ಹೊಸಕೋಟೆ: ‘ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತವಾದ ಚಿಂತನೆಗಳು ಹಾಗೂ ಬರಹಗಳನ್ನು ಒಳಗೊಂಡ ಧ್ವನಿ ಸುರುಳಿಯನ್ನು ಇದೇ 19ರಂದು ಕೋಲಾರ ಜಿಲ್ಲೆಯ ಮಾಲೂರಿನ ಹೊರಾಂಗಣ ಕ್ರೀಡಾಂಗಣದಲ್ಲಿ ಬಿಡುಗಡೆ ಮಾಡಲಾಗುತ್ತದೆ’ ಎಂದು ದಲಿತ ಯುವ ಮುಖಂಡ ಆನಂದ್ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಧುನಿಕ ಪ್ರಪಂಚದಲ್ಲಿ ಪುಸ್ತಕ ಓದಿಗೆ ಜನರು ಹೆಚ್ಚು ಗಮನ ಹರಿಸುತ್ತಿಲ್ಲ. ಡಿಜಿಟಲ್ ಮಾಧ್ಯಮದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬರಹಗಳು ಮತ್ತು ವಿವಿಧ ವೇದಿಕೆಯಲ್ಲಿ ಮಾಡಿರುವ ಭಾಷಣಗಳನ್ನು ಜನರಿಗೆ ಒದಗಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಅವರ ಲಕ್ಷಾಂತರ ಲೇಖನಗಳು ಇಂದಿನ ಯುವಜನತೆ ಅರಿತುಕೊಳ್ಳುವ ಅಗತ್ಯತೆ ಇದೆ. ಅದಕ್ಕಾಗಿ ಮಾಹಿತಿ ಕ್ರೋಢಿಕರಿಸಿ, ಅವುಗಳ ಧ್ವನಿ ಸುರಳಿ ಮಾಡಲಾಗಿದೆ. ಬಿಡುವಿನ ವೇಳೆ ಅದನ್ನು ಕೇಳುವಂತೆ ವಿನ್ಯಾಸ ಮಾಡಲಾಗಿದೆ ಎಂದರು.

ಇಡೀ ಪ್ರಪಂಚದಲ್ಲಿ ಅಂಬೇಡ್ಕರ್ ಅವರ ಬರಹ, ಲೇಖನ, ಭಾಷಣಗಳ ಸಂಗ್ರಹ ಭಾಗ ಆಡಿಯೊ ರೂಪದಲ್ಲಿ ಮೊಟ್ಟ ಮೊದಲ ಬಾರಿಗೆ ಪರಿಚಯ ಮಾಡಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.