ಬಳ್ಳಾರಿ: ‘ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲೆಯ ಮಾನ, ಮರ್ಯಾದೆ ಕಳೆದವರು ಎಂದು ಇಡೀ ರಾಜ್ಯದ ಜನತೆಗೇ ಗೊತ್ತಿದೆ’ ಎಂದು ಕೆಪಿಸಿಸಿ ವಕ್ತಾರ ವೆಂಕಟೇಶ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸೋನಿಯಾ ಗಾಂಧಿ ವಿರುದ್ಧ ಶಾಸಕ ಜನಾರ್ದನ ರೆಡ್ಡಿ ಇತ್ತೀಚೆಗೆ ಟೀಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಅವರು, ‘ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮನ್ನು ಟಾರ್ಗೆಟ್ ಮಾಡಿದರು ಎಂದು ಹೇಳುವ ರೆಡ್ಡಿ ತಮ್ಮನ್ನು ತಾವು ನರೇಂದ್ರ ಮೋದಿಗಿಂತ ಪ್ರಭಾವ ಶಾಲಿ ಎಂಬಂತೆ ಭಾವಿಸಿಕೊಂಡಂತಿದೆ. ಸೋನಿಯಾ ಗಾಂಧಿ ಇಂಥವರನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಸಂಡೂರಿನಲ್ಲಿ ಬಿಜೆಪಿ ಗೆದ್ದೇ ಇಲ್ಲ ಎಂಬುದನ್ನು ಸುಳ್ಳು ಮಾಡುವ ಮಟ್ಟಕ್ಕೆ ಕೆಲಸಮಾಡೋಣ ಎಂದು ರೆಡ್ಡಿ ಹೇಳುತ್ತಿದ್ದಾರೆ. ಅಮಿತ್ ಶಾ ಅವರು ವಿಧಾನಸಭಾ ಚುನಾವಣಾ ಪ್ರಚಾರ ಆರಂಭಿಸಿದ್ದೇ ಸಂಡೂರಿನಿಂದ. ಅವರಿಗೇ ಸಂಡೂರಿನ ಜನ ಸೊಪ್ಪು ಹಾಕಲಿಲ್ಲ. ಇನ್ನು ರೆಡ್ಡಿ ಮಾತು ನಂಬುತ್ತಾರಾ’ ಎಂದು ಗೇಲಿ ಮಾಡಿದ್ದಾರೆ.

‘ಮೆಗಾ ಸಿಟಿ ಕಟ್ಟಲು ಲಕ್ಷಾಂತರ ಎಕರೆ ಭೂಮಿ ಪಡೆಯುವ ಕುರಿತು ರೆಡ್ಡಿ ಮಾತನಾಡಿದ್ದಾರೆ. ಇದೇ ರೆಡ್ಡಿ ಬ್ರಾಹ್ಮಣಿ ಸ್ಟೀಲ್ ಆರಂಭಿಸುವುದಾಗಿ ಹೇಳಿ ಮುಗ್ಧ ರೈತರಿಂದ ಸಾವಿರಾರು ಎಕರೆ ಭೂಮಿ ಕಸಿದುಕೊಂಡು ಇಂದು ಅದನ್ನು ಅನುಪಯುಕ್ತ ಭೂಮಿಯನ್ನಾಗಿ ಮಾಡಿರುವುದು ನಮ್ಮ ಜನ ಮರೆತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.