ಕೊಟ್ಟೂರು (ವಿಜಯನಗರ ಜಿಲ್ಲೆ): ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ ಈಚೆಗೆ ಮತ್ತೆ ಬೆದರಿಕೆ ಪತ್ರ ಬಂದಿದೆ. ‘ಇಂದಲ್ಲ ನಾಳೆ ಅಧರ್ಮದಿಂದ ತುಂಬಿರುವ ನಿಮ್ಮ ಜೀವ ಎಂಬ ಅಜ್ಞಾನದ ದೀಪ ಆರುವುದು ನಿಶ್ಚಿತ’ ಎಂದು ಪತ್ರದಲ್ಲಿದೆ.

‘ಕರ್ನಾಟಕ ರಾಜ್ಯದಲ್ಲಿ ಕಂಪನ ಆಡಳಿತ ಪ್ರಾರಂಭವಾಗಿದ್ದು ಹಿಂದೂ ಸಜ್ಜನರಿಗೆ ಇದು ಸಂಕಷ್ಟದ ಸರ್ಕಾರ’ ಎಂದು ಬರೆದಿರುವುದಲ್ಲದೆ, ‘ನಿಮ್ಮಂತಹ ದುರ್ಜನ ದೇಶ ದ್ರೋಹಿಗಳಿಗೆ ಮತ್ತು ಮತಾಂಧ ಮುಸ್ಲಿಂರಿಗೆ, ಮತಾಂತರ ಕ್ರೈಸ್ತರಿಗೆ ಸಂಪ್ರಿಯ ಸರ್ಕಾರ’ ಎಂದು ಬರೆದಿದೆ.

ಪತ್ರದ ಕುರಿತು ಕುಂ.ವೀ ಅವರನ್ನು ವಿಚಾರಿಸಿದಾಗ, ‘ನನಗೆ ಇದುವರೆಗೂ ಬಂದಿರುವ ಪತ್ರಗಳಲ್ಲಿ ಇದು 16 ನೇ ಪತ್ರವಾಗಿದ್ದು ಇಂತಹ ಬೆದರಿಕೆ ಪತ್ರಗಳಿಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ ಈ ಪತ್ರಗಳು ನನಗೆ ಪ್ರೇಮ ಪತ್ರಗಳೆಂದು ಭಾವಿಸಿದ್ದೇನೆ’ ಎಂದು ತಿಳಿಸಿದರು.

ಪಟ್ಟಣದ ಪಿಎಸ್ಐ ಪತ್ರವನ್ನು ಪಡೆದುಕೊಂಡಿದ್ದು ವಿಚಾರಣೆ ಕೈಗೊಳ್ಳುವುದಾಗಿ ತಿಳಿಸಿರುವುದಾಗಿ ಕುಂ.ವೀ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.