ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತದ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುವುದು, ಮಳಿಗೆ ತೆರೆಯಲು ಅನುಮತಿ ನೀಡಿದ್ದ ಎಲ್ಲ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹೇಳಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಘಟನೆ ಬಗ್ಗೆ ಮಾಹಿತಿ ನೀಡಿದರು.

'ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಪಟಾಕಿ ಮಳಿಗೆ ಇದೆ. ಯಾರೆಲ್ಲ ಅನುಮತಿ ಕೊಡುವ ಪ್ರಕ್ರಿಯೆಯಲ್ಲಿ ಇದ್ದರೆಂಬುದನ್ನು ತಿಳಿಯುತ್ತೇವೆ. ಇದಕ್ಕಾಗಿ ತನಿಖೆ ನಡೆಸುತ್ತೇವೆ. ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು ಹಾಗೂ ಇತರೆ ಯಾವುದೇ ಅಧಿಕಾರಿಗಳು ಇದ್ದರೂ ಅವರ ವಿರುದ್ಧ ಕ್ರಮ ಖಚಿತ' ಎಂದರು.

'ರಾಜ್ಯದಲ್ಲಿ ಪಟಾಕಿ ಮಳಿಗೆ ಸ್ಥಾಪನೆ ನಿಯಮಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ನಿಯಮ ತಿದ್ದುಪಡಿ ಬಗ್ಗೆಯೂ ಚರ್ಚಿಸಲಾಗುವುದು' ಎಂದರು
.ಅತ್ತಿಬೆಲೆ ಪಟಾಕಿ ದುರಂತ: ಮೃತರ ಸಂಖ್ಯೆ 14ಕ್ಕೆ ಏರಿಕೆ.ಅತ್ತಿಬೆಲೆ ಪಟಾಕಿ ದುರಂತ: ಆರು ವಿದ್ಯಾರ್ಥಿಗಳು ಸೇರಿ ಒಂದೇ ಊರಿನ ಎಂಟು ಮಂದಿ ಸಾವು.ಅತ್ತಿಬೆಲೆಯ ಪಟಾಕಿ ದುರಂತ: ಬೆಳಕಿನ ಹಬ್ಬಕ್ಕೂ ಮುನ್ನವೇ ಕಮರಿದ ಜೀವಗಳು.ಅತ್ತಿಬೆಲೆಯ ಪಟಾಕಿ ದುರಂತ: ಪಟಾಕಿ ಸದ್ದಿನಲ್ಲಿ ಕೇಳಿಸದ ಕಾರ್ಮಿಕರ ಕೂಗು.ಅತ್ತಿಬೆಲೆ ಪಟಾಕಿ ದುರಂತ: ಅಂಗಡಿ ಮಾಲೀಕ, ಮಗ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.