆಯಾಗಿರುವುದು 0.4 ಅಂಶವಾದರೂ, ಶೇಕಡಾವಾರು ಲೆಕ್ಕದಲ್ಲಿ ಇಳಿಕೆಯ ಪ್ರಮಾಣವು ಶೇ 4.1ರಷ್ಟಾಗುತ್ತದೆ

* ಕೋವಿಡ್ ಅವಧಿಯಲ್ಲಿ ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಭಾರಿ ಪ್ರಮಾಣದಲ್ಲಿ ಉದ್ಯೋಗ ಕಳೆದುಕೊಂಡಿರುವುದನ್ನು ಇದು ತೋರಿಸುತ್ತದೆ

* ಇದೇ ಅವಧಿಯಲ್ಲಿ ದೇಶದ ನಗರ ಪ್ರದೇಶಗಳಲ್ಲಿ ದಿನಗೂಲಿಗೆ ಹೋಗುತ್ತಿದ್ದ ಮಹಿಳೆಯರ ಪ್ರಮಾಣವು ಶೇ 11.1ರಿಂದ ಶೇ 11.5ಕ್ಕೆ ಏರಿಕೆಯಾಗಿದೆ. ನಿಯಮಿತವಾಗಿ ವೇತನ ನೀಡುವ ಉದ್ಯೋಗ ನಷ್ಟವಾದ ನಂತರ ಸ್ವಲ್ಪ ಪ್ರಮಾಣದ ಮಹಿಳೆಯರು ದಿನಗೂಲಿಯತ್ತ ಹೊರಳಿರುವುದನ್ನು ಇದು ಸೂಚಿಸುತ್ತದೆ

* ಇದೇ ಅವಧಿಯಲ್ಲಿ ನಗರ ಪ್ರದೇಶದಲ್ಲಿ ಮಹಿಳಾ ಸ್ವಯಂಉದ್ಯೋಗಿಗಳ ಪ್ರಮಾಣವು ಶೇ 34.6ರಿಂದ ಶೇ 38.4ಕ್ಕೆ ಏರಿಕೆಯಾಗಿದೆ. ನಿಯಮಿತವಾಗಿ ವೇತನ ನೀಡುವ ಉದ್ಯೋಗ ಕಳೆದುಕೊಂಡ ನಂತರ, ಅಷ್ಟೇ ಪ್ರಮಾಣದ ಮಹಿಳೆಯರು ಸ್ವಯಂ ಉದ್ಯೋಗವನ್ನು ಆಶ್ರಯಿಸಿರುವುದನ್ನು ಇದು ಸೂಚಿಸುತ್ತದೆ

* ಈ ಅವಧಿಯಲ್ಲಿ ದೇಶದ ಗ್ರಾಮೀಣ ಪ್ರದೇಶದಲ್ಲೂ ಸ್ವಯಂ ಉದ್ಯೋಗಿ ಮಹಿಳೆಯರ ಪ್ರಮಾಣವು ಶೇ 63ರಿಂದ ಶೇ 64.8ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲೂ ನಿಯಮಿತವಾಗಿ ವೇತನ ನೀಡುವ ಉದ್ಯೋಗ ನಷ್ಟವಾದ ನಂತರ ಮಹಿಳೆಯರು, ಸ್ವಯಂ ಉದ್ಯೋಗದತ್ತ ಹೊರಳಿರುವುದನ್ನು ಇದು ಸೂಚಿಸುತ್ತದೆ

