ಹೊಸಪೇಟೆ (ವಿಜಯನಗರ): ನಗರದ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಕೊನೆಗೂ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಗೌರವಿಸಿ, ಅತಿಥಿ ಉಪನ್ಯಾಸಕರನ್ನು ಮರು ನಿಯೋಜನೆ ಮಾಡಿಕೊಂಡಿದೆ.

ಒಟ್ಟು 9 ಜನ ಅತಿಥಿ ಉಪನ್ಯಾಸಕರ ಪೈಕಿ ಆರು ಜನರಿಗೆ ಕಾರ್ಯಭಾರ, ಹಾಜರಾತಿ ಪುಸ್ತಕವನ್ನು ಶನಿವಾರ ನೀಡಿದ್ದಾರೆ. ತರಗತಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ. ತಾಂತ್ರಿಕ ಕಾರಣಗಳಿಂದ ಇನ್ನೂ ಮೂವರ ನಿಯೋಜನೆ ಆಗಬೇಕಿದೆ.
‘ನ್ಯಾಯಾಲಯದ ಆದೇಶಕ್ಕೂ ಕಿಮ್ಮತ್ತಿಲ್ಲ’. 9 ಅತಿಥಿ ಉಪನ್ಯಾಸಕರ ಮರು ನಿಯೋಜನೆಗೆ ಮೀನಮೇಷ ಶೀರ್ಷಿಕೆ ಅಡಿಯಲ್ಲಿ ಜೂ. 10ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಕಾಲೇಜು ಆಡಳಿತವು ಅತಿಥಿ ಉಪನ್ಯಾಸಕರು ಕೆಲಸ ನಿರ್ವಹಿಸಲು ಅನುವು ಮಾಡಿಕೊಟ್ಟಿದೆ.

‘ಕಾರ್ಯಭಾರ, ಹಾಜರಾತಿ ಪುಸ್ತಕ, 8 ತರಗತಿಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಿದ್ದಾರೆ. ‘ಪ್ರಜಾವಾಣಿ’ಯಿಂದ ಇದು ಸಾಧ್ಯವಾಗಿದೆ’ ಎಂದು ಮರು ನಿಯೋಜನೆಗೊಂಡ ಅತಿಥಿ ಉಪನ್ಯಾಸಕರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.