ಹೊಸಪೇಟೆ (ವಿಜಯನಗರ): ಪೆಟ್ರೋಲ್, ಡೀಸೆಲ್ ದರ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರುವುದರಿಂದ ವಾಹನ ಸವಾರರು, ಮಾಲೀಕರು ಈಗ ಅನ್ಯ ಮಾರ್ಗಗಳನ್ನು ಕಂಡುಕೊಳ್ಳುವತ್ತ ಚಿತ್ತ ಹರಿಸಿದ್ದಾರೆ.

ಹಲವರು ಪೆಟ್ರೋಲ್, ಡೀಸೆಲ್ ವಾಹನಗಳ ಸಹವಾಸವೇ ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗಿದ್ದಾರೆ. ಇದೇ ಮಾರ್ಗವನ್ನು ಹಲವರು ಅನುಸರಿಸುತ್ತಿದ್ದಾರೆ. ಆದರೆ, ಬೆರಳೆಣಿಕೆಯ ಚಾರ್ಜಿಂಗ್ ಕೇಂದ್ರಗಳು ಇರುವುದರಿಂದ ಇದು ಸಮಸ್ಯೆಗೆ ಕಾರಣವಾಗಿದೆ.

ಚಾರ್ಜಿಂಗ್ ಕೇಂದ್ರಗಳು ಹೆಚ್ಚಾದ ನಂತರ ವಾಹನ ಖರೀದಿಸಿದರಾಯಿತು ಎಂಬ ನಿರ್ಧಾರಕ್ಕೆ ಮತ್ತೆ ಕೆಲವರು ಬಂದಿದ್ದಾರೆ. ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚಿನ ಪಿಕಪ್ ಇರುವುದಿಲ್ಲ. ಮಾರ್ಗ ಮಧ್ಯದಲ್ಲಿ ಚಾರ್ಜಿಂಗ್ ಮುಗಿದು ಹೋದರೆ ಸಮಸ್ಯೆ. ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ನಿರಾಸಕ್ತಿ ತೋರಿಸಲು ಇದು ಮುಖ್ಯ ಕಾರಣ ಎಂದು ಗೊತ್ತಾಗಿದೆ.

ಕೆಲ ವರ್ಷಗಳ ಹಿಂದೆ ತೈಲ ದರ ಸ್ವಲ್ಪ ಹೆಚ್ಚಾದಾಗ ಹಲವರು ಅವರ ವಾಹನಗಳಿಗೆ ಎಲ್ಪಿಜಿ ಟ್ಯಾಂಕ್ ಅಳವಡಿಸಿಕೊಂಡಿದ್ದರು. ಆದರೆ, ತೈಲ ದರದಂತೆಯೇ ಎಲ್ಪಿಜಿ ದರವೂ ನಾಗಾಲೋಟದಿಂದ ಹೆಚ್ಚಳವಾಗುತ್ತಿರುವುದರಿಂದ ಜನರ ಒಲವು ಈಗ ಇದರ ಬಗ್ಗೆಯೂ ಕಡಿಮೆಯಾಗಿದೆ.

ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್, ಎಲ್ಪಿಜಿ ಇವುಗಳ ಹೊರತಾಗಿಯೂ ಕೆಲವರು ಬೇರೆ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಶಾಲೆ, ಕಾಲೇಜು, ಉದ್ದಿಮೆ ಹೀಗೆ ಬೇರೆ ಬೇರೆ ವಲಯಗಳಲ್ಲಿ ಕೆಲಸ ನಿರ್ವಹಿಸುವವರು ಈ ಹಿಂದೆ ಅವರವರ ದ್ವಿಚಕ್ರ ವಾಹನ, ಕಾರುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಈಗ ಅದರ ಬದಲು ಷೇರ್ ಮಾಡಿಕೊಂಡು ಒಂದೇ ವಾಹನದಲ್ಲಿ ಸಂಚಾರ ಮಾಡುತ್ತಿದ್ದಾರೆ. ಇದು ಹೊಸ ಬೆಳವಣಿಗೆ.

