ಬಳ್ಳಾರಿ: ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ನಿರ್ಮಿಸಿರುವ ಅಕ್ರಮ ಬಡಾವಣೆ ಕುರಿತು ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವರ ಕಚೇರಿಯಿಂದಲೇ ಟಿಪ್ಪಣಿ ಬಂದಿದ್ದರೂ, ಜಿಲ್ಲಾಡಳಿತ ಈ ವರೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿರುವುದು ಬಹಿರಂಗವಾಗಿದೆ.

ಸಂಡೂರು ತಾಲೂಕು ವಡ್ಡು ಗ್ರಾಮಕ್ಕೆ ಸೇರಿದ ಸರ್ವೆ ನಂ.262 (6 ಎಕರೆ 16 ಸೆಂಟ್ಸ್) ಜಮೀನಿನಲ್ಲಿ ಎಸ್.ಬಸವರಾಜಯ್ಯ ಎಂಬುವರ ಮಕ್ಕಳು ಭೂಮಿಯನ್ನು ಕೃಷಿಯೇತರ ಬಳಕೆಗೆ ಭೂಪರಿವರ್ತನೆ ಮಾಡಿಸದೆ, ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೆ ಅಕ್ರಮ ಬಡಾವಣೆ ನಿರ್ಮಿಸಿ ನಿವೇಶನ ಮಾರಾಟ ಮಾಡುತ್ತಿರುವುದು ಹಾಗೂ ಕೃಷಿ ಜಮೀನಿನಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸುತ್ತಿರುವ ಬಗ್ಗೆ ಪತ್ರಕರ್ತ ಚಂದ್ರಕಾಂತ ವಡ್ಡು ಅವರು ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಇತರ ಸಂಬಂಧಿತ ಅಧಿಕಾರಿಗಳಿಗೆ ಕಳೆದ ಹಲವು ವರ್ಷಗಳಿಂದ ದೂರು ನೀಡುತ್ತಾ ಬಂದಿದ್ದಾರೆ.

ಈ ಮಧ್ಯೆ ಚಂದ್ರಕಾಂತ ವಡ್ಡು ಅವರು ಕಂದಾಯ ಸಚಿವರಿಗೂ ದೂರು ಸಲ್ಲಿಸಿದ್ದರು. ದೂರು ಪರಿಶೀಲಿಸಿದ್ದ ಸಚಿವರು, ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಸಚಿವರು ಟಿಪ್ಪಣಿ ನೀಡಿ ಐದು ತಿಂಗಳೇ ಕಳೆದಿದ್ದರೂ, ಜಿಲ್ಲಾಡಳಿತ ಅಕ್ರಮ ಬಡಾವಣೆ ವಿರುದ್ಧ ಕ್ರಮವನ್ನೇ ಕೈಗೊಂಡಿಲ್ಲ. ಈ ಮಧ್ಯೆ, ಬಡಾವಣೆಯಲ್ಲಿ ನಿವೇಶನಗಳ ಮಾರಾಟ ಮತ್ತು ಕಟ್ಟಡ ನಿರ್ಮಾಣ ಎಗ್ಗಿಲ್ಲದೇ ಮುಂದುವರಿದಿದ್ದು, ಅಮಾಯಕ ನಿವೇಶನ ಖರೀದಿದಾರರು ಮೋಸ ಹೋಗುತ್ತಿದ್ದಾರೆ.

ನಿರಂತರ ಪತ್ರ ವ್ಯವಹಾರ: ಕೃಷಿ ಜಮಿನಿನ ಮಾಲೀಕತ್ವ ವ್ಯಾಜ್ಯ, ಅಕ್ರಮ ಬಡಾವಣೆಗೆ ಸಂಬಂಧಿಸಿದ ಕೋರ್ಟ್ ಆದೇಶ, ಅಕ್ರಮ ಬಡಾವಣೆ ತೆರವು ಮಾಡಲು ಸಂಡೂರು ತಹಶೀಲ್ದಾರ್ ಮಾಡಿರುವ ಶಿಫಾರಸು, ಅಕ್ರಮ ಬಡಾವಣೆ ಮಾಡಿದವರಿಗೆ ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸತತ ನೋಟಿಸ್ ನೀಡಿರುವ ಕುರಿತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿಯ ಸಿಇಒಗೆ ಸತತ ದೂರು ನೀಡಿದರೂ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ ಹಾಗೂ ಅನಧಿಕೃತ ಕಟ್ಟಡಗಳ ಕುರಿತು ಸಂಡೂರು ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರು 2024ರ ಏಪ್ರಿಲ್1 ರಂದು ನೀಡಿದ ತನಿಖಾ ವರದಿಯನ್ನು ಕೂಡ ಜಿಲ್ಲಾ ಪಂಚಾಯತಿ ಸಿಇಒ ಗಂಭಿರವಾಗಿ ಪರಿಗಣಿಸಿಲ್ಲ ಎಂದು ಚಂದ್ರಕಾಂತ ವಡ್ಡು ಆರೋಪಿಸಿದ್ದಾರೆ.

