ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕೆರೆ ತಾಂಡಾ ನಿವಾಸಿ ಮಂಗಳವಾರ ತಡರಾತ್ರಿ ಆಸ್ಪತ್ರೆಗೆ ಹೋಗುವಾಗ ಆಂಬುಲೆನ್ಸ್‌ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಲಕ್ಷ್ಮಿಬಾಯಿ ವೆಂಕಟೇಶ ನಾಯ್ಕ (22) ಎಂಬುವರಿಗೆ ಮಂಗಳವಾರ ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಅವರಿಗೆ ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದುವಂತೆ ಅಲ್ಲಿದ್ದವರು ಸಲಹೆ ಮಾಡಿದರು. 108 ಆಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗ ಮಾರ್ಗ ಮಧ್ಯೆ ತಡರಾತ್ರಿ 1.25ಕ್ಕೆ ಹೆಣ್ಣು ಮಗು, 2.25ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಸೇರಿದಂತೆ ಮಕ್ಕಳು ಆರೋಗ್ಯವಾಗಿದ್ದಾರೆ.

ಆಂಬುಲೆನ್ಸ್‌ನಲ್ಲೇ ಹೆರಿಗೆಗೆ ನೆರವಾದ ಸಿಬ್ಬಂದಿ ಎಸ್.ಕೆ. ಸುರೇಶ ಮತ್ತು ಚಾಲಕ ಬಾಬು ಅವರ ಪಾದಕ್ಕೆ ನಮಸ್ಕರಿಸಿ ಲಕ್ಷ್ಮಿಬಾಯಿ ಇಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.