ಕೃಷಿಯೇ ಆಸರೆ

ದೇಶದ ಕಾರ್ಮಿಕ ವರ್ಗ ಅತಿಹೆಚ್ಚು ಅವಲಂಬಿತವಾಗಿರುವುದು ಕೃಷಿ ಕ್ಷೇತ್ರದ ಮೇಲೆ. ಆದರೆ, ಜಾಗತೀಕರಣ, ನಗರೀಕರಣದಿಂದ ಕೃಷಿಯ ಮೇಲಿದ್ದ ಅವಲಂಬನೆ ಕಡಿಮೆಯಾಗುತ್ತಿದೆ ಎಂಬ ಭಾವನೆಯಿತ್ತು. ವಾಸ್ತವ ಏನೆಂದರೆ, ಕಳೆದ 4 ವರ್ಷಗಳ ದತ್ತಾಂಶಗಳನ್ನು ಗಮನಿಸಿದರೆ, ಕೃಷಿ ಮೇಲೆ ಅವಲಂಬನೆ ನಿಧಾನವಾಗಿ ಏರಿಕೆಯಾಗಿದೆ. 2017–18ರ ಅವಧಿಯಲ್ಲಿ ಶೇ 44.1ರಷ್ಟು ಜನರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ಪ್ರಮಾಣವು 2020–21ರ ವೇಳೆಗೆ ಶೇ 46.5ಕ್ಕೆ ಜಿಗಿದಿದೆ. ಅಂದರೆ, ಈ ಅವಧಿಯಲ್ಲಿ ಆವರಿಸಿದ್ದ ಕೋವಿಡ್, ನಗರದಲ್ಲಿ ಬೀಡುಬಿಟ್ಟಿದ್ದ ಜನರ ಉದ್ಯೋಗವನ್ನು ಕಸಿದುಕೊಂಡು, ಅವರನ್ನು ಮರಳಿ ತಮ್ಮ ಹಳ್ಳಿಗಳಿಗೆ ವಾಪಸಾಗುವಂತೆ ಮಾಡಿದೆ ಎಂದು ವಿಶ್ಲೇಷಿಸಬಹುದು.

ತಯಾರಿಕೆ ವಲಯದಲ್ಲೂ ಗಮನಾರ್ಹ ಬದಲಾವಣೆಗಳಾಗಿವೆ. ನಾಲ್ಕು ವರ್ಷಗಳ ಹಿಂದೆ ಶೇ 12ರಷ್ಟು ಜನರು ಈ ವಲಯವನ್ನು ನಂಬಿಕೊಂಡಿದ್ದರು. ಅವರ ಪ್ರಮಾಣವು 2021–22ರಲ್ಲಿ ಶೇ 10.9ಕ್ಕೆ ಕುಸಿದಿದೆ. ಸಾರಿಗೆ ಹಾಗೂ ಸಂಬಂಧಿತ ವಲಯಗಳಲ್ಲೂ ಉದ್ಯೋಗ ಕಡಿತಗೊಂಡಿವೆ. ಅಸಂಘಟಿತ ವಲಯದ (ಇತರೆ ಸೇವೆಗಳು) ಬಹುತೇಕ ಉದ್ಯೋಗಗಳು ನಷ್ಟಗೊಂಡಿವೆ. ತಯಾರಿಕೆ, ಸಾರಿಗೆ ಹಾಗೂ ಅಸಂಘಟಿತ ವಲಯದ ಎಲ್ಲ ಉದ್ಯೋಗಿಗಳು ಕೃಷಿ ಕ್ಷೇತ್ರಕ್ಕೆ ಹೊರಳಿಕೊಂಡಿದ್ದಾರೆ ಎಂದು ವರದಿಯ ದತ್ತಾಂಶಗಳು ತಿಳಿಸುತ್ತವೆ.

ನಿರುದ್ಯೋಗ ಪ್ರಮಾಣವೆಷ್ಟು?

ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ (ಎನ್‌ಎಸ್‌ಒ) ಬಿಡುಗಡೆ ಮಾಡುವ ಕಾರ್ಮಿಕ ಬಲ ಭಾಗವಹಿಸುವಿಕೆ ತ್ರೈಮಾಸಿಕ ವರದಿಗಳ ಪ್ರಕಾರ 2020–21ರಲ್ಲಿ ದೇಶದ ನಗರ ಪ್ರದೇಶದಲ್ಲಿ ನಿರುದ್ಯೋಗದ ಪ್ರಮಾಣ ಶೇ 13.9ರಷ್ಟು ಇತ್ತು. ಆದರೆ ಇದೇ ವರದಿಗಳನ್ನು ಆಧರಿಸಿ ಸಿದ್ಧಪಡಿಸಲಾದ ವಾರ್ಷಿಕ ವರದಿಯಲ್ಲಿ, ದೇಶದ ನಗರ ಪ್ರದೇಶದ ನಿರುದ್ಯೋಗದ ಪ್ರಮಾಣ ಶೇ 6.7ರಷ್ಟು ಎಂದು ನಮೂದಿಸಲಾಗಿದೆ.2018–19ನೇ ಸಾಲಿನಿಂದ ಪ್ರತಿ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ ವರದಿಯನ್ನು ಬಿಡುಗಡೆ ಮಾಡುತ್ತಿದೆ. ಜತೆಗೆ ಪ್ರತಿ ಒಂದು ತ್ರೈಮಾಸಿಕದಲ್ಲಿ ಒಂದೊಂದು ವರದಿ ಬಿಡುಗಡೆ ಮಾಡುತ್ತದೆ. ಆದರೆ ಈ ಎರಡೂ ರೀತಿಯ ವರದಿಗಳಲ್ಲಿ ನಿರುದ್ಯೋಗಕ್ಕೆ ಸಂಬಂಧಿಸಿದಂತೆ ನೀಡಲಾಗುವ ದತ್ತಾಂಶದಲ್ಲಿ ಭಾರಿ ವ್ಯತ್ಯಾಸವಿದೆ. ತ್ರೈಮಾಸಿಕ ವರದಿಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚು ಇರುತ್ತದೆ. ವಾರ್ಷಿಕ ವರದಿಗಳಲ್ಲಿ ನಿರುದ್ಯೋಗದ ಪ್ರಮಾಣ ಕಡಿಮೆ ಇರುತ್ತದೆ.

