ಬಾಗಲಕೋಟೆ: ಸತತ ಐದನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಅಭ್ಯರ್ಥಿಯಾಗಿರುವ ಪಿ.ಸಿ. ಗದ್ದಿಗೌಡರ ಗೆಲುವು ಸಾಧಿಸುವ ಮೂಲಕ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದ ದಾಖಲೆ ಬರೆಯಲಿದ್ದಾರೆಯೇ ಕಾದು ನೋಡಬೇಕಿದೆ.

ಕಳೆದ ಬಾರಿ ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸುವ ಮೂಲಕ 1962, 67, 71, 77ರಲ್ಲಿ ಗೆಲುವು ಸಾಧಿಸಿದ್ದ ಎಸ್.ಬಿ. ಪಾಟೀಲ ಅವರ ದಾಖಲೆಯನ್ನು ಗದ್ದಿಗೌಡರ ಸರಿಗಟ್ಟಿದ್ದರು. 2024ರಲ್ಲಿ ಗೆಲುವು ದಾಖಲಿಸಿದರೆ, ಐದು ಬಾರಿ ಈ ಕ್ಷೇತ್ರದಿಂದ ಗೆದ್ದ ಮೊದಲ ಸಂಸದರಾಗಲಿದ್ದಾರೆ.

ಮೂಲ ಜನತಾ ಪರಿವಾರದವರಾದ ಗದ್ದಿಗೌಡರ, ಒಮ್ಮೆ ಪರಿವಾರದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು. ರಾಜ್ಯ ಹಾಗೂ ಜಿಲ್ಲೆಯಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಜಿಲ್ಲೆಯ ಹಲವಾರು ಜನತಾ ಪರಿವಾರದ ನಾಯಕರು ಬಿಜೆಪಿ ಸೇರ್ಪಡೆಯಾದಾಗ ಗದ್ದಿಗೌಡರೂ ಸೇರ್ಪಡೆಗೊಂಡರು.

2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪಿ.ಸಿ. ಗದ್ದಿಗೌಡರ ಮೊದಲ ಬಾರಿಗೆ ಗೆಲುವು ಸಾಧಿಸುವ ಮೂಲಕ ಬಾಗಲಕೋಟೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ್ದರು. ನಂತರ ಹಿಂತಿರುಗಿ ನೋಡದೇ ಸತತವಾಗಿ 2008, 2013, 2018ರಲ್ಲಿ ಗೆಲುವು ಸಾಧಿಸಿದ್ದರು.

ಈ ಬಾರಿ ಮಾಜಿ ಸಚಿವ ಮುರುಗೇಶ ನಿರಾಣಿ, ಸ್ವಯಂ ನಿವೃತ್ತಿ ಪಡೆದಿರುವ ಡಾ.ಪ್ರಕಾಶ ಪರಪ್ಪ ಸೇರಿದಂತೆ ಹಲವರು ಟಿಕೆಟ್ಗಾಗಿ ಪ್ರಯತ್ನಿಸಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಮತ್ತೆ ಗದ್ದಿಗೌಡರಿಗೆ ಅವಕಾಶ ಮಾಡಿಕೊಟ್ಟಿದೆ.

ಜಿಲ್ಲೆಯ ಬಹುತೇಕ ನಾಯಕರು ರಾಜ್ಯ, ರಾಷ್ಟ್ರ ನಾಯಕರ ಮುಂದೆ ಗದ್ದಿಗೌಡರ ಹೆಸರನ್ನೇ ಹೇಳಿದ್ದರು. ಆದರೆ, ಅಚ್ಚರಿ ಹೆಸರು ಪ್ರಕಟಿಸುವ ಹೈಕಮಾಂಡ್ ಎಲ್ಲಿ ಬದಲಾವಣೆ ಮಾಡಿಬಿಡುತ್ತದೆಯೋ ಎಂಬ ಅಳುಕು ಬಿಜೆಪಿ ನಾಯಕರಲ್ಲಿಯೂ ಇತ್ತು. ರಾಜ್ಯದ ಕೆಲವೆಡೆ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದ್ದರೂ, ಇಲ್ಲಿ ಹಾಲಿ ಸಂಸದರಿಗೆ ಮಣೆ ಹಾಕಲಾಗಿದೆ.

ಸೌಮ್ಯ ಸ್ವಭಾವದವರು, ವಿಧಾನಸಭಾ ಕ್ಷೇತ್ರ, ನಾಯಕರ ಕಾರ್ಯದಲ್ಲಿ ಮೂಗು ತೂರಿಸುವುದಿಲ್ಲ. ಕಾಂಗ್ರೆಸ್, ಜೆಡಿಎಸ್ ನಾಯಕರೊಂದಿಗೂ ಉತ್ತಮ ಬಾಂಧವ್ಯ ಕಾಪಾಡಿಕೊಂಡು ಬಂದಿರುವುದು ಅವರಿಗೆ ಪ್ಲಸ್ ಆಗಿದೆ.

ಎದುರಾಳಿ ಯಾರು: ಬಿಜೆಪಿಯಿಂದ ಅಭ್ಯರ್ಥಿ ಘೋಷಣೆಯಾಗಿದ್ದು, ಕಾಂಗ್ರೆಸ್ನಿಂದ ಯಾರಾಗಲಿದ್ದಾರೆ ಎಂಬುದು ಇನ್ನೂ ನಿಗದಿಯಾಗಿಲ್ಲ.

ಕಾಂಗ್ರೆಸ್ನಿಂದ ಹತ್ತಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದು, ದಿನಕ್ಕೊಬ್ಬರ ಹೆಸರು ಕೇಳಿ ಬರುತ್ತಿದೆ. ಯಾರಿಗೆ ಟಿಕೆಟ್ ಅಂತಿಮವಾಗಲಿದೆ ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.