ಬಳ್ಳಾರಿ: ಕಲಬುರಗಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸಂಘಟಿತ ಪ್ರಥಮ ರಾಜ್ಯ ಮಟ್ಟದ ಸಮ್ಮೇಳನ ಮುಕ್ತಾಯಗೊಂಡಿದೆ.

ಸೆ. 13ರಿಂದ 14ರ ವರೆಗೆ ನಡೆದ ಬಹಿರಂಗ ಅಧಿವೇಶನದಲ್ಲಿ 6,000ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಪ್ರತಿನಿಧಿ ಅಧಿವೇಶನದಲ್ಲಿ ಸುಮಾರು 800ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಬಳ್ಳಾರಿ ಹಾಗೂ ವಿಜಯನಗರದಿಂದ 65 ಪ್ರತಿನಿಧಿಗಳು ಭಾಗವಹಿಸಿದ್ದರು.

ಸಮ್ಮೇಳನದ ಕೊನೆಯಲ್ಲಿ ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಯಿತು. ರಾಜ್ಯ ಅಧ್ಯಕ್ಷರಾಗಿ ಕೆ.ಸೋಮಶೇಖರ್ ಯಾದಗಿರಿ ಹಾಗೂ ರಾಜ್ಯ ಕಾರ್ಯದರ್ಶಿಯಾಗಿ ಡಿ.ನಾಗಲಕ್ಷ್ಮೀ ಅವರನ್ನು ಒಳಗೊಂಡ ಸುಮಾರು 306 ಸದಸ್ಯರ ಸಮಿತಿಯನ್ನು ರಚಿಸಲಾಯಿತು.

ಬಳ್ಳಾರಿಯಿಂದ ಎ.ಶಾಂತಾ ಹಾಗೂ ಎಂ.ಗೀತಾ ಹಾಗೂ ವಿಜಯನಗರದಿಂದ ಡಾ. ಪ್ರಮೋದ್ ಎನ್. (ರಾಜ್ಯ ಉಪಾಧ್ಯಕ್ಷ), ಬಳ್ಳಾರಿಯ ರೇಷ್ಮಾ ಹಾಗೂ ವಿಜಯನಗರದ ಗೌರಮ್ಮ ಕೆ.ಎಸ್ (ಸಹ-ಕಾರ್ಯದರ್ಶಿ), ಬಳ್ಳಾರಿಯ ರಾಜೇಶ್ವರಿ, ಅಂಬಿಕಾ, ಈರಮ್ಮ, ಮಾಣಿಕ್ಯ, ಯಶೋಧಾ, ರಾಮಕ್ಕ, ಹನುಮಂತಮ್ಮ, ಶಾಂತಮ್ಮ, ಗಿರಿಜಾ ಹಾಗೂ ವಿಜಯನಗರದ ಗೀತಾ.ಪಿ.ಎ, ವೀರಮ್ಮ, ನೇತ್ರಾವತಿ, ಮಂಗಳಾ, ಮಹೇಶ್ವರಿ, ಚೆನ್ನಮ್ಮ, ನಾಗಮ್ಮ, ಅನ್ನಪೂರ್ಣ, ವೀಣಾ ಗೌಡ, ನಾಗರತ್ನ (ರಾಜ್ಯ ಕಾರ್ಯಕಾರಿ ಸಮಿತಿ) ಆಯ್ಕೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.