* ಎನ್‌ಎಸ್‌ಒ ತ್ರೈಮಾಸಿಕ ವರದಿಗಳ ಪ್ರಕಾರ 2020–21ರಲ್ಲಿ, ದೇಶದ ನಗರ ಪ್ರದೇಶದಲ್ಲಿ ನಿರುದ್ಯೋಗದ ಪ್ರಮಾಣ ಶೇ 13.9ರಷ್ಟು ಇತ್ತು. ಸಮೀಕ್ಷೆ ನಡೆಸಿದ ಅವಧಿಗೆ ಒಂದು ವಾರದ ಮುಂಚಿನ ಅವಧಿಯಲ್ಲಿನ ಉದ್ಯೋಗ ಸ್ಥಿತಿಯನ್ನು ಲೆಕ್ಕಹಾಕಿ ಈ ವರದಿಯನ್ನು ನೀಡಲಾಗಿದೆ

* ಇದೇ ವರದಿಗಳನ್ನು ಆಧರಿಸಿ ಸಿದ್ಧಪಡಿಸಿರುವ 2020–21ರ ವಾರ್ಷಿಕ ವರದಿಯಲ್ಲಿ, ದೇಶದ ನಗರ ಪ್ರದೇಶದಲ್ಲಿ ನಿರುದ್ಯೋಗದ ಪ್ರಮಾಣ ಶೇ 6.7 ಎಂದು ನಮೂದಿಸಲಾಗಿದೆ. ಇಡೀ ಆರ್ಥಿಕ ವರ್ಷದಲ್ಲಿ ಉದ್ಯೋಗ ಲಭ್ಯತೆಯ ಸ್ಥಿತಿಯನ್ನು ಆಧರಿಸಿ, ಈ ನಿರುದ್ಯೋಗದ ಪ್ರಮಾಣವನ್ನು ಲೆಕ್ಕಹಾಕಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ

* ಈ ಎರಡೂ ವರದಿಗಳಲ್ಲಿ ನಿರುದ್ಯೋಗದ ಪ್ರಮಾಣವನ್ನು ಭಿನ್ನ ರೀತಿಯಲ್ಲಿ ಲೆಕ್ಕಹಾಕಿರುವ ಕಾರಣ, ದೇಶದ ನಗರ ಪ್ರದೇಶದಲ್ಲಿನ ನಿರುದ್ಯೋಗದ ಪ್ರಮಾಣ ಎಷ್ಟು ಎಂಬುದರ ಸ್ಪಷ್ಟ ಚಿತ್ರಣ ಇಲ್ಲ

* 2021–22ನೇ ಸಾಲಿನ ಎಲ್ಲಾ ತ್ರೈಮಾಸಿಕ ವರದಿಗಳನ್ನು ಎನ್‌ಎಸ್‌ಒ ಬಿಡುಗಡೆ ಮಾಡಿದೆ. ಈ ಪ್ರಕಾರ ದೇಶದ ನಗರ ಪ್ರದೇಶದಲ್ಲಿ ನಿರುದ್ಯೋಗದ ಪ್ರಮಾಣ ಶೇ 9.81ರಷ್ಟಿದೆ. ಆದರೆ, ಎನ್‌ಎಸ್‌ಒ ವಾರ್ಷಿಕ ವರದಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ

ಆಧಾರ: ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ 2019–20 ಮತ್ತು 2020–21, ತ್ರೈಮಾಸಿಕ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.