ಆನೇಕಲ್ : ಮೂರು ವರ್ಷಗಳಿಂದ ಒಂಟಿಯಾಗಿ ಕಾಲ ಕಳೆಯುತ್ತಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದ ಹೆಣ್ಣು ಜಿರಾಫೆ ಗೌರಿ ಸಂಗಾತಿ ಇಲ್ಲದೆ ಮಂಕಾಗಿದೆ.

ಪ್ರಾಣಿ ವಿನಿಮಯ ಯೋಜನೆಯಡಿ ಬನ್ನೇರುಘಟ್ಟಕ್ಕೆ ಮೈಸೂರಿನ ಮೃಗಾಲಯದಿಂದ 2018ರಲ್ಲಿ ಗೌರಿ ಜಿರಾಫೆ ತರಲಾಗಿತ್ತು. ಎರಡು ವರ್ಷ ಏಕಾಂಗಿಯಾಗಿದ್ದ ಗೌರಿಗೆ ಮೈಸೂರಿನ ಮೃಗಾಲಯದಿಂದ ಯದುನಂದನ ಎಂಬ ಗಂಡು ಜಿರಾಫೆಯನ್ನು ಜತೆಗೂಡಿಸಲಾಗಿತ್ತು. ಆದರೆ, ಒಂದೇ ವರ್ಷದಲ್ಲಿ ಯದುನಂದನ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿತು. ಅಂದಿನಿಂದ ಮತ್ತೆ ಗೌರಿಗೆ ಒಂಟಿತನ ಬದುಕಾಯಿತು. ಸಂಗಾತಿಯಿಲ್ಲದೆ ಮಂಕಾಗಿದೆ.

ಜಿರಾಫೆಯ ವರ್ತನೆ ಗಮನಿಸಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಹಾಗೂ ಸಿಬ್ಬಂದಿ, ಗೌರಿಗೆ ಜೋಡಿ ಹುಡುಕುವ ಪ್ರಯತ್ನ ನಡೆಸಿದೆ.

ಬನ್ನೇರುಘಟ್ಟದಲ್ಲಿ ಗಂಡು ಜಿರಾಫೆಗಳಿವೆ. ಆದರೆ ಎಲ್ಲವೂ ಒಂದೇ ಕುಟುಂಬಕ್ಕೆ ಸೇರಿರುವುದರಿಂದ ಬೇರೆ ಮೃಗಾಲಯದಿಂದ ಜಿರಾಫೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಸೂರ್ಯಸೇನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.