ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಯಮ ಉಲ್ಲಂಘನೆ | ಮಣ್ಣು ಸೇರಿದ ತ್ಯಾಜ್ಯ: ಸಿಎಂಗೆ ದೂರು

ದೊಡ್ಡಬೆಳವಂಗಲದ ಎಂಎಸ್‌ಜಿಪಿ ಸಂಸ್ಥೆ ವಿರುದ್ಧ ತ್ಯಾಜ್ಯ ಸಾಗಣೆ ಗುತ್ತಿಗೆದಾರರಿಂದ ಸಿ.ಎಂ.ಗೆ ದೂರು
Published : 9 ಆಗಸ್ಟ್ 2024, 23:36 IST
Last Updated : 9 ಆಗಸ್ಟ್ 2024, 23:36 IST
ಫಾಲೋ ಮಾಡಿ
Comments
ಕೊಳವೆಬಾವಿಯಲ್ಲಿ ರಾಸಾಯನಿಕ
ಒಣಗಿರುವ ತೋಟಗಳು ಚಿಗರೇನಹಳ್ಳಿ ಗ್ರಾಮದಲ್ಲಿ ಜಪಾನ್‌ ಮಾದರಿಯ ಆಧುನಿಕ ಯಂತ್ರಗಳನ್ನು ಬಳಸಿಕೊಂಡು ಕಸವನ್ನು ಗೊಬ್ಬರವಾಗಿಸಲು 2014ರಲ್ಲಿ ಎಂಎಸ್‌ಜಿಪಿ ತ್ಯಾಜ್ಯ ಸಂಸ್ಕರಣೆ ಘಟಕ ಪ್ರಾರಂಭವಾಯಿತು. ನಂತರದ ಎರಡೇ ವರ್ಷಕ್ಕೆ ಅಂರ್ತಜಲ ಸೇರಿದಂತೆ ಸುತ್ತಮುತ್ತಲಿನ ಪರಿಸರವನ್ನೇ ನಾಶ ಮಾಡಲಾರಂಭಿಸಿತು. ಕಸದ ರಾಶಿಯಿಂದ ಹೊರಬರುವ ದ್ರವ ತ್ಯಾಜ್ಯದಿಂದ ತಣ್ಣೀರನಹಳ್ಳಿ ಗ್ರಾಮದ ರೈತರ ಕೊಳವೆ ಬಾವಿಗಳಲ್ಲಿ ರಾಸಾಯನಿಕಯುಕ್ತ ನೀರು ಬರುತ್ತಿದೆ. ಅಡಿಕೆ ಬಾಳೆ ತೋಟಗಳು ಒಣಗಿದವು. ಕುಡಿಯುವ ನೀರಿಗೆ ತತ್ವಾರ ಇಂದಿಗೂ ತಪ್ಪಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ‘ಚಿಗರೇನಹಳ್ಳಿಯಲ್ಲಿ ಎಂಎಸ್‌ಜಿಪಿ ತ್ಯಾಜ್ಯ ವಿಲೇವಾರಿ ಘಟಕದ ಅವಾಂತರ ಮಿತಿ ಮೀರಿದೆ. ಈ ಭಾಗದ ಜನರು ಜೀವನ ನಡೆಸುವುದೇ ಕಷ್ಟವಾಗಿದೆ’ ಎಂದು ದೊಡ್ಡಬೆಳವಂಗಲ ಗ್ರಾಮದ ವಿಜಯಕುಮಾರ್‌ ಸಿ.ಎಚ್‌.ರಾಮಕೃಷ್ಣ ದೂರಿದರು. ‘ಶಾಸಕರು ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳಿಗೂ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಭರವಸೆ ಇನ್ನೂ ಈಡೇರಿಲ್ಲ’ ಎಂದರು.
‘ಉಲ್ಲಂಘನೆ ಆಗಿಲ್ಲ ಯಾರಾದರೂ ತನಿಖೆ ಮಾಡಲಿ’
‘ದೇಶದಲ್ಲಿ ಸ್ವಂತ ಜಾಗದಲ್ಲಿ ಸಂಸ್ಕರಣೆ ಘಟಕ ನಡೆಸುತ್ತಿರುವ ಸಂಸ್ಥೆ ನಮ್ಮದು ಮಾತ್ರ. ಉತ್ತಮ ಗುಣಮಟ್ಟದ ಗೊಬ್ಬರವನ್ನು ಒದಗಿಸುತ್ತಿದ್ದೇವೆ. ಸರ್ಕಾರದೊಂದಿಗಿನ ಒಪ್ಪಂದದಂತೆಯೇ ನಿರ್ವಹಿಸಲಾಗುತ್ತಿದ್ದು ಕೆಲವು ಸಮಯದಲ್ಲಿ ವ್ಯತ್ಯಾಸಗಳಾಗುತ್ತವೆ. ಆರೋಪಗಳು ಸುಳ್ಳಾಗಿದ್ದು ನಮ್ಮದು ಮುಕ್ತವಾಗಿರುವ ಘಟಕ ಯಾರು ಯಾವಾಗ ಬೇಕಾದರೂ ಬಂದು ತನಿಖೆ ಮಾಡಿಕೊಳ್ಳಲಿ’ ಎಂದು ಎಂಎಸ್‌ಜಿಪಿ ಇನ್‌ಫ್ರಾಟೆಕ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ಪ‍್ರವೀಣ್‌ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT