ಮಹಾಲಿಂಗಪುರ: ‘ಸಮಾನತೆಗಾಗಿ ಹೋರಾಡಿದ ಭಕ್ತಶ್ರೇಷ್ಠ ಕನಕದಾಸರ ತತ್ವಾದರ್ಶ ಎಲ್ಲರಿಗೂ ದಾರಿದೀಪವಾಗಿದೆ’ ಎಂದು ಶಿಕ್ಷಕ ಕೆ.ಬಿ.ಕುಂಬಾಳಿ ಹೇಳಿದರು.

ಸಮೀಪದ ರನ್ನಬೆಳಗಲಿಯ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ಕನಕದಾಸ ಸೇವಾ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಕನಕದಾಸರು ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದಿ, ನೆಮ್ಮದಿ ಮೂಡಿಸಿದ ಮಹಾನ್ ಪುರುಷ. ಆಧ್ಯಾತ್ಮಿಕ, ಸಾಮಾಜಿಕ ಬದಲಾವಣೆಗೆ ಶ್ರಮಿಸಿದರು. ಕೀರ್ತನೆಗಳ ಮೂಲಕ ಜನರಿಗೆ ಉತ್ತಮ ಸಂದೇಶ ನೀಡಿದರು’ ಎಂದರು.

ರಮೇಶಕುಮಾರ ಶಾಸ್ತ್ರಿ, ಸದಾಶಿವ ಗುರೂಜಿ ಸಾನ್ನಿಧ್ಯ, ಲಕ್ಕಪ್ಪ ಮೇಡ್ಯಾಗೋಳ ಅಧ್ಯಕ್ಷತೆ ವಹಿಸಿದ್ದರು. ಶ್ರೀರಾಮಸೇನಾ ರಾಜ್ಯ ಉಪಾಧ್ಯಕ್ಷ ಮಹಾಲಿಂಗಪ್ಪ ಗುಂಜಿಗಾಂವಿ ಮಾತನಾಡಿದರು. ವಿವಿಧ ಕ್ಷೇತ್ರಗಳ 18ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಯಿತು.

ರಾಮಪ್ಪ ಪೂಜೇರಿ, ಮಹಾದೇವಪ್ಪ ಕುಂಬಾಳಿ, ಲಕ್ಷ್ಮಣ ಕ್ವಾನ್ಯಾಗೊಳ, ಭೀಮಪ್ಪ ಮನ್ನಿಕೇರಿ, ಕೆಂಚಪ್ಪ ಕಂಬಳಿ, ಸಿದ್ದುಗೌಡ ಪಾಟೀಲ, ಪ್ರವೀಣ ಪಾಟೀಲ, ಸಂಗಪ್ಪ ಅಮಾತಿ, ಮುಬಾರಕ ಅತ್ತಾರ, ನೀಲಕಂಠ ಸೈದಾಪುರ, ಮುತ್ತಪ್ಪ ಸಣ್ಣಟ್ಟಿ, ಶಿವನಗೌಡ ಪಾಟೀಲ, ಬಸಪ್ಪ ಬಡಿಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.