ಇಳಕಲ್: ‘ಇಲ್ಲಿಯ ಇಳಕಲ್ ಕೋ-ಆಪರೇಟಿವ್ ಬ್ಯಾಂಕ್ 2023-24ನೇ ಹಣಕಾಸು ವರ್ಷದಲ್ಲಿ ಒಟ್ಟು ₹7.54 ಕೋಟಿ ಲಾಭ ಗಳಿಸಿದೆ’ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಅರವಿಂದ ಮಂಗಳೂರ ಹೇಳಿದರು.

ಬ್ಯಾಂಕಿನ ಕಾಲೇಜು ಶಾಖೆಯ ಸಭಾಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬ್ಯಾಂಕಿಗೆ ಪ್ರಧಾನ ಕಚೇರಿ ಹಾಗೂ 5 ಶಾಖೆಗಳಿದ್ದು, ಒಟ್ಟು 23,958 ಸದಸ್ಯರಿದ್ದಾರೆ. ₹11.58 ಕೋಟಿ ಶೇರು ಬಂಡವಾಳ, ₹49.96 ಕೋಟಿ ನಿಧಿ, ₹410.10 ಕೋಟಿ ಠೇವಣಿ ಸೇರಿ ಒಟ್ಟು ₹482.18 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹310 ಕೋಟಿ ಸಾಲ ನೀಡಿದ್ದು, ಪ್ರಸಕ್ತ ವರ್ಷದಲ್ಲಿ ₹287.90 ಕೋಟಿ ಸಾಲ ವಸೂಲಾಗಿದೆ’ ಎಂದರು.

ಬ್ಯಾಂಕ್ ಪ್ರಧಾನ ಕಚೇರಿ ಸೇರಿದಂತೆ ಎಸ್.ವಿ.ಎಂ ಕಾಲೇಜು, ಎಪಿಎಂಸಿ, ಕುಷ್ಟಗಿ, ಕೂಡಲಸಂಗಮ, ಗುಡೂರ (ಎಸ್.ಸಿ) ಶಾಖೆಗಳನ್ನು ಹೊಂದಿದೆ. ಕೋರ್ ಬ್ಯಾಂಕಿಂಗ್ ಜೊತೆಗೆ ಸೇಫ್ ಲಾಕರ್, ಎಟಿಎಂ ಸೌಲಭ್ಯ ಹೊಂದಿದೆ ಎಂದು ಉಪಾಧ್ಯಕ್ಷೆ ವೀಣಾ ಅರಳಿಕಟ್ಟಿ ತಿಳಿಸಿದರು.

ಇಂದು ಸಾಮಾನ್ಯ ಸಭೆ: ‘ಬ್ಯಾಂಕಿನ 59ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಸೆ.22ರ ಬೆಳಿಗ್ಗೆ 11 ಗಂಟೆಗೆ ಎಸ್.ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ’ ಎಂದು ಪ್ರಧಾನ ವ್ಯವಸ್ಥಾಪಕ ನಾಗರಾಜ ಕುಟಗಮರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.