ಬಾಗಲಕೋಟೆ: ಸ್ವಾವಲಂಬನೆ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ಎಲ್ಎಂ ಯೋಜನೆಯು ಸ್ಫೂರ್ತಿ ಸೆಲೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಎನ್ಆರ್ಎಲ್ಎಂ ಯೋಜನೆಯಡಿ ಮಹಿಳಾ ಉದ್ಯಮಿದಾರರ ಜಿಲ್ಲಾ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ತಮ್ಮಲ್ಲಿರುವ ಶಕ್ತಿ ಅರಿತುಕೊಂಡು, ಅದನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡಲ್ಲಿ ದೇಶ, ರಾಜ್ಯ ಗ್ರಾಮ ಮತ್ತು ಕುಟುಂಬ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಮಹಿಳಾ ಸ್ವ ಸಹಾಯ ಗುಂಪುಗಳಿಂದ ಈಗಾಗಲೇ 5 ಮೊಬೈಲ್ ಕ್ಯಾಂಟೀನ್ ತೆಗೆಯಲಾಗಿದ್ದು, ಎಲ್ಲವೂ ಚೆನ್ನಾಗಿ ನಡೆಯುತ್ತಿವೆ, ಜಮಖಂಡಿಯಲ್ಲಿ ಸೂಪರ್ ಮಾರ್ಕೆಟ್ ತೆಗೆಯಲಾಗಿದೆ. ಇತರ ಪ್ರಮುಖ ಸ್ಥಳಗಳಲ್ಲಿ ಸೂಪರ್ ಮಾರ್ಕೇಟ್ ತೆರೆಯಲು ಸ್ಥಳ ಗುರುತಿಸಲಾಗುತ್ತಿದ್ದು, ಶೀಘ್ರ ಪ್ರಾರಂಭಿಸಲಾಗುವುದು. ಈ ಯೋಜನೆಯಡಿ ಅಕ್ಕಾ ಕೆಫೆ ತೆರೆಯುವ ಉದ್ದೇಶವಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಕ್ಯಾಂಟೀನ್ ತೆರೆಯುಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ ಮಾತನಾಡಿ, ಎನ್ಆರ್ಎಲ್ಎಂ ಯೋಜನೆಯ ಉದ್ದೇಶ ಪ್ರತಿ ಕುಟುಂಬದ ಮಹಿಳೆ ಆರ್ಥಿಕ ಸಫಲತೆ ಸಾಧಿಸಿ, ತನ್ನ ಕುಟುಂಬದ ನಿರ್ವಹಣೆನ್ನು ಮಾಡಿಕೊಳ್ಳಬೇಕು ಎಂಬುದಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ಉದ್ಯಮಶೀಲತೆ ಅಭಿವೃದ್ಧಿ ಹಾಗೂ ಉದ್ಯಮಿ ನೋಂದಣಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ವಿಜಯ ಕಂಠಿ, ಉದ್ಯಮ ನಿಯಮಬದ್ಧಗೊಳಿಸುವಿಕೆ ಹಾಗೂ ಉತ್ಪನ್ನಗಳ ಗುಣಮಟ್ಟ ಕುರಿತು ವಿವರಿಸಿದರು.

ಅಗ್ರೋ ಮಾರ್ಕೇಟಿಂಗ್ ಸಮಾಲೋಚಕ ಅಮರ ಕಟ್ಟಿಮನಿ, ಉತ್ಪನ್ನಗಳ ಮಾರುಕಟ್ಟೆ ಮತ್ತು ಬ್ರ್ಯಾಂಡಿಂಗ್ ಕುರಿತು ಉಪನ್ಯಾಸ ನೀಡಿದರು. ಮಹಿಳಾ ಉದ್ಯಮಿದಾರರಾದ ಗೀತಾ ಹಂಪಿಹೊಳಿಮಠ, ಶಿವಕ್ಕ ಗೌಡರ, ಸುಜಾತಾ ಪಾಟೀಲ, ಲಿಂಗತ್ವ ಅಲ್ಪಸಂಖ್ಯಾತ ಆನಂದ ಭಜಂತ್ರಿ, ಶೋಭಾ ಬಿಳ್ಳೂರು, ಮಲ್ಲಮ್ಮ ಮಠಪತಿ, ಕಸ್ತೂರಿ ರಾಠೋಡ, ಹಾಸಂಬಿ ಪಕಾಲಿ, ದಾನಮ್ಮ ಮಂಗಸೂಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಉದ್ಯಮಿದಾರರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಯೋಜನಾ ನಿರ್ದೇಶಕ ಪುನೀತ್ ಬಿ.ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಸ್ವಾಗತಿಸಿದರು. ಜಿಲ್ಲಾ ವ್ಯವಸ್ಥಾಪಕ ಭಿಮಾನಂದ ಶೆಟ್ಟರ್ ವಂದಿಸಿದರು. ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಉಪಸ್ಥಿತರಿದ್ದರು.

ಐದು ಮೊಬೈಲ್ ಕ್ಯಾಂಟೀನ್ ಆರಂಭ ಸೂಪರ್ ಮಾರುಕಟ್ಟೆಗೆ ಜಾಗ ಗುರುತು ಆರ್ಥಿಕ ಸ್ವಾವಲಂಬಿಗಳಾಗಲು ಸಲಹೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.