ಹರಪನಹಳ್ಳಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಶಾಲೆಗಳಿಗೆ 2024-25ನೇ ಸಾಲಿನ ಪ್ರಥಮ ದಿನ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಸಂಭ್ರಮದಿಂದ ಸ್ವಾಗತಿಸಿದರು.

ಕೆ.ಕಲ್ಲಹಳ್ಳಿಯಲ್ಲಿ ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಶಾಲೆಗೆ ತೆರಳಿದರು. ಬೆಣ್ಣಿಹಳ್ಳಿ, ಅಲಗಿಲವಾಡ, ಚಿಗಟೇರಿ, ಮತ್ತಿಹಳ್ಳಿ, ಬೆಂಡಿಗೇರೆ, ಹಲವಾಗಲು, ಅಪ್ಪರ ಮೇಗಳಪೇಟೆ , ನಂದಿಬೇವೂರು, ಕಣಿವಿಹಳ್ಳಿ ಸೇರಿ ಹಲವೆಡೆ ವಿದ್ಯಾರ್ಥಿಗಳಿಗೆ ಹೂವು, ಪಠ್ಯಪುಸ್ತಕ ಕೊಟ್ಟು ಸ್ವಾಗತಿಸಲಾಯಿತು.

ಮೇಗಳಪೇಟೆ ಶತಮಾನೋತ್ಸವ ಶಾಲೆಯಲ್ಲಿ ದಾಖಲಾಗಿರುವ ಎಲ್ ಕೆ ಜಿ, ಯುಕೆಜಿ ಯ 30 ಚಿಣ್ಣರಿಗೆ ಪುಷ್ಪಗುಚ್ಚ ಕೊಟ್ಟು ಸ್ವಾಗತಿಸಿದ್ದು ವಿಶೇಷವಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ ಶೈಕ್ಷಣಿಕ ಆರಂಭಿಕ ದಿನ ವಿವಿಧ ಶಾಲೆಗಳಿಗೆ ಬೇಟಿಕೊಟ್ಟು ವೀಕ್ಷಿಸಿದರು.

ಶಾಲೆಗೆ ಸಿಂಗಾರ: ಮಕ್ಕಳಿಗೆ ಭವ್ಯ ಸ್ವಾಗತ

ಕುರುಗೋಡು: ಸರ್ಕಾರದ ನಿರ್ದೇಶನದಂತೆ ತಾಲ್ಲೂಕಿನಲ್ಲಿ ಅನುದಾನ ರಹಿತ ಅನುದಾನಿತ ಮತ್ತು ಸರ್ಕಾರಿ ಶಾಲೆಗಳು ಶುಕ್ರವಾರ ಆರಂಭಗೊಂಡವು. 45 ದಿನಗಳ ಬೇಸಿಗೆ ರಜೆಯ ಮಜೆಯ ಗುಂಗಿನಲ್ಲಿದ್ದ ವಿದ್ಯಾರ್ಥಿಗಳು ಪುಸ್ತಕಗಳಿರುವÀÀ ಬ್ಯಾಗ್ನೊಂದಿಗೆ ಶುಕ್ರವಾರ ಇಲ್ಲದ ಮನಸ್ಸಿನಿಂದಲೇ ಶಾಲೆಕಡೆಗೆ ಹೆಜ್ಜೆಹಾಕಿದರು. ಪ್ರಾರಂಭೋತ್ಸವದ ಅಂಗವಾಗಿ ಬಾಳೆಕಂದು ತೆಂಗಿನ ಗರಿ ವಿವಿಧ ಬಗೆಯ ಹೂಗಳಿಂದ ಶಾಲೆ ಮುಂಭಾಗವನ್ನು ಸಿಂಗಾರಗೊಳಿಸಿದ್ದು ಕೆಲವುಕಡೆ ಕಂಡುಬಂತು. ಮೊದಲ ದಿನ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಕೆಲವು ಶಾಲೆಗಳಲ್ಲಿ ಶಿಕ್ಷಕರು ಪಷ್ಪವೃಷ್ಠಿ ಕೈದು ಸ್ವಾಗತಿಸಿದರು. ಇನ್ನೂ ಕೆಲವು ಶಾಲೆಗಳಲ್ಲಿ ಹೂ ಗುಚ್ಚ ಮತ್ತು ಚಾಕೋಲೆಟ್ ನೀಡಿ ಸ್ವಾಗತ ಕೋರುತ್ತಿದ್ದ ದೃಶ್ಯ ಗಮನ ಸೆಳೆಯಿತು. ಕೆಲವು ಶಾಲೆಗಳಲ್ಲಿ ಪ್ರಾರಂಭದ ದಿನವೇ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಸಮವಸ್ತ್ರ ವಿತರಿಸಿದರು. ತಾಲ್ಲೂಕಿನಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದರು. ಮುಂದಿನ ಎರಡು ಮೂರು ದಿನಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ನಿರೀಕ್ಷೆ ಇದೆ. ಮೊದಲ ದಿನ ಬಿಸಿಊಟದ ಜತೆಗೆ ಸಿಹಿ ನೀಡಲಾಯಿತು. ಒಂದು ವಾರದೊಳಗೆ ಲಭ್ಯವಿರುವ ಪುಸ್ತಕಗಳನ್ನು ಮಕ್ಕಳಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಬಿಇಒ ಸಿದ್ಧಲಿಂಗಮೂರ್ತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.