ಬಳ್ಳಾರಿ:‘ರಾಜ್ಯೋತ್ಸವದಂದು ಕನ್ನಡತಿಯರನ್ನು ಸ್ಮರಿಸಲು ಕನ್ನಡತಿ ಉತ್ಸವವವನ್ನು ಹಮ್ಮಿಕೊಂಡಿದ್ದು, ಕಿರುಚಿತ್ರೋತ್ಸವೂ ನಡೆಯಲಿದೆ’ ಎಂದು ಅವಳ ಹೆಜ್ಜೆ ತಂಡದ ಸ್ಥಾಪಕಿ ಶಾಂತಲಾ ದಾಮ್ಲೆ ತಿಳಿಸಿದರು.

ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ‘ಮಹಿಳೆಯರನ್ನು ಉತ್ತೇಜಿಸಲು ತಂಡವು ರಾಜ್ಯದಾದ್ಯಂತ ಪರಿಶೋಧನಾ ಪ್ರವಾಸ ಕೈಗೊಂಡಿದೆ. ವೃತ್ತಿರಂಗದಲ್ಲಿ ಮಹಿಳೆಯರ ಅಭಿವೃದ್ಧಿಗೆ ಇರುವ ಸಮಸ್ಯೆಗಳನ್ನು ಮೆಟ್ಡಿ ನಿಲ್ಲುವ ದಾರಿಗಳ ಕುರಿತು ಜಾಗೃತಿ ಮೂಡಿಸಲಾಗುವುದು. ಆತ್ಮವಿಸ್ವಾಸದಿಂದ ಸಾಗುವಂತೆ ಕಾಲೇಜು ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುವುದು’ ಎಂದರು.

‘ವಿವಿಧ ಕ್ಷೇತ್ರಗಳಲ್ಲಿ ಸಾಧಕಿಯರು, ಸಂಘ ಸಂಸ್ಥೆಗಳು ಮತ್ತು ಚಿಂತಕರನ್ನು ಸಂಪರ್ಕಿಸಿ ಮಹಿಳೆಯರ ಪ್ರಗತಿಗೆ ಪೂರಕವಾಗಿ ಬೆಂಬಲ ಪಡೆಯಲು ಪ್ರವಾಸ ಕೈಗೊಂಡಿದ್ದು, ಉತ್ತರ ಕರ್ನಾಟಕದ ಮಹಿಳೆಯರು ಒಂದು ಕಿರುಚಿತ್ರವನ್ನಾದರೂ ರಚಿಸಿ ಉತ್ಸವದಲ್ಲಿ ಭಾಗವಹಿಸಬೇಕು’ ಎಂದು ಹೇಳಿದರು.‘ಆಸಕ್ತರು ಅ.31ರೊಳಗಾಗಿ ಚಿತ್ರಕಥೆಯ ವಿವರದೊಂದಿಗೆ ಅರ್ಜಿ ಸಲ್ಲಿಸಬಹುದು.ಆಯ್ದ ತಂಡಗಳಿಗೆ ಅನುಭವಿ ಚಿತ್ರ ನಿರ್ಮಾಪಕರು ಮಾರ್ಗದರ್ಶನ ನೀಡಲಿದ್ದಾರೆ. ಆಯ್ದ ಕಿರುಚಿತ್ರಗಳನ್ನು "ನನ್ನದೊಂದು ಕಥೆ" ಶೀರ್ಷಿಕೆಯಡಿ ನವೆಂಬರ್‌ನಲ್ಲಿ ರಾಜ್ಯದಾದ್ಯಂತ ಪ್ರದರ್ಶಿಸಲಾಗುವುದು’ ಎಂದರು.

ಹೆಚ್ಚಿನ ಮಾಹಿತಿಗೆ www.avalahejje.in ಅಥವಾ 8217297238 ಗೆ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.