ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಯಾವುದೇ ಕ್ಷಣದಲ್ಲಿ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಅಭಿಮಾನಿಗಳನ್ನು ಮತ್ತು ಜನಸಂದಣಿ ನಿಯಂತ್ರಿಸಲು ಜಿಲ್ಲಾ ಪೊಲೀಸ್ ಇಲಾಖೆ ಬಳ್ಳಾರಿ ಕೇಂದ್ರ ಕಾರಾಗೃಹದ ಬಳಿ ಭದ್ರತೆ ಹೆಚ್ಚಿಸಲಾಗಿದೆ.

ಬಳ್ಳಾರಿ ಜೈಲಿಗೆ ತೆರಳಲು ಎರಡು ಕಡೆಗಳಿಂದ ಪ್ರವೇಶವಿದೆ. ಒಂದು ದುರ್ಗಮ್ಮನ ಗುಡಿ ಕಡೆಯಿಂದ ಮತ್ತೊಂದು ಎಸ್ಪಿ ವೃತ್ತದಿಂದ. ಈ ಎರಡೂ ಪ್ರವೇಶಗಳನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಿದರು.

ತೀರ ಅಗತ್ಯವಿದ್ದವರಿಗಷ್ಟೇ ಈ ಮಾರ್ಗದಲ್ಲಿ ನಡೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಅಭಿಮಾನಿಗಳು, ಅನಗತ್ಯವಾಗಿ ಈ ಮಾರ್ಗವಾಗಿ ಓಡಾಡುವವರನ್ನು ಪೊಲೀಸರು ತಡೆಯುತ್ತಿದ್ದಾರೆ.

ಕುಟುಂಬಸ್ಥರ ಆಗಮನ: ಇಂದು ಮಧ್ಯಂತರ ಜಾಮೀನು ಅರ್ಜಿಯ ಆದೇಶ ಪ್ರಕಟವಾಗುತ್ತದೆ ಎಂದು ತಿಳಿದಿದ್ದ ದರ್ಶನ್ ಕುಟುಂಬಸ್ಥರು ಬೆಳಿಗ್ಗೆಯೇ ಬಳ್ಳಾರಿ ನಗರಕ್ಕೆ ಬಂದು ಹೋಟೆಲ್ವೊಂದರಲ್ಲಿ ಉಳಿದುಕೊಂಡಿದ್ದರು.

ಜಾಮೀನು ಆದೇಶ ಹೊರಬೀಳುತ್ತಲೇ ಜೈಲಿಗೆ ಬಂದ ಪತ್ನಿ ಮತ್ತು ಸಂಬಂಧಿಗಳು ಕೆಲಹೊತ್ತು ದರ್ಶನ್ ಜತೆಗೆ ಚರ್ಚೆ ನಡೆಸಿ ನಿರ್ಗಮಿಸಿದರು.

ನಟ ದರ್ಶನ್ ಬಿಡುಗಡೆ ಕಾರಣಕ್ಕೆ ಕೈಗೊಂಡಿರುವ ಭದ್ರತೆ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ, ‘ಜಾಮೀನಿನಲ್ಲಿ ಯಾವ ಷರತ್ತುಗಳನ್ನು ವಿಧಿಸಲಾಗಿದೆ ಎಂಬುದು ಇನ್ನು ನಮಗೆ ಗೊತ್ತಾಗಿಲ್ಲ. ಭದ್ರತೆ ಕೊಡಬೇಕು ಎಂಬುದನ್ನು ತಿಳಿಸಿದ್ದರೆ, ಆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇನ್ನುಳಿದಂತೆ ಸ್ಥಳದಲ್ಲಿ ಈಗಾಗಲೇ ಮುನ್ನೆಚ್ಚರಿಕೆಯಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದರು.

ಬಳ್ಳಾರಿ ನಗರ ಡಿಎಸ್ಪಿ ಚಂದ್ರಕಾಂತ ನಂದಾರೆಡ್ಡಿ ಸ್ಥಳದಲ್ಲೇ ಇದ್ದು ಪರಿಸ್ಥಿತಿ ಮೇಲೆ ನಿಗಾ ಇರಿಸಿದ್ದಾರೆ.
.ನಟ ದರ್ಶನ್ಗೆ ಷರತ್ತುಬದ್ಧ ಜಾಮೀನು.ನಟ ದರ್ಶನ್ಗೆ ಮಧ್ಯಂತರ ಜಾಮೀನು: ಹೈಕೋರ್ಟ್ ಷರತ್ತುಗಳೇನು?.ನಟ ದರ್ಶನ್ಗೆ ಜಾಮೀನು: ಪತ್ನಿ ವಿಜಯಲಕ್ಷ್ಮಿಯಿಂದ ವಿಶೇಷ ಪೋಸ್ಟ್.ನಟ ದರ್ಶನ್ಗೆ ಜಾಮೀನು ನೀಡದಂತೆ ಕೋರ್ಟ್ಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.