ಬಳ್ಳಾರಿ: ರಾಜ್ಯದ ಎಲ್ಲ ನಿರುದ್ಯೋಗ ಯುವಕ– ಯುವತಿಯರಿಗೆ ಸರ್ಕಾರ ನಿರುದ್ಯೋಗ ಭತ್ಯೆ ಕೊಡಬೇಕು ಎಂದು ಆಗ್ರಹಿಸಿ ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

‘ಉದ್ಯೋಗ ನಮ್ಮ ಹಕ್ಕು ಉದ್ಯೋಗ ಕೊಡುವುದು ಸರ್ಕಾರದ ಜವಾಬ್ದಾರಿ. ಒಂದು ವೇಳೆ ಉದ್ಯೋಗ ಕೊಡಲಾಗದಿದ್ದರೆ ನಿರುದ್ಯೋಗ ಭತ್ಯೆ ಕೊಡುವುದು ಸರ್ಕಾರದ ಹೊಣೆ. ಅದು ಸಾಂವಿಧಾನಿಕ ಹಕ್ಕು’ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.

‘ಚುನಾವಣೆ ಸಮಯದಲ್ಲಿ ಎಲ್ಲರಿಗೂ ನಿರುದ್ಯೋಗ ಭತ್ಯೆ ಕೊಡುವುದಾಗಿ ಘೋಷಿಸಿ ಯುವಕರಿಂದ ಮತ ಹಾಕಿಸಿಕೊಂಡು ಅಧಿಕಾರಕ್ಕೆ ಬಂದ ಮೇಲೆ ಬೀದಿಯಲ್ಲಿ ಹೋಗುವವರಿಗೆಲ್ಲ ನಿರುದ್ಯೋಗ ಭತ್ಯೆ ಕೊಡಲಾಗುವುದಿಲ್ಲ ಎಂಬ ಸರ್ಕಾರದ ಧೋರಣೆ ಯುವಜನ ವಿರೋಧಿ ನೀತಿ’ ಎಂದು ಖಂಡಿಸಲಾಯಿತು.

ರಾಜ್ಯ ಸರ್ಕಾರ ಎಲ್ಲ ನಿರುದ್ಯೋಗಿಗಳಿಗೂ ಭತ್ಯೆ ಕೊಡದಿದ್ದರೆ ಚಳವಳಿ ಸಂಘಟಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್, ಮುಖಂಡರಾದ ಜಮೀರ್, ಶಿವಶಂಕರ್, ಪ್ರದೀಪ್, ಪ್ರಶಾಂತ್, ಶಫಿ, ವೀರೇಶ್ ಗೌಡ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.