ದ್ವಿಚಕ್ರ ವಾಹನದಲ್ಲಿ ಇಬ್ಬರು, ಕಾರುಗಳಿದ್ದರೆ ನಾಲ್ವರು ಸೇರಿಕೊಂಡು ಹೋಗುತ್ತಿದ್ದಾರೆ. ಪೆಟ್ರೋಲ್ ಅಥವಾ ಡೀಸೆಲ್ಗೆ ತಗಲುವ ಒಟ್ಟು ವೆಚ್ಚವನ್ನು ಎಲ್ಲರೂ ಸಮನಾಗಿ ಹಾಕುತ್ತಿದ್ದಾರೆ. ಕಾರು ಇರದಿದ್ದವರೂ ಮಿನಿ ಆಟೊ, ಟಂ ಟಂಗಳಲ್ಲಿ ಹೋಗುತ್ತಿದ್ದಾರೆ. ತಾಲ್ಲೂಕು ಕೇಂದ್ರಗಳು, ಹೋಬಳಿಗಳಿಗೆ ಉತ್ತಮ ಸಾರಿಗೆ ಸೌಕರ್ಯ ಇರುತ್ತದೆ. ಅಂತಹ ಕಡೆಗಳಿಗೆ ಹೆಚ್ಚಿನವರು ಮಾಸಿಕ ಬಸ್ ಪಾಸ್ ಪಡೆದು ಅದರಲ್ಲಿ ಸಂಚರಿಸುತ್ತಿದ್ದಾರೆ. ಹೀಗೆ ಸ್ವಲ್ಪ ಮಟ್ಟಿಗಾದರೂ ಹಣ ಉಳಿತಾಯ ಮಾಡುವ ಉಮೇದು ಅವರದು.

‘ನಾನು ಜಿಂದಾಲ್ ಕಂಪನಿ ಉದ್ಯೋಗಿ. ಸುಮಾರು ವರ್ಷಗಳಿಂದ ನನ್ನ ಬೈಕಿನಲ್ಲೇ ಕಂಪನಿಗೆ ಹೋಗಿ ಬರುತ್ತಿರುವೆ. ಆದರೆ, ಪೆಟ್ರೋಲ್ ದರ ಸಾಕಷ್ಟು ಹೆಚ್ಚಾಗಿದೆ. ಅದರ ಜೊತೆಗೆ ಎಲ್ಲದರ ಬೆಲೆಯೂ ಹೆಚ್ಚಳವಾಗಿದೆ. ನನ್ನ ಸ್ನೇಹಿತ ಕೂಡ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ. ಈಗ ಇಬ್ಬರ ಪೈಕಿ ಒಬ್ಬರ ಬೈಕ್ ತೆಗೆದುಕೊಂಡು ಹೋಗುತ್ತೇವೆ. ಇಬ್ಬರು ಸಮನಾಗಿ ಪೆಟ್ರೋಲ್ಗೆ ಬರುವ ವೆಚ್ಚವನ್ನು ಹಾಕುತ್ತೇವೆ. ಆದರೆ, ಇಬ್ಬರ ಶಿಫ್ಟ್ ಬದಲಾದಾಗ ಮತ್ತೆ ಸಮಸ್ಯೆ ಉಂಟಾಗುತ್ತದೆ’ ಎಂದು ರಮೇಶ ತಿಳಿಸಿದರು.

