ಹರಪನಹಳ್ಳಿ: ನಟ ಝೈದ್ ಖಾನ್ ಟೀಕಿಸಿ ಮತ್ತು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ವಿವಿಧ ಪಂಗಡಗಳಿಗೆ ಅವಮಾನ ಮಾಡುವ ರೀತಿ ಪ್ರಚೋದನಕಾರಿ ಪೋಸ್ಟ್ ಹರಿಬಿಟ್ಟಿರುವ ನಮೋ ಹಿಂದೂ ಹರಪನಹಳ್ಳಿ ಹೆಸರಿನ ಖಾತೆ ರಚಿಸಿದ ವ್ಯಕ್ತಿಯ ಪತ್ತೆಗೆ ಪೊಲೀಸರು ಸ್ಥಳೀಯ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಿಸಿದ್ದಾರೆ.

2024ರ ಫೆ.2 ರಿಂದ ಫೆ.4ರ ವರೆಗೆ ನಡೆದ ಹಂಪಿ ಉತ್ಸವದ ವೇದಿಕೆಯೊಂದರಲ್ಲಿ ನಟಿ ಶರಣ್ಯ ಶೆಟ್ಟಿ ಮತ್ತು ನಟ ಝೈದ್ ಖಾನ್ ರವರು ಗೀತೆಯೊಂದಕ್ಕೆ ಸ್ಟೆಪ್ ಹಾಕಿದ್ದರು. ಅವರುಗಳ ಪೊಟೊ ಬಳಸಿಕೊಂಡು, ‘ನಟಿ ಶರಣ್ಯ ಶೆಟ್ಟಿ ಮತ್ತು ನಟ ಝೈದ್ ಖಾನ್ ಜೊತೆಗೆ ಸ್ಟೆಪ್ಸ್ ಹಾಕಿದರು ಎಂಬ ಸಂದೇಶದ ಜೊತೆಯಲ್ಲಿ ಹಾಳು ಹಂಪೆ ಮಾಡಿದ ಸಂತತಿಯನ್ನು ಕುಣಿದು ಕುಪ್ಪಳಿಸುವಂತೆ ಮಾಡುತ್ತಿರುವುದು, ಹಾಳು ಹಂಪಿ ಮಾಡಿದ ಸಂತೋಷಕ್ಕೋ?’ ಎಂದು ಸಂದೇಶ ಹಾಕಲಾಗಿದೆ ಎಂದು ಪೊಲೀಸರು ದಾಖಲಿಸಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.