ಕ್ರಮಕ್ಕೆ ಶಿಫಾರಸು ಮಾಡಿದ್ದ ತಹಶೀಲ್ದಾರ್: ಅಕ್ರಮವೆಸಗಿರುವ ವ್ಯಕ್ತಿಗಳ ವಿರುದ್ಧ ಕರ್ನಾಟಕ ಭೂಕಾಯ್ದೆ 1964 ಕಲಂ 95 ಮತ್ತು 96 ಪ್ರಕಾರ ಕ್ರಮ ಜರುಗಿಸಲು 2012ರ ಜನವರಿ 5ರಂದು ಸಂಡೂರು ತಹಶೀಲ್ದಾರರು ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದರು. ಆಗಿನ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರು 2014ರ ಸೆಪ್ಟೆಂಬರ್ 10ರಂದೇ ಸಂಬಂಧಿಸಿದವರಿಗೆ ನೋಟೀಸ್ ಜಾರಿ ಮಾಡಿ ಅನಧಿಕೃತ ಬಡಾವಣೆ ತೆರವುಗೊಳಿಸಲು ಸೂಚಿಸಿದ್ದರು ಎಂಬುದು ಲಭ್ಯ ದಾಖಲೆಗಳಿಂದ ಗೊತ್ತಾಗಿದೆ.

ವಡ್ಡು ಗ್ರಾಮದ ಅನಧೀಕೃತ ಬಡಾವಣೆಯ ಸದ್ಯದ ಸ್ಥಿತಿಗತಿ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಂಡೂರು ತಾಲೂಕಿನ ತಹಶೀಲ್ದಾರ್ ಅವರೊಂದಿಗೆ ಚರ್ಚಿಸಲಾಗುದು.
ಪ್ರಶಾಂತ್ ಕುಮಾರ್ ಮಿಶ್ರಾ ಜಿಲ್ಲಾಧಿಕಾರಿ ಬಳ್ಳಾರಿ

ಅಕ್ರಮ ಬಡಾಣೆಯಲ್ಲಿ ಅಂಗನಾಡಿ ಕಟ್ಟಡ

6 ಎಕರೆ 16 ಸೆಂಟ್ಸ್ ಜಾಗದಲ್ಲಿ ‘ಜಯಸಂತೋಷಿಮಾತಾ ಕಾಲೋನಿ’ ಎಂಬ ಹೆಸರಿನಲ್ಲಿ ಬಡಾವಣೆ ಅಭಿವೃದ್ಧಿಪಡಿಸಲಾಗಿದ್ದು ಇದರಲ್ಲಿ ಅಂಗನವಾಡಿ ಕಟ್ಟಡವನ್ನೂ ನಿರ್ಮಾಣ ಮಾಡಲಾಗಿದೆ. ಸಂಡೂರಿನ ಶಾಸಕರಾಗಿದ್ದ ಟಿ. ತುಕಾರಾಂ ಅವರೇ ಮುಂದೆ ನಿಂತು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ 5 ತಿಂಗಳಲ್ಲೇ ಕಾಮಗಾರಿ ಮುಗಿಸಲಾಗಿದೆ. ಪಂಚಾಯತ್ ರಾಜ್ ಇಲಾಖೆಯಿಂದ ಜಿಲ್ಲಾ ಖನಿಜ ನಿಧಿಯ (ಡಿಎಂಎಫ್) ₹20 ಲಕ್ಷ ವನ್ನು ಅಕ್ರಮ ಬಡಾವಣೆಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಬಳಸಲಾಗಿದೆ.

ಚೆಂಡು ಜಿಲ್ಲಾಧಿಕಾರಿ ಅಂಗಳಕ್ಕೆ

ಚಂದ್ರಕಾಂತ ಅವರ ನಿರಂತರ ಹೋರಾಟದ ಪರಿಣಾಮವಾಗಿ ತೋರಣಗಲ್ಲಿನ ಕಂದಾಯ ನಿರೀಕ್ಷಕರು ಇತ್ತೀಚೆಗೆ ಬಡಾವಣೆ ಕುರಿತು ತನಿಖೆ ನಡೆಸಿ ಸಂಡೂರು ತಹಶೀಲ್ದಾರ್ಗೆ ವರದಿ ಸಲ್ಲಿಸಿದ್ದಾರೆ. ಜಮೀನು ಭೂಪರಿವರ್ತೆನೆಯಾಗದಿರುವುದು ಬಡಾವಣೆಗೆ ಅನುಮೋದನೆ ಸಿಗದೇ ಇರುವುದು ಬಡಾವಣೆ ಅಭಿವೃದ್ಧಿಪಡಿಸಿದವರು ಸೂಕ್ತ ದಾಖಲೆ ಸಲ್ಲಿಸದಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ತಹಶೀಲ್ದಾರರು ಈ ವರದಿಯನ್ನು ಜುಲೈ 8 ರಂದು ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ಹೀಗಾಗಿ ಅಕ್ರಮ ಬಡಾವಣೆಯೊಂದರ ವಿರುದ್ಧ ಜಿಲ್ಲಾಧಿಕಾರಿ ಏನು ಕ್ರಮ ಕೈಗೊಳ್ಳಲಿದ್ದಾರೆ ಎಂಬ ಪ್ರಶ್ನೆ ಸದ್ಯ ಉದ್ಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.