‘ಪೆಟ್ರೋಲ್ ವಾಹನ ಸಾಕೆಂದು ಹೋದ ವರ್ಷ ಎಲೆಕ್ಟ್ರಿಕ್ ವಾಹನ ಖರೀದಿಸಿರುವೆ. ಆದರೆ, ಪಿಕಪ್ ಸರಿಯಿಲ್ಲ. ಮಾರ್ಗ ಮಧ್ಯದಲ್ಲಿ ಎಲ್ಲಾದರೂ ಚಾರ್ಜಿಂಗ್ ಮುಗಿದರೆ ಬಹಳ ಸಮಸ್ಯೆ ಎದುರಿಸಬೇಕಾಗುತ್ತದೆ. ನಗರದಲ್ಲಿ ಒಂದೆರಡು ಕಡೆ ಚಾರ್ಜಿಂಗ್ ಕೇಂದ್ರಗಳಿವೆ. ಗ್ರಾಮೀಣ ಪ್ರದೇಶ ಇಲ್ಲ. ಅಲ್ಲದೇ ವಿದ್ಯುತ್ ದರ ಕೂಡ ಹೆಚ್ಚಾಗಿರುವುದರಿಂದ ಪೆಟ್ರೋಲ್ನಷ್ಟೇ ಖರ್ಚು ಬರುತ್ತಿದೆ. ಏನು ಮಾಡಬೇಕು ಎನ್ನುವುದೇ ತೋಚುತ್ತಿಲ್ಲ. ಅನೇಕ ದಿನಗಳಿಂದ ಮಾಸಿಕ ಬಸ್ ಪಾಸ್ ಪಡೆದು ಕೆಲಸಕ್ಕೆ ಹೋಗಿ ಬರುತ್ತಿದ್ದೇನೆ’ ಎಂದು ಭೋಜರಾಜ ತಿಳಿಸಿದರು.

ಮೈಲೇಜ್ ವಾಹನಕ್ಕೆ ಬೇಡಿಕೆ
ತೈಲ ದರ ಹೆಚ್ಚಳ ಆಗಿರುವುದರಿಂದ ವಾಹನ ಖರೀದಿಸುವವರು ಉತ್ತಮ ಮೈಲೇಜ್ ಕೊಡುವ ವಾಹನಗಳ ಖರೀದಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ.ಈ ಸಂಬಂಧ ನಗರದ ಬಹುತೇಕ ವಾಹನಗಳ ಶೋ ರೂಂಗಳಲ್ಲಿ ವಿಚಾರಿಸಿದಾಗ ಈ ವಿಷಯ ಗೊತ್ತಾಯಿತು. ವಾಹನ ಖರೀದಿಸುವವರ ಪೈಕಿ ಹೆಚ್ಚಿನ ಯುವಕರು, ಹೆಚ್ಚು ಸಿಸಿ ಇರುವ ವಾಹನಗಳನ್ನು ಇಷ್ಟಪಟ್ಟು ಖರೀದಿಸುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಮೈಲೇಜ್ ಹೆಚ್ಚಿರುವ ವಾಹನಗಳ ಖರೀದಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ.

ಕೊಂಚ ನಿಟ್ಟುಸಿರು
ಕಳೆದ ಹಲವು ವರ್ಷಗಳಿಂದ ಏರಿಕೆಯ ಹಾದಿಯಲ್ಲಿ ಮುನ್ನಡೆದಿದ್ದ ಪೆಟ್ರೋಲ್, ಡೀಸೆಲ್ ದರ ಇಳಿಕೆ ಕಂಡಿದೆ. ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿರುವುದನ್ನು ಮನಗಂಡ ರಾಜ್ಯ ಹಾಗೂ ಕೇಂದ್ರ ಸರ್ಕಾರ ತೆರಿಗೆ ಕಡಿತಗೊಳಿಸಿ, ದರ ಇಳಿಸಿರುವುರಿಂದ ಜನ ಕೊಂಚ ನಿಟ್ಟುಸಿರುವ ಬಿಡುವಂತಾಗಿದೆ.‘ಐದಾರೂ ವರ್ಷಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರ ಎರಡು ಪಟ್ಟು ಹೆಚ್ಚಾಗಿದೆ. ಈಗ ಏಳೆಂಟು ರೂಪಾಯಿ ಕಡಿಮೆ ಮಾಡಿ ಜನರಿಗೆ ದೀಪಾವಳಿ ಉಡುಗೊರೆ ಕೊಡಲಾಗಿದೆ ಎಂಬಂತೆ ಬಿಂಬಿಸಿಕೊಳ್ಳಲಾಗುತ್ತಿದೆ. ಇದು ಸರಿಯಲ್ಲ. ಇನ್ನೂ ಕನಿಷ್ಠ ₹25ರಿಂದ ₹30 ಇಳಿಕೆಯಾದರೆ ಉತ್ತಮ’ ಎಂದು ನಗರದ ನಿವಾಸಿ ಬಸವರಾಜ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.